ಮಂಗಳೂರು : ಧರ್ಮಸ್ಥಳ ಮತ್ತದರ ಧರ್ಮಾಧಿಕಾರಿಯ ಮಾನಹಾನಿ ಮಾಡುತ್ತಿರುವ ಸಾಮಾಜಿಕ ಮಾಧ್ಯಮದ ಪ್ರಭಾವಿಗಳು ಹಾಗೂ ಕಾರ್ಯಕರ್ತರಿಗೆ ಹಣಕಾಸಿನ ಸಹಾಯ ಮಾಡುತ್ತಿರುವುದರ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಜಾರಿ ನಿರ್ದೇಶನಾಲಯದಿಂದ ತನಿಖೆಗೆ ಒಳಪಡಿಸಬೇಕೆಂದು ನಾಗರೀಕ ಹಿತರಕ್ಷಣಾ ವೇದಿಕೆ ರಾಷ್ಟçಪತಿಗಳನ್ನು ಕೋರಿದೆ.
ಈ ಸಂಬAಧ ರಾಷ್ಟçಪ್ರತಿ ದ್ರೌಪದಿ ಮುರ್ಮು ಮಾತ್ರವಲ್ಲದೆ, ಕರ್ನಾಟಕದ ರಾಜ್ಯಪಾಲ ಥಾಮರ್ ಚಂದ್ ಗೆಹ್ಲೋಟ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಸಹ ಪತ್ರ ಬರೆಯಲಾಗಿದ್ದು ಈ ನಡೆಯಿಂದ `ಧರ್ಮಸ್ಥಳದ ವಿದ್ಯಮಾನ’ ಇದೀಗ ರಾಷ್ಟçಪತಿಯಾದಿಯಾಗಿ ರಾಷ್ಟçದ ಅಂಗಳಕ್ಕೆ ಮುಟ್ಟಿದೆ.
ಕರ್ನಾಟಕದ ಪ್ರತಿಷ್ಠಿತ ಪವಿತ್ರ ಯಾತ್ರಾ ಸ್ಥಳವಾಗಿರುವ ಧರ್ಮಸ್ಥಳ ನಂಬಿಕೆ, ಸೇವೆ ಮತ್ತು ಸಾಮಾಜಿಕ ಸೌಹಾರ್ದತೆಗೆ ದಶಕಗಳಿಂದಲೂ ಹೆಸರುವಾಸಿಯಾಗಿದ್ದು ಅತ್ಯುನ್ನತ ಧರ್ಮಾಧಿಕಾರಿಗಳ ಉಸ್ತುವಾರಿಯಲ್ಲಿ ಧರ್ಮಕಾಯದಲ್ಲಿ ನಿರತವಾಗಿದೆ. ಆದರೆ, ಇದೀಗ ಕೆಲ ಕಾರ್ಯಕರ್ತರು ಮತ್ತು ಸಾಮಾಜಿಕ ಮಾಧ್ಯಮದ ಪ್ರಭಾವಿಗಳು ಸತತ ಅಪಪ್ರಚಾರದ ಮೂಲಕ ಧರ್ಮಸ್ಥಳ ಮತ್ತದರ ಧರ್ಮಾಧಿಕಾರಿಗಳ ತೇಜೋವಧೆ ಮಾಡುತ್ತಿದ್ದಾರೆ. ಆ ಮೂಲಕ ಸಂಪ್ರದಾಯಸ್ಥ ಆಧ್ಯಾತ್ಮಿಕ ಪರಂಪರೆಯ ಮೇಲೆ ದಾಳಿ ನಡೆಸುವ ಮುಖೇನ ದೇಶಾದ್ಯಂತ ಇರುವ ಲಕ್ಷಾಂತರ ಸನಾತನಿಗಳ ಭಾವನೆಗಳಿಗೆ ಅಪಮಾನ ಮಾಡುತ್ತಿದ್ದಾರೆಂದು ನಾಗರೀಕ ಹಿತರಕ್ಷಣಾ ವೇದಿಕೆಯ ಕಾರ್ಯದರ್ಶಿ ಮಹವೀರ ಚಾಂದ್ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.