Saturday, January 17, 2026
Flats for sale
Homeಜಿಲ್ಲೆಮಂಗಳೂರು : ದ.ಕ ಜಿಲ್ಲೆಯ ಸಂಸ್ಕ್ರತಿ,ಕಲೆಯನ್ನು ಉಳಿಸಲು ಕೈಜೋಡಿಸಬೇಕಾಗಿದೆ : ಧಾರ್ಮಿಕ ಆಚರಣೆಗಳಿಗೆ ತಡೆ ವಿರೋಧಿಸಿ...

ಮಂಗಳೂರು : ದ.ಕ ಜಿಲ್ಲೆಯ ಸಂಸ್ಕ್ರತಿ,ಕಲೆಯನ್ನು ಉಳಿಸಲು ಕೈಜೋಡಿಸಬೇಕಾಗಿದೆ : ಧಾರ್ಮಿಕ ಆಚರಣೆಗಳಿಗೆ ತಡೆ ವಿರೋಧಿಸಿ ಬೃಹತ್ ಜನಾಗ್ರಹ ಸಭೆಯಲ್ಲಿ ವಿಜಯ್ ಕುಮಾರ್ ಕೋಡಿಯಾಲ್ ಬೈಲ್…!

ಮಂಗಳೂರು ; ವಿಶ್ವ ಹಿಂದೂ ಪರಿಷದ್ ಹಾಗೂ ತುಳುನಾಡ ಧಾರ್ಮಿಕ ಸಾಂಸ್ಕೃತಿಕ ವೈಭವ ಸಂರಕ್ಷಣಾ ಸಮಿತಿ, ದ.ಕ. ಜಿಲ್ಲೆ ನೇತೃತ್ವದಲ್ಲಿ ರಂಗಭೂಮಿ ಕಲಾವಿದರು, ಯಕ್ಷಗಾನ ಕಲಾವಿದರು, ದೈವ ನರ್ತಕರು, ತುಳು ಚಿತ್ರರಂಗ ಕಲಾವಿದರು, ಸಂಗೀತ ಗಾಯಕರು, ನಿರೂಪಕರು, ಫೋಟೋಗ್ರಾಫರ್, ಸಾರ್ವಜನಿಕ ಗಣೇಶೋತ್ಸವ ಸಮಿತಿ, ಸಾರ್ವಜನಿಕ ಶಾರದೋತ್ಸವ ಸಮಿತಿ ಮತ್ತು ಎಲ್ಲಾ ಸಂಘ ಸಂಸ್ಥೆಗಳ ಕಾರ್ಯಕ್ರಮ ಸಂಘಟಕರು ಕಾನೂನಿನ ನೆಪದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಗಳಿಗೆ ತಡೆಯೊಡ್ಡುವ ಜಿಲ್ಲಾಡಳಿತ ಕ್ರಮವನ್ನು ವಿರೋಧಿಸಿ ಬೃಹತ್ ಜನಾಗ್ರಹ ಇಂದು ಗೋರಕ್ಷನಾಥ ಮಂದಿರ, ಕದ್ರಿ ಪಾರ್ಕ್ ನಲ್ಲಿ ನಡೆಯಿತು.

ತುಳುನಾಡಿನ ಸಂಸ್ಕೃತಿ ಪರಂಪರೆ ಉಳಿಸುವ ಜೊತೆಗೆ ಈ ಕ್ಷೇತ್ರಗಳಲ್ಲಿ ವೃತ್ತಿ ಜೀವನವನ್ನು ತೊಡಗಿಸಿಕೊಂಡಿರುವ ಸಾವಿರಾರು ಕುಟುಂಬಗಳಿಗೆ ನ್ಯಾಯ ಒದಗಿಸುವ ಸಲುವಾಗಿ ಈ ಬೃಹತ್‌ ಜನಾಗ್ರಹ ಸಭೆಯಲ್ಲಿ ನಡೆಯಿತು.

