ಮಂಗಳೂರು : ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ 112 ವರ್ಷಗಳ ಸಮೃದ್ಧ ಪರಂಪರೆಯನ್ನು ಹೊಂದಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್ಸಿಡಿಸಿಸಿ ಬ್ಯಾಂಕ್) 2025-26ನೇ ಸಾಲಿನಲ್ಲಿ ದಾಖಲೆಯ ಸಾಧನೆ ಮಾಡಿದೆ. ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆಗಳನ್ನು ಅಳವಡಿಸಿಕೊಂಡು ದೇಶಕ್ಕೆ ಮಾದರಿಯಾಗಿರುವ ಈ ಬ್ಯಾಂಕ್, ರೂ. 20,226.19 ಕೋಟಿ ಒಟ್ಟು ವ್ಯವಹಾರ ದಾಖಲಿಸಿ ಹೊಸ ಇತಿಹಾಸ ನಿರ್ಮಿಸಿದೆ.
ಕಳೆದ ಸಾಲಿನ ರೂ.17,366.68 ಕೋಟಿ ವ್ಯವಹಾರಕ್ಕೆ ಹೋಲಿಸಿದರೆ ಈ ಬಾರಿ ಶೇ.16.47ರಷ್ಟು ಏರಿಕೆ ಕಂಡು ರಾಜ್ಯದಲ್ಲೇ ಮುಂಚೂಣಿಯಲ್ಲಿದೆ. ಮುಂದಿನ 2026-27ನೇ ಸಾಲಿಗೆ ರೂ.22,500 ಕೋಟಿ ವ್ಯವಹಾರದ ಗುರಿಯನ್ನು ಬ್ಯಾಂಕ್ ಹೊಂದಿದೆ.
ದಾಖಲೆ ಲಾಭ
ಬ್ಯಾಂಕ್ 2025-26ನೇ ಆರ್ಥಿಕ ವರ್ಷದಲ್ಲಿ ರೂ. 131.14 ಕೋಟಿ ಲಾಭ ಗಳಿಸಿದ್ದು, ಇದು ಕಳೆದ ವರ್ಷದ ರೂ.110.41 ಕೋಟಿಗೆ ಹೋಲಿಸಿದರೆ ಶೇ.18.78ರಷ್ಟು ಹೆಚ್ಚಾಗಿದೆ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ಗಳಲ್ಲಿ ಇದು ಸಾರ್ವಕಾಲಿಕ ದಾಖಲೆ ಲಾಭವಾಗಿದೆ. ಅನುತ್ಪಾದಕ ಆಸ್ತಿ (NPA) ಪ್ರಮಾಣವು ಶೇ.2.42ರಿಂದ ಶೇ.2.21ಕ್ಕೆ ಇಳಿಕೆಯಾಗಿರುವುದು ಬ್ಯಾಂಕಿನ ಆರ್ಥಿಕ ಶಕ್ತಿಯನ್ನು ಸೂಚಿಸುತ್ತದೆ.
ಠೇವಣಿ ಮತ್ತು ಸಾಲ ವಿತರಣೆ
ಬ್ಯಾಂಕ್ ತನ್ನ 113 ಶಾಖೆಗಳ ಮೂಲಕ ರೂ. 9,264.64 ಕೋಟಿ ಠೇವಣಿ ಸಂಗ್ರಹಿಸಿದ್ದು, ಇದು ಕಳೆದ ಸಾಲಿಗಿಂತ ಶೇ.17.53ರಷ್ಟು ಹೆಚ್ಚಾಗಿದೆ.
ಮುಂಗಡ ಸಾಲವಾಗಿ ರೂ. 9,706.75 ಕೋಟಿ ವಿತರಿಸಿದ್ದು, ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಕೃಷಿ ಕ್ಷೇತ್ರದಲ್ಲಿ ಸಾಧನೆ
ಬ್ಯಾಂಕ್ ನೀಡಿದ ಕೃಷಿ ಸಾಲಗಳಲ್ಲಿ ಶೇಕಡಾ 100 ಮರುಪಾವತಿ ಸಾಧನೆ ಮಾಡಿದ್ದು, ಇದು ಸತತ 31 ವರ್ಷಗಳ ದಾಖಲೆ ಆಗಿದೆ. 1,68,583 ರೈತರಿಗೆ ಮಂಗಳಾ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ವಿತರಿಸಲಾಗಿದ್ದು, 1,44,701 ರುಪೇ ಕಿಸಾನ್ ಕಾರ್ಡ್ಗಳನ್ನು ನೀಡಲಾಗಿದೆ.
