ಮಂಗಳೂರು : ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟವು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಾರ್ಯಾಚರಿಸುತ್ತಿದ್ದು, 751 ಹಾಲು ಸಂಘಗಳು ಮತ್ತು ಅದರಲ್ಲಿನ 155 ಬಿ.ಎಂ.ಸಿ. ಗಳಿಂದ 3.97 ಲಕ್ಷ ಲೀಟರ್ ಹಾಲು ಶೇಖರಣೆ ಮಾಡುತ್ತಿದ್ದು, ಒಕ್ಕೂಟದ ಪ್ರಗತಿಯ ವಿವರಗಳನ್ನು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬಳಿಕ ಮಾತನಾಡಿದ ಒಕ್ಕೂಟದ ಅಧ್ಯಕ್ಷರಾದ ಸುಚರಿತ ಶೆಟ್ಟಿ 2023-24 ಸಾಲಿನಲ್ಲಿ 1174 ಕೋಟಿ ಗಳಷ್ಟು ವ್ಯವಹಾರ ಮಾಡಿದ್ದು 12.79 ಕೋಟಿ ನಿವ್ವಳ ಲಾಭ ದಾಖಲಾಗಿದೆ ಎಂದು ತಿಳಿಸಿದರು. ಇದು ಅತಿ ಹೆಚ್ಚಿನ ಲಾಭದ ಸಂಸ್ಥೆ ಯಾಗಿ ವಿಶೇಷ ಸಾಧನೆ ಮಾಡಿದೆ ಎಂದರು. ಹಾಲಿನ ಶೇಖರಣೆ 2024-25 ನೇ ಸಾಲಿನಲ್ಲಿ ದಿನವಹೀವಾಟು 3.42 ಲಕ್ಷ ಲೀಟರ್ ಸಂಗ್ರಹಣೆಯಾಗಿದೆ. ಪ್ರಸ್ತುತ 2025-26 ನೇ ಸಾಲಿನಲ್ಲಿ 16% ಹಾಲು ಶೇಖರಣೆ ಪ್ರಗತಿಯಾಗಿ ದಿನವಹಿ ಸರಾಸರಿ 3.97 ಲಕ್ಷ ಲೀಟರ್ನನ್ನು ಹಾಲು ಸಂಗ್ರಹಣೆಯಾಗುತ್ತಿದೆ ಎಂದರು.
ಹಾಲು ಮತ್ತು ಮೊಸರು ಮಾರಾಟ, ಒಕ್ಕೂಟದ ಉತ್ಪನ್ನ ಮಾರಾಟ, ಕಹಾಮ ಉತ್ಪನ್ನ ಮಾರಾಟವಾಗಿದ್ದು ಒಕ್ಕೂಟವು 2024-25 ನೇ ಸಾಲಿನಲ್ಲಿ ದಿನವಹೀ 4.02 ಲಕ್ಷ ಲೀಟರ್ ಹಾಲು ಮತ್ತು ದಿನವಹೀ 81 ಸಾವಿರ ಕೆ.ಜಿ.ಯಷ್ಟು ಮೊಸರನ್ನು ಮಾರಾಟ ಮಾಡಲಾಗಿದೆ. ಒಕ್ಕೂಟದ ವ್ಯಾಪ್ತಿಯ 751 ಸಂಘಗಳ ಸುಮಾರು 55000 ಸಂಖ್ಯೆಯ ಹೈನುಗಾರ ರೈತರ ಹಿತದೃಷ್ಟಿಯಿಂದ ಸ್ಥಾಪಿಸಲಾದ ರೈತ ಕಲ್ಯಾಣ ಟ್ರಸ್ಟ್ 2024-25 ನೇ ಸಾಲಿನಲ್ಲಿ ಒಟ್ಟು ರೂ.2.05 ಕೋಟಿಯಷ್ಟು ಮೊತ್ತವನ್ನು ರೈತರ ಮರಣ, ವೈದ್ಯಕೀಯ ವೆಚ್ಚ, ರಾಸುಗಳ ಮರಣಕ್ಕೆ ಪಾವತಿಸಲಾಗಿದ ಎಂದರು.
