Friday, November 22, 2024
Flats for sale
Homeವಿದೇಶಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿಎಪ್ರಿಲ್ 22 ರಂದು ಈದ್ ಉಲ್-ಫಿತರ್ ಆಚರಣೆ.

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿಎಪ್ರಿಲ್ 22 ರಂದು ಈದ್ ಉಲ್-ಫಿತರ್ ಆಚರಣೆ.

ಮಂಗಳೂರು : ಮುಸ್ಲಿಂ ಬಾಂಧವರ ಅತ್ಯಂತ ಪವಿತ್ರ ಹಬ್ಬಗಳಲ್ಲಿ ಒಂದಾದ ಈದ್ ಉಲ್-ಫಿತರ್ ಅನ್ನು ಜಗತ್ತಿನಾದ್ಯಂತ ಮುಸ್ಲಿಮರು ಆಚರಿಸುತ್ತಾರೆ. ಇದು ಇಸ್ಲಾಮಿಕ್ ಪವಿತ್ರ ರಂಜಾನ್ ತಿಂಗಳ ಅಂತ್ಯವನ್ನು ಸೂಚಿಸುತ್ತದೆ.

ಈದ್‌ನ ಆಚರಣೆಗಳು ಸಾಮಾನ್ಯವಾಗಿ ವೈಭವದಿಂದ ತುಂಬಿರುತ್ತವೆ ಮತ್ತು ಕುಟುಂಬಗಳು ಹಬ್ಬಕ್ಕಾಗಿ ಒಟ್ಟಿಗೆ ಸೇರುತ್ತವೆ. ಶುಕ್ರವಾರ ರಾತ್ರಿ ಶವ್ವಾಲ್ ಚಂದ್ರನ ಮೊದಲ ನೋಟವು ವರದಿಯಾಗದ ಕಾರಣ, ಉಪವಾಸ ಮುರಿಯುವ ದಿನಾಂಕವು ಏಪ್ರಿಲ್ 22 ರ ಶನಿವಾರವಾಗಿರುತ್ತದೆ.

ಉಡುಪಿ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಜಂಟಿ ಖಾಝಿ ಅಲ್ ಹಾಜ್ ಅಬ್ದುಲ್ ಹಮೀದ್ ಮುಸ್ಲಿಯಾರ್, ಉಳ್ಳಾಲ ಖಾಝಿ ಸಯ್ಯದ್ ಫಾಝುಲ್ ಕೋಯಮ್ಮ ಅಲ್ ಬುಖಾರಿ ಮತ್ತು ಭಟ್ಕಳ ಖಾಝಿ ಏಪ್ರಿಲ್ 22 ರ ಶನಿವಾರ ಈದ್ ಆಚರಿಸಲು ಕರೆ ನೀಡಿದ್ದಾರೆ.

ಸಾಮಾನ್ಯವಾಗಿ, ಭಾರತದಲ್ಲಿ ಇಸ್ಲಾಮಿಕ್ ಸಮುದಾಯವು ಸೌದಿ ಅರೇಬಿಯಾಕ್ಕಿಂತ ಒಂದು ದಿನ ತಡವಾಗಿ ಹಬ್ಬವನ್ನು ಆಚರಿಸುತ್ತದೆ. ಆದ್ದರಿಂದ, ಈದ್ ಉಲ್-ಫಿತರ್ ಅನ್ನು ಭಾರತದಲ್ಲಿ ಏಪ್ರಿಲ್ 22 ರಂದು ಆಚರಿಸಲಾಗುತ್ತದೆ.

RELATED ARTICLES

LEAVE A REPLY

Please enter your comment!
Please enter your name here

Most Popular