Wednesday, March 11, 2026
Flats for sale
Homeಜಿಲ್ಲೆಮಂಗಳೂರು: ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಟಿಪ್ಪರ್,ಓರ್ವ ಸಾವು.

ಮಂಗಳೂರು: ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಟಿಪ್ಪರ್,ಓರ್ವ ಸಾವು.

ಮಂಗಳೂರು : ಟಿಪ್ಪರ್ ಟ್ರಕ್ ಮತ್ತು ಎರಡು ದ್ವಿಚಕ್ರವಾಹನಗಳ ನಡುವೆ ಭೀಕರ ಡಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ನ.21ರ ಮಂಗಳವಾರದಂದು ಎನ್.ಎಚ್.169ರ ಗುರುಪುರ ಪದವಿ ಪೂರ್ವ ಕಾಲೇಜು ಬಳಿ ನಡೆದಿದೆ.

ಮೃತರನ್ನು ಅಡ್ಡೂರಿನ ಡಿ ಎಸ್ ರಹೀಮ್ (55) ಎಂದು ಗುರುತಿಸಲಾಗಿದೆ. ಅಡ್ಡೂರು ಕಡೆಗೆ ತೆರಳುತ್ತಿದ್ದ ವೇಳೆ ಟಿಪ್ಪರ್ ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ರಹೀಮ್ ತಲೆಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ.

ರಹೀಮ್ ಅವರು ಕಟ್ಟಡ ನಿರ್ಮಾಣ ಸಾಮಗ್ರಿ ವಸ್ತುಗಳ ವ್ಯವಹಾರ ಮಾಡುತ್ತಿದ್ದು ಹಾಗೂ ಅಡ್ಡೂರಿನ ಸಹಾರಾ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಸಮಿತಿಯ ಸದಸ್ಯರಾಗಿದ್ದರು. ಅವರು ಕಾಂಜಿಲ ಕೋಡಿ ಬದ್ರುಲ್ ಹುದಾ ಜುಮಾ ಮಸೀದಿಯ ಮಾಜಿ ಕೋಶಾಧಿಕಾರಿ ಮತ್ತು ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಸ್ಥಾಪಕ ಸದಸ್ಯರಾಗಿದ್ದರು.

ರಹೀಮ್ ಅವರು ಪತ್ನಿ, ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular