Tuesday, February 4, 2025
Flats for sale
Homeಜಿಲ್ಲೆಮಂಗಳೂರು : ಜ.18 ರಂದು ಲಯನ್ಸ್ ಇಂಟರ್ ನ್ಯಾಷನಲ್ 317 D ಇವರ ವತಿಯಿಂದ...

ಮಂಗಳೂರು : ಜ.18 ರಂದು ಲಯನ್ಸ್ ಇಂಟರ್ ನ್ಯಾಷನಲ್ 317 D ಇವರ ವತಿಯಿಂದ “ಚಿರಂತರ” ಪ್ರಾಂತೀಯ ಸಮ್ಮೇಳನ…!

ಮಂಗಳೂರು ; ಲಯನ್ಸ್ ಇಂಟ‌ರ್ ನ್ಯಾಷನಲ್ ಜಿಲ್ಲೆ 317ಡಿ ದ.ಕ., ಕೊಡಗು, ಹಾಸನ, ಚಿಕ್ಕಮಗಳೂರು ಈ ನಾಲ್ಕು ಜಿಲ್ಲೆಗಳು ಮತ್ತು 1 ಪ್ರಾಂತ್ಯಗಳನ್ನು ಒಳಗೊಂಡಿದೆ. ಪ್ರತಿಯೊಂದು ಪ್ರಾಂತ್ಯದಲ್ಲಿ 12 ರಿಂದ 15 ಕ್ಲಬ್‌ಗಳನ್ನು ಹೊಂದಿದ್ದು 4 ವಲಯಗಳಿವೆ. ಈ ಎಲ್ಲಾ ಕ್ಲಬ್‌ಗಳ ಮುಂದಾಳತ್ವವನ್ನು ಪ್ರಾಂತ್ಯ ಅಧ್ಯಕ್ಷರುಗಳು ವಹಿಸಿಕೊಂಡಿದ್ದಾರೆ. ಪ್ರಾಂತ್ಯ ಎರಡರ ನೇತೃತ್ವವನ್ನು ಪ್ರಾಂತೀಯ ಅಧ್ಯಕ್ಷರಾದ ಲಯನ್ ವೇಣಿ ಮರೋಳಿಯವರು ವಹಿಸಿಕೊಂಡಿದ್ದು, ಸಾಂಕೇತಿಕವಾಗಿ ಪ್ರಾಂತೀಯ ಸಮ್ಮೇಳನ “ಚಿರಂತನ” ವನ್ನು ಇದೇ ಬರುವ ದಿನಾಂಕ 18.01.2025 ನೇ ಶನಿವಾರದಂದು ವಾಮಂಜೂರಿನ ಚರ್ಚ್ ಹಾಲ್‌ನಲ್ಲಿ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ 700 ಕ್ಕಿಂತಲೂ ಹೆಚ್ಚು ಸದಸ್ಯರು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.

ಚಿರಂತನ ಪ್ಯಾಂತೀಯ ಸಮ್ಮೇಳನದ ಕಾರ್ಯಕ್ರಮದ ವಿವರ:

ಮುಖ್ಯ ಅತಿಥಿಯಾಗಿ ಶ್ರೀಮತಿ ನಾಜಿಯಾ ಸುಲ್ತಾನ KAS ಸಹಾಯಕ ಆಯುಕ್ತರು, ಕಾರ್ಮಿಕ ಇಲಾಖೆ, ಮಂಗಳೂರು ವಿಭಾಗ ಉದ್ಘಾಟಕರಾಗಿ ಡಾ| ಪೂನಂ ಸಾಯಿ ಕುಮಾರ್ ಟೆಕ್ಸಸ್ ಡಾಲರ್ಸ್ ಇವರು ಭಾಗವಹಿಸುವರು.

