Saturday, January 17, 2026
Flats for sale
Homeಜಿಲ್ಲೆಮಂಗಳೂರು : ಡಿ. 30 ರಂದು ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವೈಕುಂಠ ಏಕಾದಶೀಯ ಸಂಭ್ರಮ.

ಮಂಗಳೂರು : ಡಿ. 30 ರಂದು ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವೈಕುಂಠ ಏಕಾದಶೀಯ ಸಂಭ್ರಮ.

ಮಂಗಳೂರು : ಧನುರ್ಮಾಸದ (ವೈಕುಂಠ ಏಕಾದಶೀ) ಏಕಾದಶೀಯ ಕಾರ್ಯಕ್ರಮ ಡಿ.30 ನೇ ಮಂಗಳವಾರ ದಂದು ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಆಡಳಿತ ಮೊಕ್ತೇಸರಾದ ಪ್ರವೀಣ್ ಶೇಟ್ ನಾಗ್ವೆಕರ್ ರವರು ತಿಳಿಸಿದ್ದಾರೆ.

‘ನೈಕಾದಶ್ಯಾಃ ಪರಂ ವೃತಂ’ ಎಂಬ ಮಾತಿನಂತೆ ಏಕಾದಶೀಗಿಂತ ಶ್ರೇಷ್ಠವಾದ ವೃತ ಬೇರೊಂದಿಲ್ಲ ಎಂಬುದು ಪುರಾಣಗಳ ಮಾತು. ಈ ದಿನ ವೈಕುಂಠದ ಬಾಗಿಲು ತೆರೆದಿರುತ್ತದೆ ಎಂಬ ಪ್ರತೀತಿ ಇದೆ. ಅಂದು ವೆಂಕಟೇಶ್ವರ / ವಿಷ್ಣುದೇವರ ದರ್ಶನ ಪಡೆದರೆ ಸ್ವರ್ಗ ಪ್ರಾಪ್ತಿಯಾಗುವುದೆಂಬ ನಂಬಿಕೆಯೂ ಇದೆ. ಈ ಪರ್ವ ಕಾಲದಂದು ಶ್ರೀ ದೇವರ ಸಾನಿಧ್ಯದಲ್ಲಿ ಚೈತನ್ಯಾಭಿವೃದ್ಧಿ ಹಾಗೂ ಲೋಕಕಲ್ಯಾಣ ಪ್ರಾಪ್ತಿಯ ಸಂಕಲ್ಪದೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಈ ವೇಳೆ ನಾಮತ್ರಯ ಮಹಾಮಂತ್ರ ಜಪಯಜ್ಞ, ಪುಷ್ಪಯಾಗ ಮತ್ತು ಅಷ್ಟಾವಧಾನ ಸೇವೆ ನಡೆಯಲಿದೆ ಡಿ. 30 ರಂದು ಸಾಯಂಕಾಲ 4 ಘಂಟೆಗೆ ಡೊಂಗರಕೇರಿ ಕಟ್ಟೆಯಿಂದ ಪುಷ್ಪಯಾಗದ ಹೂವಿನ ವಿಶೇಷ ಮೆರವಣಿಗೆ ನಡೆಯಲಿರುವುದೆ ಎಂದರು.

ಈ ಕಾರ್ಯಯದ ವಿವರ ಇಲ್ಲಿದೆ.

30-12-2025 ಮಂಗಳವಾರ ಪ್ರಾತಃಕಾಲ 5.30ಕ್ಕೆ : ಸುಪ್ರಭಾತ ಸೇವೆ.

6.00ಕ್ಕೆ : ಸಾಮೂಹಿಕ ಪ್ರಾರ್ಥನೆ, ಅಷ್ಟಾಕ್ಷರೀ ಮಂತ್ರ ಜಪ, ಪ್ರಾತಃ ಪೂಜೆ.

7 ರಿಂದ 8.00 ರವರೆಗೆ :ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ,

8 ರಿಂದ 10.00 ರವರೆಗೆ : “ನಾಮತ್ರಯ ಮಹಾಮಂತ್ರ ಜಪಯಜ್ಞ”

ಮಧ್ಯಾಹ್ನ 12.00ಕ್ಕೆ : ಮಹಾಪೂಜೆ.

1.00 ರಿಂದ 3.00 ರವರೆಗೆ : ಭಜನಾ ಕಾರ್ಯಕ್ರಮ,

3.00 ರಿಂದ 4.00 ರವರೆಗೆ : ವೈದಿಕರಿಂದ ವೇದ ಪಾರಾಯಣ

ಸಾಯಂಕಾಲ 4.30 ರಿಂದ : ಪುಷ್ಪಯಾಗ ಆರಂಭ, ಅಷ್ಟಾವಧಾನ ಸೇವೆ

9.00ಕ್ಕೆ : ದೀಪಾರಾಧನೆ, ಮಹಾಪೂಜೆ.

10.00 ಕ್ಕೆ ವಿಠೋಬ ದೇವರ ಸನ್ನಿಧಿಯಲ್ಲಿ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಆಡಳಿತ ಮುಕ್ತೆಸರಾದ ವಿನಾಯಕ ಕೃಷ್ಣ ಶೇಟ್,ಬಿ ಸಾಯಿದತ್ತ ನಾಯಕ್,ಗಣೇಶ್ ನಾವೆಡ್ಕರ್, ರವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular