ಮಂಗಳೂರು : ಯಾರೇ ಆಗಲಿ ಎಲ್ಲರಿಗೆ ಒಂದೇ ಕಾನೂನು ಎಂ ಎಲ್ ಎ,ಎಂಪಿ ಎಲ್ಲರಿಗೂ ಕಾನೂನು ಒಂದೇ ಅಪರಾಧ ಯಾರೇ ಮಾಡಿದ್ರು ಅಪರಾಧನೇ ಎಂದು ಮಂಗಳೂರು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಸುಹಾಸ್ ಶೆಟ್ಟಿ ಹಾಗು ಕುಡುಪು ಅಶ್ರಫ್ ಕೊಲೆ ಪ್ರಕರಣಕ್ಕೆ ಮಂಗಳೂರು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟನೆ ನೀಡಿದ್ದು ಜಿಲ್ಲೆಯಲ್ಲಿ ನಡೆದ ಸುಹಾಸ್ ಶೆಟ್ಟಿ ಹಾಗು ಅಶ್ರಫ್ ಕೊಲೆ ಪ್ರಕರಣದಲ್ಲಿ ಅನೇಕ ಸಾಕ್ಷಿಗಳನ್ನು ಕಲೆ ಹಾಕಿದ್ದೇವೆ ಈ ಎರಡು ಪ್ರಕರಣದಲ್ಲಿ ಅನೇಕ ಮಂದಿಯನ್ನು ವಿಚಾರಣೆ ಯನ್ನು ಮಾಡಲಾಗಿದೆ ಸುಹಾಸ್ ಶೆಟ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಸಿಸಿ ಕ್ಯಾಮರಾಗಳ ಪರಿಶೀಲನೆಯಾಗಿದೆ ಈ ಪೈಕಿ ಸ್ಥಳದಲ್ಲಿದ್ದವರನ್ನು ಬಂಧಿಸಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆದಿದೆ ಈ ಬಗ್ಗೆ ಎಲ್ಲರ ವಿಚಾರಣೆಯು ನಡೆದಿದೆ ಎಂದರು. ಸುಹಾಸ್ ಶೆಟ್ಟಿ ಕೊಲೆ ನಡೆದ ಸಂದರ್ಭದಲ್ಲಿ ೪ ಕಾರುಗಳು ಹಿಂಬಾಲಿಸಿದ್ದು ಕೊಲೆನಡೆದ ಬಳಿಕ ಆ ಎರಡು ಮಹಿಳೆಯಾರನ್ನು ವಿಚಾರಣೆ ಮಾಡಿದ್ದೇವೆ ಎಂದು ಹೇಳಿದರು.ಬಳಿಕ ಸುಹಾಸ್ ಶೆಟ್ಟಿಯ ಹತ್ಯೆಯ ಸಂದರ್ಭದಲ್ಲಿ ಯಾವೆಲ್ಲ ಸ್ಥಳಗಳಲ್ಲಿ ಕಾರು ಹಾಗೂ ಇನ್ನಿತರ ವಾಹನಗಳಿಂದ ಹಿಂಬಾಲಿಸುತ್ತಿರುವ ಸಿಸಿ ಟಿವಿ ಫೂಟೇಜ್ ಅನ್ನು ತೋರಿಸಿದ್ದಾರೆ.
ಇನ್ನೂ ಅಶ್ರಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಯ ನಿಕ್ಷ್ಪಕ್ಷಪಾತವಾಗಿ ತನಿಖೆ ನಡೆದಿದ್ದು ಈಪೈಕಿ 125 ಜನರನ್ನು ವಿಚಾರಣೆ ಮಾಡಲಾಗಿದೆ ಜೊತೆಗೆ ತನಿಖೆಯನ್ನು ಪಾರದರ್ಶಕವಾಗಿ ನಡೆಸುತ್ತಿದ್ದೇವೆ ಬೇರೆಯವರ ಮೇಲೆ ಆರೋಪ ಮಾಡುವವರು ಸಾಕ್ಷಿ ಸಮೇತ ಬನ್ನಿ ನಾವು ಪರಿಗಣಿಸುತ್ತೇವೆ ಎಂದರು. ಇನ್ನೂ ದ್ವೇಷ ಭಾಷಣ ಮಾಡುವವರ ಮೇಲೂ ಕ್ರಮ ಕೈಗೊಳುತ್ತೆವೆ ಇಂತವರನ್ನು ಭಾಷಣ ಮಾಡುವ ವೇದಿಕೆಯಿಂದಲೆ ಕರೆತರುವ ಅವಕಾಶ ಇದೆ ಬಿ ಏನ್ ಎಸ್ ಕಾಯ್ದೆಯ ಪ್ರಕಾರ ಆರೋಪಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದರು ಅಪರಾಧ ಎಂದು ಮಂಗಳೂರು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ.