ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆ ಅಂದರೆ ಅದು ಬಿಜೆಪಿ ಯಾ ಭದ್ರ ಕೋಟೆ ಆದರೆ ಇಲ್ಲಿ ಬಿಲ್ಲವರು ಈ ಬಾರಿ ಪ್ರಮುಖ ಪಾತ್ರವಹಿಸಲಿದ್ದಾರೆ . ಯಾಕೆಂದರೆ ಬಿಲ್ಲವ ಅಭ್ಯರ್ಥಿ ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ಯವರ ಶಿಷ್ಯ ಪದ್ಮರಾಜ ರಾಮಯ್ಯ ಕುದ್ರೋಳಿ ಆಡಳಿತ ಮಂಡಳಿಯ ಪ್ರಮುಖ ಪಾತ್ರದಾರಿ 1 ಲಕ್ಷ ಓಟುವಿಂದ ಗೆಲ್ಲಲಿದ್ದಾರೆಂದು ದಕ್ಷಿಣ ಕನ್ನಡ ಕೇರಳ ಗಡಿಭಾಗದಲ್ಲಿ ಬೆಟ್ಟಿಂಗ್ ಶುರುವಾಗಿದೆ.
ಈ ಬಾರಿಯ ಚುನಾವಣೆ ಅಷ್ಟೊಂದು ಪೈಪೋಟಿ ಇಲ್ಲದಂತಾಗಿದೆ,ಯಾಕೆಂದರೆ ಚುನಾವಣೆಯಲ್ಲಿ ಕೇಂದ್ರ ದಲ್ಲಿ ಮೋದಿ ಹೆಸರಲ್ಲಿ ಮತ ಕೇಳುವ ಬಿಜೆಪಿ ಈ ಬಾರಿ ಅಲ್ಪ ಮಟ್ಟದ ಹಿನ್ನಡೆ ಪಡೆಯುವ ಸಾಧ್ಯತೆ ಇದೆಯೆಂದು ದಕ್ಷಿಣ ಕನ್ನಡ ಕೇರಳ ಗಡಿಭಾಗದಲ್ಲಿ ಸುದ್ದಿಯಾಗಿದೆ.
ಈ ಬಾರಿ ಅಭ್ಯರ್ಥಿಗಳಲ್ಲಿ ಹಣದ ಕೊರತೆ ಉಂಟಾಗಿದ್ದು,ಚುನಾವಣೆ ಖರ್ಚಿಗೆ ಹಣ ಹೂಡಲು ಪರಿತಪಿಸುವ ಸಂಗತಿ ಬಯಲಾಗಿದೆ. ಪ್ರತಿ ಬಾರಿ ಗೆಲ್ಲುವ ಅತಿಯಾದ ವಿಶ್ವಾಸದಿಂದ ಇದ್ದ ಬಿಜೆಪಿ ಈ ಬಾರಿ ಬೂತ್ ಮಟ್ಟಕ್ಕೆ ಹಣ ನೀಡಲು ಕೈಕಾಲು ಹೊಡೆಯುತ್ತಿರುವುದು ಕಂಡುಬಂದಿದೆ.
ಒಂದು ಬಾರಿ ಸಂಸದರಾಗಿ 5 ಲಕ್ಷ ಇದ್ದ ಆಸ್ತಿ ಕೇವಲ 5 ವರುಷಗಳಲ್ಲಿ 30% ರಸ್ತು ದುಪ್ಪಟು ಆಗುವಂತಹ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಯಲ್ಲಿ ಹಣ ಬಲ ಕಡಿಮೆ ಯಾಗಿದೆ ಎಂಬುದು ಸುದ್ದಿಯಾಗಿದೆ. ತೋಳ್ಬಲ ಇದ್ದಾರೆ ಸಾಕಾಗಲ್ಲ ಹಣ ಬಲ ಕೂಡ ಬೇಕು ಎಂಬುದು ಇದೀಗ ಮನವರಿಕೆಯಾಗಿದೆ. ಜಿಲ್ಲೆಯಲ್ಲಿ ನಳಿನ್ ಕುಮಾರ್ ಕಟೀಲ್ ಇರುವಾಗ ಹೂಡಿಕೆ ಮಾಡಿದಂತಹ ಬಿಲ್ದರ್ ಗಳು ಈ ಬಾರಿ ಅಭ್ಯರ್ಥಿ ಬದಲಾವಣೆಯಿಂದ ಹಣ ಹೂಡಿಕೆ ಮಾಡಲು ಹಿಂದೇಟು ಹಾಕುತ್ತಿದ್ದರೆಂಬುದು ನಿಜವಾದ ಸಂಗತಿ. ಚುನಾವಣೆ ಬಾಂಡ್ ನಿಂದ ಕಳೆದ 10 ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಸಂಗ್ರಹಿಸಿದ ಹಣ ಚುನಾವಣೆಗೆ ಖರ್ಚು ಮಾಡಲು ಪರಿತಪಿಸಿರುವುದರಲ್ಲಿ ಕಾರ್ಯಕರ್ತರಿಗೆ ಅನುಮಾನ ಉಂಟುಮಾಡಿದೆ.
ಒಟ್ಟಾರೆ ಈ ಬಾರಿ ಹಣ ಬಲನೋ ತೋಳ್ಬಲನೋ,ಮಾಡು ಇಲ್ಲವೇ ಮಡಿ ಎಂಬಂತಾಗಿದೆ ಸಾಮಾನ್ಯ ಕಾರ್ಯಕರ್ತರ ಪರಿಸ್ಥಿತಿ.ದಿನಕ್ಕೊಂದು ಬೆಟ್ಟಿಂಗ್ ಸುದ್ದಿಯಲ್ಲಿ ಪದ್ಮರಾಜ್ ರಾಮಯ್ಯ ಮೇಲುಗೈ ಸಾಧಿಸುತ್ತಿರುವುದು ಎದುರಾಳಿ ಬಿಜೆಪಿ ಪಕ್ಷಕ್ಕೆ ನುಂಗಲಾರದ ತುತ್ತಾಗಿದಂತಾಗಿದೆ.ಅತಿಯಾದ ವಿಶ್ವಾಸ ಹೆಚ್ಚಾದರೆ ಜಿಲ್ಲೆಯಲ್ಲಿ ಸ್ಪರ್ದಿಸುವ ಕಾಂಗ್ರೆಸ್ ಅಭ್ಯರ್ಥಿ ಗೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂಬುದು ತಳ ಮಟ್ಟದ ಕಾರ್ಯಕರ್ತರ ಮಾತು.
ದಕ್ಷಿಣ ಕನ್ನಡ ಜಿಲ್ಲೆ ಅಂದರೆ ಒಂದು ಹಿಂದುತ್ವದ ಭದ್ರಕೋಟೆ ,ಈ ಬಾರಿ ಬಿಲ್ಲವರು ಪ್ರಮುಖ ಪಾತ್ರದಾರಿಗಳು. ಆದರೆ ಈ ಬಾರಿ ಬಿಲ್ಲವರು ಮೋದಿಯ ಕಡೆ ವಾಲುತ್ತಾರೋ ಅಥವಾ ಸಿದ್ದರಾಮಯ್ಯ ನ ಭಾಗ್ಯದ ಕಡೆಗೆ ವಾಲುತ್ತಾರೋ ಎಂಬುದು ಮುಂದೆ ಕಾದುನೋಡಬೇಕಾಗಿದೆ.


