ಮಂಗಳೂರು : ಶಾಲಾ ಮಕ್ಕಳ ಅಚ್ಚುಮೆಚ್ಚಿನ ಜಿಲ್ಲಾಧಿಕಾರಿ ವರ್ಗಾವಣೆಗೊಂಡಿದ್ದಾರೆ. ಕಳೆದ 2 ವರ್ಷಗಳಿಂದ ಜಿಲ್ಲೆಯಾ ಮನೆಮಾತಾಗಿದ್ದ ಮುಲ್ಲಯ್ಯ ಮುಗಿಲನ್ ರವರು ವರ್ಗಾವಣೆಗೊಂಡಿದ್ದಾರೆ ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ದರ್ಶನ್ ಹೆಚ್ ವಿ ಬುಧವಾರ ಸಂಜೆ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ನಿರ್ಗಮಿತ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ ಪಿ ಅವರು ಔಪಚಾರಿಕ ಸಮಾರಂಭದಲ್ಲಿ ತಮ್ಮ ಉತ್ತರಾಧಿಕಾರಿಗೆ ಅಧಿಕಾರ ಹಸ್ತಾಂತರಿಸಿದರು. ಮುಲ್ಲೈ ಮುಹಿಲನ್ ಅವರು ಜೂನ್ 17, 2023 ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.ಮುಲ್ಲೈ ಮುಹಿಲನ್ ಎಂ ಪಿ ಅವರು ಎರಡು ವರ್ಷಗಳನ್ನು ತಮ್ಮ ಹುದ್ದೆಯಲ್ಲಿ ಪೂರ್ಣಗೊಳಿಸಿದ ಬೆನ್ನಲ್ಲೇ ಅವರ ವರ್ಗಾವಣೆಯಾಗಿದೆ. ದರ್ಶನ್ ಹೆಚ್ ವಿ ದಕ್ಷಿಣ ಕನ್ನಡದ 134 ನೇ ಜಿಲ್ಲಾಧಿಕಾರಿಯಾಗಿದ್ದಾರೆ.