ಮಂಗಳೂರು ; ಎಂ.ಎನ್.ಆರ್ ಪ್ರೊಡಕ್ಷನ್ ಸಂಸ್ಥೆಯ ಡಾ.ಎಂ.ಎನ್ ರಾಜೇಂದ್ರ ಕುಮಾರ್ ನಿರ್ಮಾಣದ ಹೊಸ ಸಿನಿಮಾ ” ವಾದಿರಾಜ ವಾಲಗ “ಕನ್ನಡ ಚಲನಚಿತ್ರದ ಮುಹೂರ್ತ ಸಮಾರಂಭ ಇಂದು ಮಂಗಳೂರಿನ ಉರ್ವ ಮಾರಿಗುಡಿ ದೇವಸ್ಥಾನದ ದಲ್ಲಿ ವಿಜೃಂಭಣೆಯಿಂದ ನಡೆಯಿತು.
ಚಲನಚಿತ್ರದ ಸ್ಕ್ರಿಪ್ಟ್ ನ್ನು ಮಾರಿಯಮ್ಮ ದೇವಿಯ ಪಾದದಡಿಯಲ್ಲಿಟ್ಟು ಅರ್ಚಕರು ಪೂಜೆ ಸಲ್ಲಿಸಿದರು. ಬಳಿಕ ಸಿನಿಮಾ ಚಿತ್ರಿಕರಣದ ವೇಳೆ ಯಾವುದೇ ತೊಡಕು ಉಂಟಾಂಗದಂತೆ ಯಶಸ್ವಿಯಾಗಿ ನಡೆಯಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ.
ದೇಗುಲದ ಮುಂಭಾಗದಲ್ಲಿ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರು ಕ್ಯಾಮರಾಗೆ ಚಾಲನೆ ನೀಡುವ ಮೂಲಕ ಶೂಟಿಂಗ್ಗೆ ಅಧಿಕೃತವಾಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ನಿರ್ಮಾಪಕ ಡಾ.ಎಂ.ಎನ್.ರಾಜೇಂದ್ರ ಕುಮಾರ್, ʻವಾದಿರಾಜ ವಾಲಗ ಮಂಡಳಿʼ ಕನ್ನಡ ಸಿನಿಮಾ ಊರ್ವ ಮಾರಿಯಮ್ಮ ದೇವಸ್ಥಾನದಲ್ಲಿ ಮಹೂರ್ತವನ್ನು ಮಾಡಿದ್ದೇವೆ. ಕಲಾವಿದರಿಗೆ ವಿಶೇಷವಾದ ಗೌರವ, ಅವಕಾಶವನ್ನು ಕೊಡಬೇಕು ಎಂಬ ದೃಷ್ಟಿಕೋನದಿಂದ ಕನ್ನಡ ಚಲನಚಿತ್ರವನ್ನು ನಾವು ಪ್ರಾರಂಭ ಮಾಡಿದ್ದೇವೆ. ಇದು ಸಂಪೂರ್ಣವಾಗಿ ಹಾಸ್ಯಭರಿತ ಕೌಟುಂಬಿಕ ಚಿತ್ರವಾಗಿದೆ. ಮನುಷ್ಯನ ದೈನಂದಿನ ಜೀವನದಲ್ಲಿ ಚಿಂತೆ ಇತ್ಯಾದಿ ಇರುವಾಗ ಹಾಸ್ಯ ನಮ್ಮ ಮನಸ್ಸಿಗೆ ನೆಮ್ಮದಿಯನ್ನು ಕೊಡುತ್ತದೆ ಎಂದರು.
ಚಿತ್ರ ನಿರ್ದೇಶಕ ಶಶಿರಾಜ್ಕಾವೂರು ಮಾತನಾಡಿ ಹಾಸ್ಯಭರಿತ ಕೌಟುಂಬಿಕ ಚಿತ್ರ ಈ ಚಿತ್ರದಲ್ಲಿ ತುಳುನಾಡು ಸೇರಿ ಎಲ್ಲಾ ಕಲಾವಿದರಿಗೆ ನಟಿಸಲು ಅವಕಾಶವಿದೆ. ಮೊದಲ ಹಂತದ ಚಿತ್ರೀಕರಣ ಮಂಗಳೂರು ಉಡುಪಿಯ ಸುತ್ತಮುತ್ತ ನಡೆಯಲಿದೆ ಎಂದು ತಿಳಿಸಿದ್ದಾರೆ.
ಈ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್, ಬೆಳಪು ದೇವಿಪ್ರಸಾದ್ ಶೆಟ್ಟಿ, ಗೋಪಿನಾಥ ಭಟ್, ಸಂತೋಷ್ ಶೆಟ್ಟಿ, ಲಕ್ಷ್ಮಣಕುಮಾರ್ ಮಲ್ಲೂರು, ಅಥರ್ವ ಪ್ರಕಾಶ್, ಜಯಪ್ರಕಾಶ್ ತುಂಬೆ, ಚೇತನ್ ರೈ ಮಾಣಿ, ವೇನ್ಯ ಚೇತನ್ ರೈ, ರಂಜನ್ ಬೋಳೂರು, ಪುಷ್ಪರಾಜ್ ಬೊಳ್ಳಾರ್, ಎಸ್ ಚಂದ್ರಶೇಖರನ್. ನಟ ನವೀನ್ ಡಿ. ಪಡೀಲ್, ರಂಗಭೂಮಿ ಕಲಾವಿದ ನಾಟಕಕಾರ ವಿಜಯ್ ಕುಮಾರ್ ಕೊಡಿಯಾಲ್ಬೈಲ್, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಚಿತ್ರ ಕಲಾವಿದರು ಸಹಿತ ಹಲವರು ಉಪಸ್ಥಿತರಿದ್ದರು.