ಬಳಿಕ ಮಾತನಾಡಿದ ಕಟೀಲು ಹರಿನಾರಾಯಣ ಅಸ್ರಣ್ಣ 10.30 ಗಂಟೆಯ ಮೇಲೆ ಧಾರ್ಮಿಕ ಕಾರ್ಯಕ್ರಮ ಮಾಡಬಾರದೆಂಬುದು ಎಂಬುದೆ ಖೆದಕರ ಮೊದಲಿನ ಭಾರತೀಯ ಸಂಸ್ಕೃತಿಯಲ್ಲಿ ಜಾಗರಣೆಯಲ್ಲಿ ಕುಳಿತುಕೊಳ್ಳುವುದು ಸನಾತನ ಸಂಸ್ಕೃತಿ.ನಮ್ಮಲ್ಲಿ ನಡೆಯುವಂತಹದು ಕಲಾ ಕಾರ್ಯಕ್ರಮ, ಭಗವಂತನನ್ನು ತರುವಂತಹ ಕಾರ್ಯಕ್ರಮವೆ ಕಲಾ ಕಾರ್ಯ, ಭಗವಂತನನ್ನು ಕಾಣಿಸುವಂತಹ ಕಾರ್ಯ ಶಾಸ್ರಕ್ಕೆ ಯೋಗ್ಯವಾದಂತಹ ಕಾನೂನನ್ನು ಜಾರಿಗೊಳಿಸಿ ಅದು ಬಿಟ್ಟು ಹಿಂದೂ ಸಂಸ್ಕೃತಿಯ ನಂಬಿಕೆಯನ್ನು ಉಳಿಸಿ ಎಂದರು.

ಜಿಲ್ಲಾಡಳಿತ ಈ ಮೊದಲೇ ತಿಳಿಸುತ್ತದ್ದರೆ ಸಾಲ ಮಾಡಿ ಸೌಂಡ್ ಸಿಸ್ಟಮ್‌ ಗಳನ್ನು ತೆಗೆಯುತ್ತಿರಲಿಲ್ಲ,ಸರಕಾರ ಯಾವುದೇ ಕಾನೂನಿನ ಚೌಕಟ್ಟಿನ ಅನ್ವಯ ಈ ಕಾರ್ಯ ನಡೆಸಿಲ್ಲ ,ಅವರ ಮನಬಂದಂತೆ ಸಭಾ ಕಾರ್ಯ ಕ್ರಮಕ್ಕೆ ನುಗ್ಗಿ ಸೀಜ್ ಮಾಡುತ್ತಿರುವುದು ಖೆದಕರ ಎಂದು ದ.ಕ ಜಿಲ್ಲೆಯ ಸೌಂಡ್ ಆಂಡ್ ಲೈಟ್ ಸಂಘದ ಅಧ್ಯಕ್ಷರು ತಿಳಿಸಿದರು.

ಡಾ. ದೇವಾದಾಸ್ ಕಾಪಿಕಾಡ್ ಮಾತನಾಡಿ ಕಲಾವಿದರಿಗೆ ಆತಂಕ ದ ವಾತವರಣ ಸೃಷ್ಟಿಯಾಗಿದೆ.ಇದು ಸಾಂಸ್ಕೃತಿಕ ವೇದಿಕೆಗೆ ಆದ ಅಡ್ಡಿ, ದ.ಕ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾದಲ್ಲಿಯೂ ಕಾರ್ಯಕ್ರಮ ನಡೆಯುವಾಗ ನಿರ್ಭಂದಿಸಿದ್ದು,ಆದರಿಂದ ಜಿಲ್ಲೆಗೆ ಹೃದಯವಂತ ಕಲಾವಿದ ಅಧಿಕಾರಿಗಳನ್ನು ನೇಮಿಸಿ ಎಂದರು.ನಾವು ಪವಿತ್ರ ದೈವ ದೇವರುಗಳು ನೆಲೆಸಿದಂತ ತುಳುನಾಡಿನಲ್ಲಿ ಇದ್ದೇವೆ ಆ ದೇವರ ಕಾರ್ಣಿಕದಿಂದ ಮುಂದಿನ ದಿನಗಳಲ್ಲಿ ಇಂತಹ ಕಾನೂನು ತೊಡಿಕಿನ ಸಮಯ ಬರುತ್ತದೆ ಎಂದರು.

ಬಳಿಕ ಮಾತನಾಡಿದ ಯಕ್ಷಧ್ರುವ ಸತೀಶ್ ಪಟ್ಲ ರವರು ಕರಾವಳಿಗೆ ಈಗ ತುರ್ತು ಪರಿಸ್ಥಿತಿ ಬಂದಿದೆ ಎಂದರು,ಯಾರ ಧಾರ್ಮಿಕ ಭಾವನೆಗಳಿಗೆ ತೊಂದರೆಯಾಗಬಾರದು,ಧಕ್ಕೆ ಯಾಗಬಾರದು,ಸುಪ್ರಿಂ ಕೋರ್ಟ್ ೨೦ ವರ್ಷಗಳ ಹಿಂದೆಯೆ ಆದೇಶಕೊಟ್ಟಿತ್ತು ನಾವು ಆದೇಶವನ್ನು ಪಾಲಿಸಿದ್ದೇವೆ. ಆದರೆ ಜಿಲ್ಲೆಯಲ್ಲಿ ಸೌಹಾರ್ದ ವನ್ನು ಕೆಡಿಸುವಂತಹ ಕಾರ್ಯ ಯಾರು ಮಾಡಿದ್ದಾರೆ, ಉದಾಹರಣೆ ಇದ್ದರೆ ಕೊಡಿ ಎಂದರು. ಮುಂದಿನ ದಿನಗಳಲ್ಲಿ ತಾಸೆ ಇಲ್ಲದೆ ಕೋಲ ,ಚಂಡೆಇಲ್ಲದೆ ಜಾತ್ರೆ ನಡೆಯಲು ಸಾಧ್ಯನ, ಇದು ಧಾರ್ಮಿಕತೆಗೆ ಮಸಿ ಬಳಿವಂತಹ ಕಾರ್ಯ ಜಿಲ್ಲಾಡಳಿತ ಮಾಡುತ್ತದೆ ಎಂದರು.ಇದರ ನೇರ ಹೊಣೆ ಸರಕಾರ ಹರಿಸಬೇಕು ಎಂದರು.ನಾವೆಲ್ಲ ಒಟ್ಟು ಸೇರಿ ಈ ಕಾನೂನಿನ ವಿರುದ್ಧ ಸಮರಸಾರಬೇಕು ಇದು ಸಂಸ್ಕ್ರತಿಯ ದಬ್ಬಾಳಿಕೆ ಎಂದು ಹೇಳಿದರು,ಇದಿ ಮುಂದೆ ಪುನಾರವರ್ತಿತವಾದರೆ ಮುಂದೊಂದು ದಿನ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದರು.

ವಿಜಯ್ ಕುಮಾರ್ ಕೋಡಿಯಾಲ್ ಬೈಲ್ ಮಾತನಾಡಿದ್ದು ಒಂದು ಕಾರ್ಯಕ್ರಮ ನಡೆಯಬೇಕಾದರೆ ಕುಟುಂಬದಂತೆ ಸೌಂಡ್, ಶಾಮಿಯಾನ, ಹೂ,ಎಲ್ಲಾ ಬೇಕಾಗುತ್ತದೆ.ಇಂದು ಎಲ್ಲಾ ಕುಟುಂಬಸ್ಥರು ಇಲ್ಲಿ ಸೇರಿರುವುದು ಸಂತಸ ಎಂದರು. ತುಳುನಾಡನ್ನು ಒಂದು ಪ್ರಯೋಗ ಶಾಲೆಯಾಗಿ ಉಪಯೋಗಿಸುತ್ತಿದ್ದಾರೆ ಎಂಬುದು ಬೇಸರದ ಸಂಗತಿ. ಸಭಾ ಕಾರ್ಯಕ್ರಮ ವಿಲ್ಲದಿದ್ದರೆ ಬೇರೆ ಕಾರ್ಯಕ್ರಮ ನಡಯಲು ಸಾಧ್ಯವಿಲ್ಲ, ಇಂದು ದ.ಕ ಜಿಲ್ಲೆಯ ಕಲಾವಿದರಿಂದ ರಾಜ್ಯದಲ್ಲಿ ಮುಚ್ಚಿದ್ದ ಚಿತ್ರಮಂದಿಗಳನ್ನು ತೆರೆಯುವಂತಹ ತಾಕತ್ತು ಜಿಲ್ಲೆಯವರಿಗೆ ಇದೆ ,ನಾವು ಜಿಲ್ಲಾಡಳಿತ ಮುಂದಿನ ಕಾನೂನನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಕಠೀಣಗೊಳಿಸುವ ಮೊದಲು ಎಚ್ಚೆತ್ತು ಉಗ್ರ ಹೋರಾಟಕ್ಕೆ ತಯಾರಾಗಬೇಕು ಎಂದು ಹೇಳಿದರು.

ಬಳಿಕ ವೇದಿಕೆಯಲ್ಲಿ ಜಿಲ್ಲೆಯ ಶಾಸಕರಿಗೆ ವೇದಿಕೆಯಲ್ಲಿರುವ ಗಣ್ಯರು ಮನವಿಯನ್ನು ಸಲ್ಲಿಸಿದರು.

