ಮಂಗಳೂರು : ಲೋಕಕಲ್ಯಾಣಾರ್ಥವಾಗಿ ಸನಾತನ ಧರ್ಮ ಸಂರಕ್ಷಣಾರ್ಥ ಮಂಗಳೂರಿನ ಓಂ ಶ್ರೀ ಮಠದಲ್ಲಿ ಡಿಸೆಂಬರ್ 21ರಿಂದ 29ರವರೆಗೆ ಶ್ರೀ ಲಲಿತಾ ಸಹಸ್ರನಾಮ ಸಮೇತ ಶ್ರೀ ಚಕ್ರ ನವಾರಣ ಹೋಮದೊಂದಿಗೆ ಸೌಂದರ್ಯ ಲಹರಿ ಯಜ್ಞ ನಡೆಯಲಿದೆ ಎಂದು ಓಂ ಶ್ರೀ ಮಠದ ವಿದ್ಯಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ.
ಮಾದ್ಯಮಕ್ಕೆ ಮಾಹಿತಿ ನೀಡಿದ ಅವರು, ಇದು ಎರಡನೇ ವರ್ಷದ ಕಾರ್ಯಕ್ರಮವಾಗಿದ್ದು, ಇದರಲ್ಲಿ 100 ಶ್ಲೋಕವಿದ್ದು, ತುಂಬಾ ವಿಶೇಷವಾದ ಗ್ರಂಥ ಇದಾಗಿದ್ದು, ಯಾವುದೇ ತೊಂದರೆಗಳಿಗೆ ಇದರಿಂದ ಪರಿಹಾರ ಸಿಗುತ್ತದೆ. ಸನಾತನ ಸಂಶ್ಕೃತಿ ಉಳಿಸಲು ಇದು ಉತ್ತಮ ಯಾಗವಾಗಿದೆ ಎಂದು ವಿವರಿಸಿದರು. ಪೂರಕ ಮಾಹಿತಿ ನೀಡಿದ ಮಠದ ಮಾತಾಶ್ರೀ ಓಂಶ್ರೀ ಶಿವಜ್ಞಾನಮಯಿ ಸರಸ್ವತಿ ಅವರು, ನಾರೀಶಕ್ತಿಗೆ ಪ್ರಾಧಾನ್ಯತೆ ನೀಡಿ ಇಲ್ಲಿ ಎಲ್ಲವನ್ನೂ ನಡೆಸಿಕೊಂಡು ಬರಲಾಗುತ್ತಿದೆ ಎಂದು ವಿವರಿಸಿದರು.


