ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ 98 ಪರ್ಸೆಂಟ್ ಜನರಿಗೆ ಶಾಂತಿ ಬೇಕು ಕೇವಲ ಎರಡು ಪರ್ಸೆಂಟ್ ಜನರಿಗಷ್ಟೆ ಗಲಭೆ ಬೇಕಾಗಿದ್ದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಆಕ್ರೋಶ ಹೊರಹಾಕಿದ್ದಾರೆ.
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹೊಸ ಅಧಿಕಾರಿಗಳನ್ನು ನೇಮಕ ಮಾಡಿದ್ದೇವೆ, ಅವರಿಗೆ ಇಲಾಖೆಯಲ್ಲಿ ಒಳ್ಳೆ ಹೆಸರಿದೆ ಪೊಲೀಸ್ ಅಧಿಕಾರಿಗಳಿಗೆ ಫುಲ್ ಪವರ್ ನೀಡಿದ್ದೇವೆ ಶಾಂತಿ ಸುವ್ಯವಸ್ಥೆ ಆಗಬೇಕು, ಆ ನಿಟ್ಟಿನಲ್ಲಿ ಎಲ್ಲ ಪ್ರಯತ್ನ ಆಗಬೇಕು ಎಂದರು.
ಜನರ ಮನಸ್ಸುಗಳನ್ನು ಹತ್ತಿರ ತರೋದು ಮುಖ್ಯವಾಗಿದೆ ,ಇದಕ್ಕಾಗಿ ಎಲ್ಲ ಧರ್ಮದ ಪ್ರಮುಖರನ್ನು ಕರೆದು ಶಾಂತಿಸಭೆ ಮಾಡುತ್ತೇವೆ ಕೆಲವು ಶಾಸಕರು, ರಾಜಕೀಯ ಮುಖಂಡರೇ ಪ್ರಚೋದನಕಾರಿ ಹೇಳಿಕೆ ನೀಡುತ್ತಾರೆ,ಕಾನೂನು ಭಯ ಇಲ್ಲದೆ ಬಾಯಿಗೆ ಬಂದ ಹಾಗೆ ಮಾತಾಡೋದು ಆಗಿದೆ, ಕಾನೂನಿನಲ್ಲಿ ಸ್ಪಷ್ಟತೆ ಇಲ್ಲದ ಕಾರಣ ಠಾಣೆಯಲ್ಲೇ ಬೇಲ್ ಪಡೆಯುತ್ತಾರೆ ಇಂಥ ವಿಚಾರದಲ್ಲಿ ಕಾನೂನು ಕಠಿಣಗೊಳಿಸಬೇಕಾಗಿದೆ ಎಂದು ಹೇಳಿದ್ದಾರೆ.
ಕಠಿಣ ಕಾನೂನು ತರುವ ನಿಟ್ಟಿನಲ್ಲಿ ತಜ್ಞರ ಜೊತೆ ಚರ್ಚಿಸುತ್ತಿದ್ದು ಮೂರು ಜಿಲ್ಲೆಗಳಿಗೆ ಪ್ರತ್ಯೇಕ ಕಾರ್ಯಪಡೆ ರಚನೆ ಮಾಡಲಾಗಿದೆ ಎಂದರು. ಕೋಮು ವೈಷಮ್ಯ, ಗಲಭೆ ಆಗದಂತೆ ಕಠಿಣ ಕ್ರಮ ಜರುಗಿಸುತ್ತಿದ್ದು ಗಲಭೆ ಕೋರರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ವಹಿಸಲಿದ್ದೇವೆಂದು ಮಂಗಳೂರಿನಲ್ಲಿ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.