ಮಂಗಳೂರು : ತೆಂಕು ತಿಟ್ಟಿನ ಯಕ್ಷಗಾನ ವೇಷ ಧಾರಿ ಮುಂಡಾಜೆ ಸದಾಶಿವ ಶೆಟ್ಟಿ (67ವರ್ಷ ) ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನರಾದರು. ಕಟೀಲು ಮೇಳದಲ್ಲಿ ಕಳೆದ 20 ವರ್ಷ ಗಳಿಂದ ವೇಷ ಧಾರಿ ಯಾಗಿ, 3 ನೇ ಮೇಳ ದ ಪ್ರಬಂಧಕ ರಾಗಿ ಸೇವೆ ಸಲ್ಲಿಸಿದ್ದರು.
ಧರ್ಮಸ್ಥಳ, ಕರ್ನಾಟಕ, ಸಸಿಹಿತ್ಲು ಮೇಳಗಳಲ್ಲಿ ತುಳು – ಕನ್ನಡ ಪ್ರಸಂಗ ಗಳಲ್ಲಿ ಎಲ್ಲಾ ಸ್ವರೂಪದ ಪಾತ್ರ ಗಳನ್ನು ನಿರ್ವಹಿಸಿದ್ದರು.ವಿದ್ಯುನ್ಮತಿ ಕಲ್ಯಾಣ ಪ್ರಸಂಗ ಪುಸ್ತಕದಲ್ಲಿ ಮುಂಡಾಜೆ ಅವರ ಸ್ತ್ರೀ ವೇಷದ ಚಿತ್ರ ಮುಖ ಪುಟ ದಲ್ಲಿದ್ದು ಅವರ ವೇಷದ ಸರಣಿ ಯ ದಾಖಲಾತಿ ಒದಗಿಸುತ್ತದೆ. ಪುಂಡು, ರಾಜವೇಶ, ನಾಟಕೀಯ ವೇಷ ಗಳಲ್ಲಿ ನುರಿತ ಕಲಾವಿದರಾಗಿದ್ದರು.
ಅಂತ್ಯ ಸಂಸ್ಕಾರ ಇಂದು ಮಧ್ಯಾಹ್ನ 1.15 ಕ್ಕೆ ಕದ್ರಿ ರುದ್ರಭೂಮಿ ಯಲ್ಲಿ ಜರಗಲಿದೆ.
ಅಂತ್ಯದರ್ಶನವ್ಯವಸ್ಥೆ :
ಮಧ್ಯಾಹ್ನ 1ಕ್ಕೆ ಕದ್ರಿ ಮಲ್ಲಿಕಟ್ಟೆ ಮೈದಾನ


