ಮಂಗಳೂರು : ಭಾರತದಲ್ಲೇ ಪ್ರಥಮ ಬಾರಿಗೆ ಶ್ರೀ ದಾಮೋದರ ಜ್ಯುವೆಲ್ಲರ್ಸ್ ಗುರುಪುರ ಕೈಕಂಬ ಇದರ 25 ನೇ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಗ್ರಾಹಕರಿಗೆ ಚಿನ್ನ ಖರಿದಿಸುವಾಗ ವೆಸ್ಟೇಜ್ ನಲ್ಲಿ 7% ಪರ್ಸೆಂಟ್ ರಿಯಾಯಿತಿ ದರದಲ್ಲಿ ಬಂಗಾರ ನೀಡುತ್ತಿದ್ದೇವೆಂದು ಇದು ಆರ್ಥಿಕವಾಗಿ ಬಳತ್ತಿರುವ ಮಧ್ಯಮ ವರ್ಗದ ಕುಟುಂಬಕ್ಕೆ ಉಪಯೋಗವಾಗಲಿದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಸಂಸ್ಥೆಯ ಮಾಲಕರಾದ ವಿವೇಕ್ ಪ್ರಭುರವರು ತಿಳಿಸಿದ್ದಾರೆ.
ಈ ಸಂಸ್ಥೆಯನ್ನು 25 ವರ್ಷದ ಹಿಂದೆ ಕಟ್ಟಿಬೆಳೆಸಿದ್ದು ಇದೀಗ ಹೆಮ್ಮರವಾಗಿ ಬೆಳೆದಿದ್ದು ಸಂತೋಷದ ವಿಚಾರವಾಗಿದೆ ಎಂದರು. ಶ್ರೀ ದಾಮೋದರ ಜ್ಯುವೆಲ್ಲರ್ಸ್ ಮಳಿಗೆಯು 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ಗ್ರಾಹಕರಿಂದ ಈ ಸಂಸ್ಥೆ ಅಭಿವೃದ್ಧಿ ಹೊಂದಿದ್ದ ಹಿನ್ನೆಲೆ ಆಗಸ್ಟ್ 1 ರಿಂದ ಡಿಸೆಂಬರ್ 31 ರ ವರೆಗೆ ಗ್ರಾಹಕರಿಗೋಸ್ಕರ ಸಂಸ್ಥೆಯಿಂದ ನೀಡುವ ಚಿಕ್ಕ ಕೊಡುಗೆಯಾಗಿದೆ ಎಂದು ತಿಳಿಸಿದರು.
ಶ್ರೀ ದಾಮೋದರ ಜ್ಯುವೆಲ್ಲರ್ಸ್ ಗೆ ಬರುವ ಇತರೆ ಗ್ರಾಹಕರಿಗೂ ಆಕರ್ಷಕ ಹಾಗೂ ವಿಶೇಷ ದರದಲ್ಲಿ ಕೊಡುಗೆ ನೀಡಲಿದ್ದು ಈ ಹಿನ್ನೆಲೆ ಗ್ರಾಹಕರು ಈ ಆಕರ್ಷಕ ಕೊಡುಗೆಯನ್ನು ಸದುಪಯೋಗಗೊಳಿಸುವಂತೆ ತಿಳಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಸಿದ್ದಾರ್ಥ್ ವಿವೇಕ್ ಹಾಗೂ ಶಾಂತೇರಿ ಪ್ರಭುರವರು ಉಪಸ್ಥಿತರಿದ್ದರು.


