ಮಂಗಳೂರು : ವಾಹನ ಕಳ್ಳತನ ಆರೋಪದ ಮೇಲೆ ತೊಕ್ಕೊಟ್ಟು ಕಾಪಿಕಾಡ್‌ನ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಶನೀಜ್ (23) ಬಂಧಿತ ಆರೋಪಿ. ಆತನಿಂದ 1.01 ಲಕ್ಷ ಮೌಲ್ಯದ ಎರಡು ಸ್ಕೂಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಂಕನಾಡಿ ಮತ್ತು ಬೆಂದೋರ್‌ವೆಲ್ ಪ್ರದೇಶದಿಂದ ಎರಡು ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ ಪ್ರಕರಣಗಳ ತನಿಖೆಯ ಸಂದರ್ಭದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಪಂಪ್‌ವೆಲ್ ಮೇಲ್ಸೇತುವೆಯಲ್ಲಿ ನಂಬರ್ ಪ್ಲೇಟ್ ಇಲ್ಲದ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಶನೀಜ್‌ನನ್ನು ಪೊಲೀಸರು ಅನುಮಾನಾಸ್ಪದವಾಗಿ ತಡೆದಿದ್ದಾರೆ.