ದ.ಕ.ಹಾಲು ಒಕ್ಕೂಟವು ರೈತರ ರಾಸುಗಳಿಗೆ ವಿಮಾ ಯೋಜನೆಯನ್ನು ಅಳವಡಿಸಿಕೊಂಡಿದ್ದು 2024-25 ನೇ ಸಾಲಿನಲ್ಲಿ ಒಕ್ಕೂಟದ ವ್ಯಾಪ್ತಿಯಲ್ಲಿ ಒಟ್ಟು 30629 ರಾಸುಗಳಿಗೆ ವಿಮೆಯನ್ನು ಮಾಡಿಸಲಾಗಿದ್ದು, 1177 ಸಂಖ್ಯೆಯನ್ನು ಕ್ಷೇಮ್ಗಳನ್ನು ನೀಡಲಾಗಿದೆ. ದಕ್ಷಿಣ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಾಹೆಯಾನ ಸರಾಸರಿ 1000 ಟನ್ಗಳೆಷ್ಟು ರಸಮೇವನ್ನು ಹಾಸನ, ಧಾರವಾಡ ಮತ್ತು ಮೈಸೂರು ಜಿಲ್ಲೆಗಗಳಿಂದ ಖರೀದಿಸಿ ರೈತರಿಗೆ ಹಾಲು ಉತ್ಪಾದಕರ ಸಂಘಗಳ ಮೂಲಕ ಮಾರಾಟ ಮಾಡಲಾಗುತ್ತಿದ್ದು, ಹಾಲು ಅಭಿವೃದ್ಧಿಯಲ್ಲಿ ಇದು ಒಂದು ಪ್ರಮುಖ ಪಾತ್ರವಹಿಸಿದೆ. ಒಕ್ಕೂಟವು ಈರೋಡ್ / ಹೊರ ಜಿಲ್ಲೆಗಳಿಂದ ರಾಸು ಖರೀದಿಸಿ ಹೈನುಗಾರರಿಗೆ ನೀಡುವ ಯೋಜನೆ ಹಮ್ಮಿಕೊಂಡಿದ್ದು, ಇದರನ್ವಯ ಒಕ್ಕೂಟದ ಒಕ್ಕೂಟದ ಪಶುವೈದ್ಯರು ಹಾಗೂ ವಿಸ್ತರಣಾಧಿಕಾರಿಗಳು ರೈತರ ಜೊತೆ ಪ್ರಯಾಣಿಸಿ ಉತ್ತಮ ರಾಸುಗಳನ್ನು ಖರೀದಿಸಲಾಗುತ್ತಿದೆ. ಈ ರಾಸುಗಳ ಸಾಗಾಣಿಕೆ ಹಾಗೂ ವಿಮಾ ವೆಚ್ಚವನ್ನು ಒಕ್ಕೂಟವೇ ಭರಿಸುತ್ತಿದೆ. 2024-25 ನೇ ಸಾಲಿನಲ್ಲಿ ಒಟ್ಟು 229 ಮತ್ತು 25-26 ನೇ ಸಾಲಿನಲ್ಲಿ ಈವರೆಗೆ ಒಟ್ಟು 130 ರಾಸುಗಳನ್ನು ಖರೀದಿಸಲಾಗಿದೆ ಎಂದರು.
2024-25 ನೇ ಸಾಲಿನಲ್ಲಿ ಹಸಿರು ಹುಲ್ಲು ಅಭಿವೃದ್ಧಿ, ಹುಲ್ಲು ಕತ್ತರಿಸುವ ಯಂತ್ರ ಖರೀದಿಗೆ ಅನುದಾನ, ಮಿನಿಡೇರಿ, ಯೋಜನೆ, ಅನಿಲ ಸ್ಥಾವರ ಅಭಿವೃದ್ಧಿ, ಸ್ಲರಿ ಪಂಪು ಖರೀದಿಗೆ ಅನುದಾನ, ಹಾಲು ಕರೆಯುವ ‘ಯಂತ್ರ ಖರೀದಿಗೆ ಅನುದಾನ, ಹಟ್ಟಿ ತೊಳೆಯುವ ಯಂತ್ರ ಖರೀದಿಗೆ ಅನುದಾನ, ವಿಚಾರ ಗೋಷ್ಠಿ ನಡೆಸಲು ಅನುದಾನ, ಹೊರ ರಾಜ್ಯದ ರಾಸು ಖರೀದಿಗೆ ಅನುದಾನ, ರಬ್ಬರ ಮ್ಯಾಟ್ ಖರೀದಿಗೆ ಅನುದಾನ, ವಾಣಿಜ್ಯ ಡೇರಿ ಘಟಕಕ್ಕೆ ಅನುದಾನ ಒಟ್ಟು ವಿವಿಧ ಯೋಜನೆಗಳಿಗೆ ರೂ.2.60 ಕೋಟಿಗಳನ್ನು ಅನುದಾನದ ರೂಪದಲ್ಲಿ ನೀಡಲಾಗಿದೆ. ದಿನಾಂಕ 01.04.2025 ರಿಂದ 3.5% ಫ್ಯಾಟ್ ಮತ್ತು 8.5% ಎಸ್.ಎನ್.ಎಫ್.ಗೆ ಒಕ್ಕೂಟದಿಂದ ಸಂಘಗಳಿಗೆ ರೂ.40.30 ಹಾಗೂ ಸಂಘಗಳಿಂದ ಉತ್ಪಾದಕರಿಗೆ ರೂ.39.00 ನೀಡಲಾಗುತ್ತಿದೆ. ಪ್ರಸ್ತುತ ಒಕ್ಕೂಟದಲ್ಲಿ 4.4% ಫ್ಯಾಟ್ ಮತ್ತು 8.5% ಎಸ್.ಎನ್.ಎಫ್. ನ ಹಾಲು ರೈತರಿಂದ ಖರೀದಿಯಾಗುತ್ತಿದ್ದು, ಇದಕ್ಕೆ ಒಕ್ಕೂಟವು ಸಂಘಗಳಿಗೆ ರೂ. 42.06 ಹಾಗೂ ಉತ್ಪಾದಕರಿಗೆ ರೂ.40.76 ಗಳನ್ನು ಪಾವತಿಸುತ್ತಿದೆ ಎಂದರು.
ದಿನಾಂಕ 16.09.2025 ರಂದು ಉಭಯ ಜಿಲ್ಲೆಯ ಎಲ್ಲಾ 751 ಹಾಲು ಉತ್ಪಾದಕರ ಸಹಕಾರಿ ಸಂಘಗಳಲ್ಲಿ ರಾಸುಗಳ ಒಳ ಮತ್ತು ಹೊರ ಪರೋಪ ಜೀವಿಗಳ ನಿರ್ಮೂಲನೆಗೆ ಸಾಮೂಹಿಕ ಜಂತುಹುಳ ನಿವಾರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ಒಕ್ಕೂಟದಿಂದ ರೂ.8.0 ಲಕ್ಷ ಅನುದಾನವನ್ನು ನೀಡಲಾಗುತ್ತಿದೆ. ಉತ್ಕೃಷ್ಟ ದಾನಿ ಹಸುವಿನಿಂದ ಸಂಗ್ರಹಿಸಿದ ಅಂಡಾಣು ಮತ್ತು ಉತ್ಕೃಷ್ಟ ತಳಿಯ ಲಿಂಗ ವರ್ಗೀಕೃತ ವೀರಾಣುಗಳನ್ನು ಪ್ರಯೋಗ ಶಾಲೆಯಲ್ಲಿ ಫಲೀಕರಿಸಿ, ಇಂತಹ ಭ್ರೂಣಗಳನ್ನು ಸದಸ್ಯ ರೈತರ ಆಯ್ದ ರಾಸುಗಳಿಗೆ ವರ್ಗಾಯಿಸಲಾಗುವುದು ಎಂದು ಹೇಳಿದರು.
ಬಳಿಕ 12 ಮುಂದಿನ ಯೋಜನೆಗಳ ಬಗ್ಗೆ ಮಾಹಿತಿಯನ್ನು ರವಿರಾಜ್ ಹೆಗ್ಡೆಯವರು ನೀಡಿದ್ದಾರೆ. ಒಕ್ಕೂಟಕ್ಕೆ ಲಾಭದಾಯಕವಾಗುವ ನೂತನ ಮೌಲ್ಯವರ್ಧಿತ ಉತ್ಪನ್ನಗಳಾದ Guava Chilly Lassi, Nandini Seeds Magic Ladoo, Protien Panner, Nandini Protien Punch ಮತ್ತು whey Drinks ಗಳನ್ನು ಉತ್ಪಾದನೆ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ ಎಂದರು.
ಮಂಗಳೂರು ಮತ್ತು ಉಡುಪಿ ಡೇರಿಯ ಬಳಕೆಗೆ ಅಗತ್ಯವಿರುವ ನೀರನ್ನು ಸಮೀಪದ ನೀರಿನ ಒರತೆಯಿರುವ ಸ್ಥಳವನ್ನು ಖರೀದಿಸಲು ಯೋಜಿಸಲಾಗಿದ್ದು
ಪನ್ನೀರ್ ಉತ್ಪನ್ನವನ್ನು ಆಕರ್ಷಕವಾದ ನೂತನ Vaccumaized Thermoforming ಯಂತ್ರವನ್ನು ಖರೀದಿಸಿ ಪನ್ನೀರ್ ಬಿಡುಗಡೆ ಮಾಡಲು ಯೋಜಿಸಲಾಗಿದೆ ಎಂದರು.
ಉಡುಪಿ ಡೇರಿ ಆವರಣದಲ್ಲಿ ನೂತನ ಆಡಳಿತ ಕಛೇರಿ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿ ಉದ್ಘಾಟನೆ ಮಾಡಲಾಗುವುದು. ಮುಂದುವರೆದು ಪ್ರಸ್ತುತ ಕಛೇರಿ ಇರುವ ಪ್ರದೇಶದಲ್ಲಿ ನೂತನ ಸಿಹಿ ಉತ್ಪನ್ನಗಳ ಉತ್ಪಾದನೆಯನ್ನು ಆರಂಭಿಸಲು ಯೋಜಿಸಲಾಗಿದೆ. ಉಡುಪಿ ಡೇರಿಯ ಬಳಕೆಗೆ ಅಗತ್ಯವಿರುವ ನೀರನ್ನು ವಾರಾಹಿ ಯೋಜನೆಯಿಂದ ಪೈಪ್ಲೈನ್ ಆಳವಡಿಸಲು ಕ್ರಮವಿಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಉದಯ ಕೋಟ್ಯಾನ್,ದೇವಿ ಪ್ರಸಾದ್ ಶೆಟ್ಟಿ,ಪ್ರಭಾಕರ್ ,ಚಂದ್ರಶೇಖರ್ ಹಾಗೂ ಮಮತಾ ಶೆಟ್ಟಿಯವರು ಉಪಸ್ಥಿತರಿದ್ದರು.