ವೇದವ್ಯಾಸ್ ಕಾಮತ್ ರವರು ಮಾತನಾಡಿದ್ದು ಇಂತಹ ವಾತಾವರಣದಲ್ಲಿ ಜನಗ್ರಹ ಸಭೆ ಮಾಡುತ್ತಿದೆವೆ ಎಂಬುದು ಬೇಸರದ ಸಂಗತಿ,ಕೃಷ್ಣ ವೇಷ ಹಾಕಿ ಸ್ಪರ್ಧೆ ಗೆ ತಯಾರಾಗಿ ವೇದಿಕೆಯಲ್ಲಿ ಗಂಟೆಗಟ್ಟಲೆ ಕಾಯುತ್ತಿದ್ದ ಸಂದರ್ಭದಲ್ಲಿ ತಾಯಾಂದಿರು ಕಾಯುತ್ತಿರುವಾಗ ಕಾರ್ಯಕ್ರಮ ನಿಲ್ಲಿಸಿರುವದು ಕಣ್ಣೀರು ತರಿಸಿದೆ.ನಮ್ಮ ಧಾರ್ಮಿಕ ಚಿಂತನೆ ಗಳಿಗೆ ಅಡ್ಡಿಯಾಗುತ್ದೆಂದರೆ ನಾವು ಸಹಿಸಲು ಸಾಧ್ಯವಿಲ್ಲ, ನಾವು ನಮ್ಮ ಪ್ರಾಣವನ್ನು ಬೇಕಾದರೆ ಬಿಡುತ್ತೇವೆ ನಮ್ಮ ನಂಬಿಕೆಯನ್ನು ಬಿಡುವುದಿಲ್ಲ ಎಂದರು.ಇಂದು ಸೇರಿದ ಒಗ್ಗಟ್ಟು ಮುಂದೊಂದು ದಿನ ಬೃಹತ್ ಪ್ರತಿಭಟನೆಗೆ ತಯಾರಾಗಿರಬೇಕು,ನಮ್ಮ ಸಂಸ್ಕ್ರತಿ ನ್ನು ಉಳಿಸುವ ಕಾರ್ಯದಲ್ಲಿ ತೊಡಗಿಸಬೇಕು ಎಂದರು.

ಸುರತ್ಕಲ್ ಶಾಸಕ ಡಾ.ಭರತ್ ಶೆಟ್ಟಿ ಮಾತನಾಡಿ ಇದು ನಮ್ಮ ಜಿಲ್ಲೆಯ ಸಂಸ್ಕ್ರತಿಯ ಅಳಿವು ಉಳಿವಿನ ಪ್ರಶ್ನೆ,ನಾವು ಕಾರ್ಯಕ್ರಮದ ಭಕ್ತಿ ಭಾವದಿಂದ ಜಾಸ್ತಿ ಯಾಗಿ ಇಲಾಖೆ ಯಾವಾಗ ಬಂದು ಬಂದ್ ಮಾಡ್ತಾರೋ ಎಂಬ ಭಯ ಸುರುವಾಗಿದೆ,ಮುಂದಿನ ದಿನ ಮುಖ್ಯಮಂತ್ರಿ, ಗೃಹ ಮಂತ್ರಿ ಗಳನ್ನು ಬೇಟಿಯಾಗಿ ನಿರ್ಬಂಧ ಸಡಿಲಿಸಲು ಮನವಿಮಾಡುತ್ತೆವೆ ಎಂದು ಹೇಳಿದರು.

ವೇದಿಕೆಯಲ್ಲಿ ಕಟೀಲು ಪ್ರಕಾಶ್, ವಿಜಯ್ ಕುಮಾರ್ ಕೋಡಿಯಾಲ್ ಬೈಲ್,ಎಂಬಿ ಪುರಾಣಿಕ್,ಸತೀಸ್ ಪಟ್ಲ, ಲಕ್ಷ ಣ್ ಕುಮಾರ್ ಮಲ್ಲೂರು. ಬೋಜಾರಾಜ್ ವಾಮಾಂಜೂರು, ಧನ್ ರಾಜ್ ಶೆಟ್ಟಿ, ಅರವಿಂದ್ ಬೋಳಾರ್,ದಯಾನಂದ ಕತ್ತಲ್ ಸರ್,ಶರಣ್ ಪಂಪ್ ವೆಲ್,ಲಯನ್ ಕಿಶೋರ್ ಡಿ.ಶೆಟ್ಟಿ,ಭಾಸ್ಕರ ಚಂದ್ರ ಶೆಟ್ಟಿ ಹಾಗೂ ಪಮ್ಮಿ ಕೋಡಿಯಾಲ್ ಬೈಲ್,ಗೋಕುಲ್ ಕದ್ರಿ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular