Monday, July 14, 2025
Flats for sale
Homeಜಿಲ್ಲೆಮಂಗಳೂರು : ಜ.23 ರಿಂದ 26 ರವರೆಗೆ ಮಂಗಳೂರು ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ..!

ಮಂಗಳೂರು : ಜ.23 ರಿಂದ 26 ರವರೆಗೆ ಮಂಗಳೂರು ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ..!

ಮಂಗಳೂರು : ತೋಟಗಾರಿಕೆ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ದಕ್ಷಿಣ ಕನ್ನಡ ಜಿಲ್ಲೆ, ಹಾಗೂ ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿ. ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಸಿರಿ ತೋಟಗಾರಿಕೆ ಸಂಘ(ರಿ) ಮಂಗಳೂರು ಮತ್ತು ಇತರೇ ಅಭಿವೃದ್ಧಿ ಇಲಾಖೆಗಳ ಸಹಭಾಗಿತ್ವದಲ್ಲಿ, ಭಾರತ ದೇಶದ ಗಣರಾಜ್ಯೋತ್ಸವದ ಪ್ರಯುಕ್ತ, ದಿನಾಂಕ 23.01.2025 ರಿಂದ 26.01.2025ರವರೆಗೆ ಮಂಗಳೂರು ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗಿರುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಫಲಪುಷ್ಪ ಪ್ರದರ್ಶನದ ಉದ್ಘಾಟನೆಯನ್ನು 23 ರಂದು ಬೆಳಗ್ಗೆ, 11.00 ಗಂಟೆಗೆ ವಿಧಾನ ಸಭಾ ಸ್ಪೀಕರ್ ಯು.ಟಿ.ಖಾದರ್ ಫರೀದ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವರು ಉದ್ಘಾಟಿಸಲಿದ್ದಾರೆಂದು ತಿಳಿಸಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಶಾಸಕ ಡಿ.ವೇದವ್ಯಾಸ ಕಾಮತ್ ರವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲೆಯ ಲೋಕಸಭಾ ಸಂಸದರು, ರಾಜ್ಯಸಭಾ ಸಂಸದರು, ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದ ಶಾಸಕರು, ವಿಧಾನಪರಿಷತ್ತಿನ ಶಾಸಕರು, ವಿವಿದ ಮಂಡಳಿ, ಅಕಾಡೆಮಿಯ ಅಧ್ಯಕ್ಷರು ಹಾಗೂ ಇತರೆ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ .

ಈ ಬಾರಿ ಫಲಪುಷ್ಪ ಪ್ರದರ್ಶನದ ಅಂಗವಾಗಿ ಮುಖ್ಯ ಆಕರ್ಷಣೆಯಾಗಿ ಹೂವುಗಳಿಂದ ಸುಮಾರು 22 ಅಡಿ ಎತ್ತರದ ಈಫೆಲ್ ಟವರ್ ನ್ನು ನಿರ್ಮಿಸಿದ್ದು 12 ಅಡಿ ಸುತ್ತಳತೆಯಲ್ಲಿ ಅಂದಾಜು 2.00 ಲಕ್ಷ ವಿವಿದ ಹೂವುಗಳಿಂದ ಅಲಂಕರಿಸಿ ನಿರ್ಮಿಸಲಾಗುವುದು ಎಂದು ಹೇಳಿದ್ದಾರೆ. ಇದರ ಜೊತೆಗೆ ಮಕ್ಕಳಿಗೆ ಮನರಂಜನೆ ನೀಡುವಂತಹ ಹೂವುಗಳಿಂದ ಅಲಂಕರಿಸಿದ ಪೋಟೋ ಪ್ರೇಮ್,ಸೆಲ್ಫಿ ಜೋನ್, ಮಶ್ರೂಮ್ , ಕ್ಯಾನನ್ ಬಾಲ್, ಹನಿ ಬೀ , ಮಿಕ್ಯ್ ಮೌಸ್ 2, ಸ್ವಾನ್ 4, 5, 6 ಅಡಿ ಎತ್ತರದಲ್ಲಿ ನಿರ್ಮಿಸಲಾಗುವುದು ಎಂದು ತಿಳಿಸಿದ್ದಾರೆ.

ಸಿರಿ ದಾನ್ಯದಲ್ಲಿ ಮತ್ತು ಅಲಂಕಾರಿಕಾ ಎಲೆಗಳಿಂದ ಕಂಬಳ ಕೋಣದ ಮಾದರಿಯನ್ನು 5 ರಿಂದ 6 ಅಡಿ ಸುತ್ತಳತೆಯಲ್ಲಿ ತಯಾರಿಸಿ ಪ್ರದರ್ಶನದಲ್ಲಿ ಪ್ರದರ್ಶಿಸಲಾಗುವುದು, ಇದರ ಜೊತೆಗೆ ಸಿರಿದಾನ್ಯದಲ್ಲಿ ಯಕ್ಷಗಾನದ ಎರಡು ಕಲಾಕೃತಿ ಮತ್ತು ಮೀನುಗಾರರ ಮತ್ತು ಕಂಬಳ ಓಟಗಾರನ ಬಗ್ಗೆ ಕಲಾಕೃತಿಯನ್ನು ನಿರ್ಮಿಸಿ ಪ್ರದರ್ಶಿಸಲಾಗುವುದು ಎಂದು ತಿಳಿಸಿದರು. ಫಲಪುಷ್ಪ ಪ್ರದರ್ಶನದ ಅಂಗವಾಗಿ ಈಗಾಗಲೇ ಮಂಗಳೂರು ಕದ್ರಿ ಉದ್ಯಾನವನದಲ್ಲಿ ಸುಮಾರು 20,000 ಸಂಖ್ಯೆಯ ಮೂವತ್ತಕ್ಕೂ ಹೆಚ್ಚು ವಿವಿಧ ಜಾತಿಯ ಹೂವುಗಳಾದ ಸಾಲ್ಕಿಯ ಸೇವಂತಿಗೆ, ಚಂಡು ಹೂ, ಜೀನಿಯಾ, ಡಯಾಂಥಸ್, ಆಸ್ಮರ್,ಹಾಗೂ ಇನ್ನಿತರ ಹೂವುಗಳ ಹಾಹೂ ತರಕಾರಿ ಕೈತೋಟದ ಪ್ರಾತ್ಯಕ್ಷತೆಯನ್ನು ಏರ್ಪಡಿಸಲಾಗಿದೆ.

ಹಣ್ಣು ತರಕಾರಿಗಳಿಂದ ಜಿಲ್ಲೆಯ ಕ್ಷೇತ್ರ,ಗಣ್ಯರ ಕಲಾಕೃತಿಯ ಕೆತ್ತನೆ,ವಿವಿಧ ಅಲಂಕೃತ ಗಿಡಗಳ ಪ್ರದರ್ಶನ,ಇಕೇಬೇನಾ ಹೂವಿನ ಜೋಡಣೆ,ಜೇನು ಹಾಗೂ ಮಾದರಿ ಉತ್ಪಾದನೆಗಳ ಪ್ರದರ್ಶನ,ಪಶ್ಚಿಮ ಘಟ್ಟದ ಪ್ರಭೇದಗಳು ಮತ್ತು ಮಾದರಿ ಹೂವಿನ ಹಾಗೂ ಉತ್ಪನ್ನಗಳ ಪ್ರದರ್ಶನ,ಸಸ್ಯ ಉತ್ಸವ,ರೈತರ ಹಣ್ಣು ಹಾಗೂ ತರಕಾರಿ,ಗೆದ್ದೇ ಗೆಣಸು,ಬೀಜ ,ಹಾಹೂ ಸ್ವ ಸಹಾಯ ಸಂಘಗಳ ಉತ್ಪನ್ನಗಳ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದ್ದಾರೆ.

ಫಲಪುಷ್ಪ ಪ್ರದರ್ಶನದಲ್ಲಿ ವಯಸ್ಕರಿಗೆ ರೂ. 30 ಮತ್ತು ಮಕ್ಕಳಿಗೆ 20 ರೂ ಪ್ರವೇಶಶುಲ್ಕ ನಿಗದಿಪಡಿಸಿದ್ದಾರೆ. ಬೆಳಗ್ಗೆ 9. ಗಂಟೆಯಿಂದ 4 ಗಂಟೆಯವರೆಗೆ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.ಉಳಿದಂತೆ ಫಲಪುಷ್ಪ ಪ್ರದರ್ಶನ ಬೆಳಗ್ಗೆ 9. ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ದ.ಕ ಜಿಲ್ಲಾ ಪಂಚಾಯತ್ ಸಿಇಒ ಡಾ.ಆನಂದ್ ಕೆ., ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಂಜುನಾಥ ಡಿ. ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಪ್ರಮೋದ್ ಸಿ.ಎಂ., ಪ್ರದೀಪ್ ಡಿಸೋಜ, ಚಂದ್ರಶೇಖರ್, ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿ ಸದಸ್ಯರಾದ ಬಿ. ಜಗನ್ನಾಥ ಗಾಂಭೀರ್, ರಾಮ ಮುಗ್ರೋಡಿ, ಜಿ.ಕೆ. ಭಟ್. ರವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular