ಮಂಗಳೂರು ; ವಕ್ಪ್ ಆಸ್ತಿ ಎಂದು ಮುಸ್ಲಿಂ ಮೌಲ್ವಿಗಳು ಹೇಳುತ್ತಿದ್ದು ದಿನಕ್ಕೊಂದು ವಿವಾದ ಎಳೆದಂತಾಗಿದೆ . ಇಂದು ನಗರದ ಓಶಿಯನ್ ಪರ್ಲ್ ನಲ್ಲಿ ವಕ್ಪ್ ನ ಬಿಲ್ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ್ದು ಈ ಸಂದರ್ಭದಲ್ಲಿ ಕಚ್ಚಿ ಮೆಮನ್ ಮಸೀದಿ ವಕ್ಪ್ ಹಾಗೂ ಕೆನರ ಶಾಲೆಯ ಆವರಣ ಜಾಗ ವಕ್ಪ್ ಆಸ್ತಿ ಎಂದು ವಕ್ಪ್ ಮಾಜಿ ಅಧ್ಯಕ್ಷ ಎನ್ ಕೆ ಎಂ ಶಾಫಿ ಸಾದಿ ಹೇಳಿದ್ದಾರೆ.
ಈ ಜಾಗವನ್ನು 1೦೦ ವರ್ಷಗಳ ಅವಧಿಗೆ ಲೀಝ್ ಗೆ ನೀಡಲಾಗುತಿತ್ತು.ಈ ಭೂಮಿಗೆ ವಾರ್ಷಿಕವಾಗಿ ಮೂರು ರೂಪಾಯಿ ಬಾಡಿಗೆ ವಕ್ಪ್ ಗೆ ನೀಡಲಾಗುತ್ತಿತ್ತು.ಆದ್ರೆ ಕಳೆದ 12 ವರ್ಷಗಳ ಹಿಂದೆ ಈ ಬಾಡಿಗೆ ಹಣ ನೀಡುತ್ತಿಲ್ಲ. ಈ ಭೂಮಿಯನ್ನು ಮುವಲ್ಲಿ ಮಾರಾಟ ಮಾಡಿದ್ದಾರೆ ಎಂಬುದು ತಿಳಿಸಿದ್ದಾರೆ.
ಅವ್ರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಆದ್ರೆ ಈಗಾ ಈ ಭೂಮಿ ಬಗ್ಗೆ ವಕ್ಪ್ ಇಲಾಖೆ ಧ್ವನಿ ಎತ್ತಿದ್ರೆ ಏನಾಗಬಹುದು, ಎಂದು ಮಂಗಳೂರಿನಲ್ಲಿ ವಕ್ಪ್ ಮಾಜಿ ಅಧ್ಯಕ್ಷ ಎನ್ ಕೆ ಎಂ ಶಾಫಿ ಸಾದಿಯವರು ಹೇಳಿದ್ದಾರೆ.