ಮಂಗಳೂರು : ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಚಿತ್ರೀಕರಣದಿಂದ ವಿರಾಮ ತೆಗೆದುಕೊಂಡು ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನೂರಿನಲ್ಲಿರುವ ಮಾಡಾಯಿ ಕಾವು “ತಿರುವರ್ ಕಾಡು ಭಗವತಿ” ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಶತ್ರು ಸಂಹಾರ ಪೂಜೆಗೆ ಹೆಸರಾಗಿರುವ ಕೇರಳ ಕಣ್ಣೂರಿನ ಪ್ರಸಿದ್ಧ ಕ್ಷೇತ್ರ ಮಾಡಾಯಿಕಾವು ಶ್ರೀಭಗವತಿ ದೇವಸ್ಥಾನದಲ್ಲಿ ಶನಿವಾರ ನಟದರ್ಶನ್ ಅವರುಕುಟುಂಬ ಸಮೇತ ಭೇಟಿ ನೀಡಿ ಶತ್ರುಸಂಹಾರಯಾಗ ನಡೆಸಿದ್ದು, ಅಲ್ಲಿ ಕೊಲೆ ಆರೋಪಿ ಪ್ರಜ್ವಲ್‌ರೈ ಕಾಣಿಸಿಕೊಂಡಿದ್ದಾಗಿ ಸುದ್ದಿಯಾಗಿದೆ.
2017ರಲ್ಲಿ ದ.ಕ.ಜಿಲ್ಲೆಯಲ್ಲಿಜನರನ್ನು ಬೆಚ್ಚಿಬೀಳಿಸಿದ್ದ ಕರೋಪಾಡಿ ಅಬ್ದುಲ್ ಜಲಿಲ್‌ನ ಹತ್ಯೆ ಪ್ರಕರಣದಲ್ಲಿ ಭಾಗಿಯಾದವನು ಕೂಡ ಕಾಣಿಸಿಕೊಂಡಿದ್ದು, ಕುತೂಹಲ ಮೂಡಿಸಿದೆ. ಈತ ಜಾಮೀನಿನ ಮೂಲಕ ಹೊರಗಿದ್ದು, ಈಗ ನಟದರ್ಶನ್‌ಆತನೊಂದಿಗೆ ಕಾಣಿಸಿಕೊಂಡಿದ್ದು, ಆತನೆ ದೇವಸ್ಥಾನಕ್ಕೆಕರೆತಂದಿರಬಹುದು ಎಂಬ ಅನುಮಾನ ಮೂಡಿದೆ. ಪುತ್ತೂರು ಮೂಲದ ಸ್ನೇಹಿತರ ಮಾಗ್ರದರ್ಶನದಲ್ಲಿ ಕೇರಳಕ್ಕೆ ತೆರಳಿದ್ದ ದರ್ಶನ್ ಈಗ ಮತ್ತೊಮ್ಮೆ ಸುದ್ದಿಯಾಗುತ್ತಿದ್ದಾರೆ.ಇದೀಗ ಈ ಫೋಟೊ, ವೀಡಿಯೋಗಳು ಸಾಮಾಜಿಕಜಾಲತಾಣದಲ್ಲಿಓಡಾಡುತ್ತಿದೆ.