ವಿಶೇಷ ಚಟುವಟಿಕೆ

ಚಿರಂತನ ಪ್ರಾಂತೀಯ ಸಮ್ಮೇಳನದ ಸವಿ ನೆನಪಿಗಾಗಿ ಕೃಷ್ಣಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸುರತ್ಕಕ್ ಇಲ್ಲಿಗೆ 4 ಶೌಚಾಲಯಗಳ ನಿರ್ಮಾಣ ಯೋಜನೆಯು ಕಾರ್ಯರೂಪದಲ್ಲಿದೆ. ಈ ಯೋಜನೆಯ ವೆಚ್ಚ 5 ಲಕ್ಷ ರೂ ಗಳಾಗಿದ್ದು ಸಮ್ಮೇಳನದ ದಿನದಂದು ಪ್ರಾಂತ್ಯದ 15 ಕ್ಲಬ್ಬುಗಳು ಒಟ್ಟು ಸೇರಿ ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ಸೇವಾ ಚಟುವಟಿಕೆಗಳನ್ನು ಸ್ಥಳದಲ್ಲಿಯೇ ಹಮ್ಮಿಕೊಳ್ಳಲಾಗಿದೆ.

ಚಿರಂತನ” ಪ್ರಾಂತೀಯ ಸಮ್ಮೇಳನದ ಕಮಿಟಿಯ ಮಾಹಿತಿ ಇಂತಿದೆ:

ಈ ಪ್ರಾಂತೀಯ ಸಮ್ಮೇಳನದ ಆಯೋಜನ ಸಮಿತಿಯನ್ನು ಲಯನ್ ವಾಣಿ ವಿ. /ಆಳ್ವ ಅಧ್ಯಕ್ಷರು, ಲಯನ್ ಪ್ರವೀಣ್ ಶೆಟ್ಟಿ ಕಾರ್ಯದರ್ಶಿ ಮತ್ತು ಲಯನ್ ಯಶವಂತ ಪೂಜಾರಿ ಖಜಾಂಚಿ ಮುಂದಾಳತ್ವದಲ್ಲಿ ನಡೆಸಲಾಗುತ್ತಿದೆ. ಪ್ರಾಂತೀಯ ಅಧ್ಯಕ್ಷೆಯಾದ ಲಯನ್ ವೇಣಿ ಮರೋಳಿಯವರು ಸಾಮಾಜಿಕ ಕಾರ್ಯಕರ್ತೆಯಾಗಿದ್ದು ಲಯನ್ಸ್ ಇಂಟರ್ ನ್ಯಾಷನಲ್ ಜಿಲ್ಲೆ 317 ಡಿ ಇದರಲ್ಲಿ ಅನೇಕ ಹುದ್ದೆಗಳನ್ನು ನಿರ್ವಹಿಸಿದ್ದು ಈ ಪ್ರಾಂತೀಯ ಸಮ್ಮೇಳನದ ಮುಖ್ಯ ರೂವಾರಿಯಾಗಿ ಅನೇಕ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುವರು. ಇಂತಹ ಅನನ್ಯ ಕಾರ್ಯಕ್ರಮಗಳು ಸೇವಾ ಮನೋಭಾವನ್ನು ಉತ್ತೇಜಿಸುವಲ್ಲಿ ಲಯನ್ಸ್ ಕ್ಲಬ್ಬು ಗಳು ಮಹತ್ವದ ಪಾತ್ರವಹಿಸುತ್ತದೆ. ಲಯನ್ಸ್ ಇಂಟ‌ರ್ ನ್ಯಾಷನಲ್ ಈ ರೀತಿಯ ಕಾರ್ಯಕ್ರಮಗಳ ಮೂಲಕ ಸಮುದಾಯದ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿದೆ ಎಂದು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ವಾಣಿ .ವಿ ಆಳ್ವ,ಲಯನ್ ಪ್ರವೀಣ್ ಶೆಟ್ಟಿ,ಚಂದ್ರಹಾಸ ಶೆಟ್ಟಿ,ಹಾಗೂ ಅನುರಾಧ ಶೆಟ್ಟಿ ಯವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular