Monday, December 15, 2025
Flats for sale
Homeಜಿಲ್ಲೆಮಂಗಳೂರು ; ತಲ್ವಾರ್ ಹಿಡಿದು ಡಾನ್ಸ್ ಮಾಡಿ ರೀಲ್ಸ್, ಜಾಲತಾಣದಲ್ಲಿ ಪೋಸ್ಟ್, ಆರೋಪಿಗಳ ಬಂಧನ.

ಮಂಗಳೂರು ; ತಲ್ವಾರ್ ಹಿಡಿದು ಡಾನ್ಸ್ ಮಾಡಿ ರೀಲ್ಸ್, ಜಾಲತಾಣದಲ್ಲಿ ಪೋಸ್ಟ್, ಆರೋಪಿಗಳ ಬಂಧನ.

ಮಂಗಳೂರು ; ತಲ್ವಾರ್ ಹಿಡಿದು ಡಾನ್ಸ್ ಮಾಡಿ ರೀಲ್ಸ್ ಮಾಡಿ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಆರೋಪಿಗಳ ಬಂಧವಾಗಿದೆ.

ಬಂಧಿತರನ್ನು ಜೆ.ಡಮ್ ರೋಡ್ ಬಂದರು ನಿವಾಸಿ ಅಮೀರ್ ಸುಹೇಲ್ (28) ಹಾಗೂ ಉರುಂದಾಡಿಗುಡ್ಡೆ ಕಾವೂರು ನಿವಾಸಿ ಸುರೇಶ (29) ಎಂದು ತಿಳಿದುಬಂದಿದೆ.

ಆರೋಪಿಗಳು ದಿ.13 ರಂದು ಸಾಮಾಜಿಕ ಜಾಲತಾಣವಾದ ಪೇಸಬುಕ್ ಖಾತೆಯಲ್ಲಿ “Suresh Psy” ಎಂಬ ಹೆಸರಿನ ಪೇಸಬುಕ್ ಖಾತೆ ಹೊಂದಿರುವ ಖಾತೆಯಲ್ಲಿ ಅಸಾಮಿ ಅಮೀರ್ ಸುಹೇಲನು ತಲ್ವಾರ್ ಹಿಡಿದು ಹಾಡಿಗೆ ಡ್ಯಾನ್ಸ್ ಮಾಡಿದ ವಿಡಿಯೋ ಮೇಲೆ VIBES ಮತ್ತು ಬಿಳಿ ಬಣ್ಣದ ಹಾರ್ಟ್ ಗುರುತಿನ ಚಿಹ್ನೆಯೊಂದಿಗೆ ಸ್ಟೋರಿಗೆ ಹಾಕಿದ್ದು ಈ ವಿಡಿಯೋ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದ ಮೂಲಕ ಸಾರ್ವಜನಿಕರಿಗೆ ಭಯ ಹುಟ್ಟಿಸುವ ಅಮೀರ್ ಸುಹೇಲ್ ಹಾಗೂ ಸುರೇಶ ಎಂಬುವವನ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಹಾಗೂ 66 ಐ.ಟಿ ಯಾಕೆ ಯಂತೆ ಪ್ರಕರಣ ದಾಖಲಾಗಿದೆ.

ಈ ಆರೋಪಿಗಳನ್ನು ಮಂಗಳೂರು ಉತ್ತರ ಉಪವಿಭಾಗದ ಎ.ಸಿ.ಪಿ. ಶ್ರೀಕಾಂತ್ ಕೆ. ರವರ ಮಾರ್ಗದರ್ಶನದಂತೆ ಕಾವೂರು ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ರಾಘವೇಂದ್ರ ಎಂ. ಬೈಂದೂರುರವರು, ಪೊಲೀಸ್ ಉಪನಿರೀಕ್ಷಕರಾದ ಶ್ರೀ ಮಲ್ಲಿಕಾರ್ಜುನ ಬಿರಾದಾರ ಹಾಗೂ ಕಾವೂರು ಠಾಣಾ ಸಿಬ್ಬಂದಿಗಳಾದ ಸಂಭಾಜಿ ಕದಂ, ಕೆಂಚನ ಗೌಡ, ಶರಣಪ್ಪ, ರಾಘವೇಂದ್ರ, ರಿಯಾಜ್, ರವರುಗಳೊಂದಿಗೆ ಆರೋಪಿತರನ್ನು ಪತ್ತೆಮಾಡಿ ದಸ್ತಗಿರಿ ಮಾಡಲಾಗಿದೆ..

RELATED ARTICLES

LEAVE A REPLY

Please enter your comment!
Please enter your name here

Most Popular