ಡಿಜಿಟಲ್ ಬ್ಯಾಂಕಿಂಗ್ ಪ್ರಗತಿ
ಯುಪಿಐ (UPI) ಮತ್ತು ಐಎಂಪಿಎಸ್ (IMPS) ಸೇವೆಗಳೊಂದಿಗೆ ಬ್ಯಾಂಕ್ ಡಿಜಿಟಲ್ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಗೂಗಲ್ ಪೇ, ಫೋನ್ ಪೇ ಮುಂತಾದ ಪಾವತಿ ವ್ಯವಸ್ಥೆಗಳ ಮೂಲಕ ಗ್ರಾಹಕರು ಸುಲಭವಾಗಿ ಹಣ ವರ್ಗಾವಣೆ, ಬಿಲ್ ಪಾವತಿ ಮಾಡುತ್ತಿದ್ದಾರೆ.
ಸಾಮಾಜಿಕ ಮತ್ತು ಸಂಸ್ಥಾಪನಾ ಸಾಧನೆ
34,765 ಸ್ವಸಹಾಯ ಗುಂಪುಗಳೊಂದಿಗೆ ರಾಜ್ಯದಲ್ಲಿ ಪ್ರಥಮ ಸ್ಥಾನ ಮಹಿಳಾ ಸದಸ್ಯರಿಗೆ ಸಮವಸ್ತ್ರ ವಿತರಣೆ ಸಿಬ್ಬಂದಿಗಳಿಗೆ ಪಿಂಚಣಿ ಯೋಜನೆ ಜಾರಿ
‘ಬ್ಯಾಂಕ್ ಆನ್ ವೀಲ್’ ಸೇವೆ ಪರಿಚಯಿಸಿದ ದೇಶದ ಮೊದಲ ಜಿಲ್ಲಾ ಸಹಕಾರಿ ಬ್ಯಾಂಕ್.
ಮೂಲಸೌಕರ್ಯ ಮತ್ತು ವಿಸ್ತರಣೆ
ಬ್ಯಾಂಕಿನ ಎಲ್ಲಾ ಶಾಖೆಗಳು ಗಣಕೀಕೃತಗೊಂಡಿದ್ದು, 16 ಶಾಖೆಗಳಲ್ಲಿ ಎಟಿಎಂ ಸೌಲಭ್ಯ ಇದೆ. 20 ಶಾಖೆಗಳು ಸಂಪೂರ್ಣ ಹವಾನಿಯಂತ್ರಿತವಾಗಿವೆ.
ಮುಂದಿನ ಅವಧಿಯಲ್ಲಿ 10 ಹೊಸ ಶಾಖೆಗಳನ್ನು ತೆರೆಯುವ ಯೋಜನೆ ರೂಪಿಸಲಾಗಿದೆ.
ಪ್ರಶಸ್ತಿಗಳು
ಬ್ಯಾಂಕ್ಗೆ 23 ಬಾರಿ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ, 19 ಬಾರಿ ನಬಾರ್ಡ್ ಪ್ರಶಸ್ತಿ ದೊರೆತಿದೆ. ಜೊತೆಗೆ ಎರಡು ಬಾರಿ ರಾಷ್ಟ್ರೀಯ ಮಟ್ಟದ ಎಫ್ಸಿಬಿಎ ಪ್ರಶಸ್ತಿ ಹಾಗೂ ಬ್ಯಾಂಕೊ ಬ್ಲೂ ರಿಬ್ಬನ್ ಪ್ರಶಸ್ತಿ ಲಭಿಸಿದೆ. ಒಟ್ಟಿನಲ್ಲಿ, ಆಧುನಿಕ ತಂತ್ರಜ್ಞಾನ, ಕೃಷಿ ಸ್ನೇಹಿ ಯೋಜನೆಗಳು ಮತ್ತು ಗ್ರಾಹಕ ಕೇಂದ್ರಿತ ಸೇವೆಗಳ ಮೂಲಕ ಎಸ್ಸಿಡಿಸಿಸಿ ಬ್ಯಾಂಕ್


