Sunday, January 25, 2026
Flats for sale
Homeಕ್ರೈಂಮಂಗಳೂರು : ಜೋಡಿ ಕೊಲೆ ಪ್ರಕರಣದಲ್ಲಿ 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ “ದಂಡುಪಾಳ್ಯ ಗ್ಯಾಂಗ್ ಕುಖ್ಯಾತ ಆರೋಪಿಯಾ...

ಮಂಗಳೂರು : ಜೋಡಿ ಕೊಲೆ ಪ್ರಕರಣದಲ್ಲಿ 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ “ದಂಡುಪಾಳ್ಯ ಗ್ಯಾಂಗ್ ಕುಖ್ಯಾತ ಆರೋಪಿಯಾ ಬಂಧನ.

ಮಂಗಳೂರು : 1997 ರ ಸಾಲಿನ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ದಂಡುಪಾಳ್ಯ ಗ್ಯಾಂಗ್ ನ ಆರೋಪಿ ಚಿಕ್ಕ ಹನುಮ ಚಿಕ್ಕ ಹನುಮಂತಪ್ಪ ಎಂಬಾತನನ್ನು ಆಂದ್ರಪ್ರದೇಶದಲ್ಲಿ ಮಂಗಳೂರು – ಉರ್ವ ಪೊಲೀಸರು ಬಂಧಿಸಿದ್ದಾರೆ.

ನ.11-10-1997 ರಂದು ಮಧ್ಯಾರಾತ್ರಿ ಮಂಗಳೂರು ತಾಲೂಕು ಉರ್ವಾ ಮಾರಿಗುಡಿ ಕ್ರಾಸ್ ಬಳಿರುವ ಅನ್ವರ್ ಮಹಲ್ ಎಂಬ ಮನೆಗೆ ನುಗ್ಗಿದ ದಂಡುಪಾಳ್ಯ ಗ್ಯಾಂಗ್” ಎಂದೇ ಕುಖ್ಯಾತಿ ಪಡೆದಿರುವ ಗ್ಯಾಂಗ್ ನ ಸಹಚರಗಳಾದ ದೊಡ್ಡ ಹನುಮ (ಹನುಮವೆಂಕಟೇಶ) ಚಂದ್ರ ಮುನಿಕೃಷ್ಣ (ಕೃಷ್ಣ) ಮತ್ತು ನಲ್ಲತಿಮ್ಮ (ತಿಮ್ಮ) ಈ ಆರೋಪಿಗಳು 80 ವರ್ಷ ಹಾಗೂ 19 ವರ್ಷ ಪ್ರಾಯದ ರಂಜಿತ್ ವೇಗಸ್ ಹಾಗೂ ಲೂವಿಸ್ ಡಿಮೆಲ್ಲೋ ರನ್ನು ಕೊಲೆ ಮಾಡಿ ಚಿನ್ನಾಭರಣಗಳ್ನು ದೊಚಿಕೊಂಡು ಹೋಗಿದ್ದರು. ವಿಚಾರಣಾ ನ್ಯಾಯಾಲಯವು 5 ಆರೋಪಿಗಳನ್ನು ದೋಷಿಗಳೆಂದು ಘೋಷಿಸಿ, ಆರಂಭದಲ್ಲಿ ಮರಣದಂಡನೆ ವಿಧಿಸಲಾಯಿತು. ನಂತರ, ಅವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದು ಬಳಿಕ ಹೈಕೋರ್ಟ್‌ನ ನಿರ್ದೇಶನಗಳ ಆಧಾರದ ಮೇಲೆ ಶಿಕ್ಷೆಯನ್ನು ರದ್ದುಗೊಳಿಸಿ ಹೊಸದಾಗಿ ವಿಲೇವಾರಿ ಮಾಡಲು ಆದೇಶಿಸಿ, ಅವರ ವಿರುದ್ಧದ ಪ್ರಕರಣವನ್ನು ಖುಲಾಸೆಗೊಳಿಸಲಾಯಿತು. ಆದರೆ ಕರ್ನಾಟಕದಾದ್ಯಂತ ಅವರ ವಿರುದ್ಧ ಇನ್ನೂ ಪ್ರಕರಣಗಳು ಬಾಕಿ ಉಳಿದಿದೆ ಎಂದು ತಿಳಿದುಬಂದಿದೆ.ಆದರೆ ಚಿಕ್ಕ ಹನುಮಂತು ಪ್ರಕರಣವನ್ನು ಖುಲಾಸೆಗೊಳಿಸಲಾಗಿಲ್ಲ ಎಂದು ತಿಳಿದಿದೆ.

ಉರ್ವಾ ಪೊಲೀಸ್ ಠಾಣಾ ಅ.ಕ್ರ ನಂಬ್ರ 113/1997, ಕಲಂ 460, 396, 400 ಐಪಿಸಿ ಪ್ರಕರಣದಲ್ಲಿ 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ, “ದಂಡುಪಾಳ್ಯ ಗ್ಯಾಂಗ್” ಎಂದೇ ಕುಖ್ಯಾತಿ ಪಡೆದಿರುವ ಗ್ಯಾಂಗ್ ನ ಸಹಚರ (ಎ-6) ಚಿಕ್ಕ ಹನುಮ, ಕೆ. ಕೃಷ್ಣಪ್ಪ 55 ದಂಡುಪಾಳ್ಯ ಗ್ರಾಮ, ಹೊಸಕೋಟೆ ತಾಲೂಕು. ಬಿ.ಕೆ ಪಳ್ಳಿ, ಮದನಪಳ್ಳಿ, ಅನ್ನಮಯ್ಯ ಜಿಲ್ಲೆ, ಆಂದ್ರಪ್ರದೇಶ ಈತನನ್ನು ಆಂದ್ರಪ್ರದೇಶ ರಾಜ್ಯದ ಅನ್ನಮಯ್ಯ ಜಿಲ್ಲೆಯ, ಮದನಪಳ್ಳೆ ಎಂಬಲ್ಲಿ ಉರ್ವ ಠಾಣಾ ಪೊಲೀಸರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಮಾನ್ಯ ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ಈ ಪ್ರಕರಣದಲ್ಲಿ ಆರೋಪಿ ಚಿಕ್ಕ ಹನುಮ ತನ್ನ ಬುಧ್ಧಿವಂತಿಕೆಯನ್ನು ಬಳಸಿ ಚಿಕ್ಕ ಹನುಮಂತಪ್ಪ ಕೆ. ಕೃಷ್ಣಪ್ಪ ಎಂದು ಹೆಸರು ಬದಲಾಯಿಸಿಕೊಂಡು ದಸ್ತಗಿರಿಗೆ ಸಿಗದೇ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ಆಂದ್ರಪ್ರದೇಶ ರಾಜ್ಯದಲ್ಲಿ ತಲೆಮರೆಸಿಕೊಂಡಿರುತ್ತಾನೆ. ಈತನ ಮೇಲೆ ಮಂಗಳೂರು ಮಾನ್ಯ JMFC 2ನೇ ನ್ಯಾಯಾಲಯವು 2010 ರಲ್ಲಿ LPC ವಾರೆಂಟ್ ಹೊರಡಿಸಿದ್ದು . ಈತನ ಮೇಲೆ ಕರ್ನಾಟಕ ರಾಜ್ಯದಲ್ಲಿ ಸುಮಾರು 13 ಕೊಲೆ ,ದರೋಡೆ ಪ್ರಕರಣಗಳು ದಾಖಲಾಗಿರುವುದು ತಿಳಿದು ಬಂದಿದ್ದು ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. .

ಈ ಪತ್ತೆ ಕಾರ್ಯದಲ್ಲಿ ಉರ್ವಾ ಪೊಲೀಸ್ ಠಾಣೆಯ ನಿರೀಕ್ಷಕರಾದ ಶ್ಯಾಮ್ ಸುಂಧರ್ ಹೆಚ್.ಎಮ್ , ಪಿಎಸ್ಐ ಗುರಪ್ಪ ಕಾಂತಿ, ಪಿಎಸ್ಐ ಎಲ್.ಮಂಜುಳಾ ಎಎಸ್ಐ ವಿನಯ ಕುಮಾರ್ ಮತ್ತು ಸಿಬ್ಬಂದಿಗಳಾದ ಲಲಿತಲಕ್ಷ್ಮಿ, ಅನಿಲ್, ಪ್ರಮೋದ್, ಆತ್ನಾನಂದ , ಹರೀಶ್ ರವರು ಶ್ರಮಿಸಿದ್ದು .ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಶಾಂಸೆಯನ್ನು ವ್ಯಕ್ತ ಪಡಿಸಿದ್ದು ಹೆಚ್ಚು ಬಹುಮಾನಕ್ಕಾಗಿ ಕರ್ನಾಟಕ ರಾಜ್ಯದ ಡಿಜಿ&ಐಜಿಪಿ ರವರಿಗೆ ಶಿಫಾರಸ್ಸು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular