ಮಂಗಳೂರು : ಕೈ ಗಾಯದ ಚಿಕಿತ್ಸೆಗಾಗಿ ಕಳೆದ ನಾಲ್ಕು ದಿನಗಳಿಂದ ತಂಗಿದ್ದ ಬೆಳಗಾವಿಯ 13 ವರ್ಷದ ಬಾಲಕಿಯೊಬ್ಬಳು ಜೋಕಟ್ಟೆಯ ಬಾಡಿಗೆ ಮನೆಯೊಂದರಲ್ಲಿ ಕುತ್ತಿಗೆಗೆ ಬಟ್ಟೆ ಕಟ್ಟಿಕೊಂಡು ಹತ್ಯೆಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ .
ಕೊಲೆ ಪ್ರಕರಣದ ಆರೋಪಿಯನ್ನು ಫಕೀರಪ್ಪ ಮಾದಾರ (51)ಎಂದು ಗುರುತ್ತಿಸಲಾಗಿದೆ .ಈತನು ಬೆಳಗಾವಿ ಜಿಲ್ಲೆಯವನಾಗಿದ್ದು ಜೋಕಟ್ಟೆಯ ತೋಕೂರು ಗ್ರಾಮದ ವಿಜವಿಠ್ಠಲ ಭಜನಾ ಮಂದಿರದ ಹಿಂಭಾಗ ಕೇಶವ ಎಂಬವರ ಬಾಡಿಗೆ ಮನೆಯಲ್ಲಿ ನೆಲೆಸಿದ್ದನು.
ಈತನು ಕಳೆದ 6 ತಿಂಗಳಿಂದ ಜೋಕಟ್ಟೆ ಪರಿಸರದಲ್ಲಿ ದಿನಗೂಲಿ ನೌಕರನಾಗಿ ಕೆಲಸಮಾಡುತ್ತಿದ್ದನು. ಆರೋಪಿಯು ಬಾಲಕಿಯ ಚಿಕ್ಕಪ್ಪನಿಗೆ ಪರಿಚಿತನಾಗಿದ್ದು ಆಗಾಗ ಮನೆಗೆ ಬಂದುಹೋಗುತಿದ್ದನು.06-08-24 ರಂದು ಆರೋಪಿ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಗೆ ಬಂದಿದ್ದು ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದಾಗ ಬಾಲಕಿಯು ವಿರೋಧ ವ್ಯಕ್ತಪಡಿಸಿದಕ್ಕೆ ಕೊಲೆಮಾಡಿದ್ದಾನೆಂದು ತನಿಖೆಯಲ್ಲಿ ತಿಳಿದುಬಂದಿದೆ. ಈತನನ್ನು ಈಗಾಗಲೇ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ .
ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಸಿದ್ಧಾರ್ಥ್ ಗೋಯಲ್, ಡಿಸಿಪಿ (ಅಪರಾಧ ಮತ್ತು ಸಂಚಾರ) ಬಿ ಪಿ ದಿನೇಶ್ ಕುಮಾರ್, ಎಸಿಪಿ (ಉತ್ತರ ವಿಭಾಗ) ರವೀಶ್ ನಾಯಕ್ (ಪ್ರಭಾರಿ), ಎಸಿಪಿ (ಉತ್ತರ ಉಪವಿಭಾಗ) ಮನೋಜ್ ಕುಮಾರ್ ನಾಯಕ್ ಅವರ ಮಾರ್ಗದರ್ಶನದಲ್ಲಿ ಪ್ರಕರಣವನ್ನು ತ್ವರಿತವಾಗಿ ಭೇದಿಸಲಾಯಿತು.
ತನಿಖಾ ತಂಡದಲ್ಲಿ ಪಣಂಬೂರು ಪೊಲೀಸ್ ಇನ್ಸ್ಪೆಕ್ಟರ್ ಮೊಹಮ್ಮದ್ ಸಲೀಂ ಅಬ್ಬಾಸ್, ಪಣಂಬೂರು ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಶ್ರೀಕಲಾ ಕೆ ಟಿ, ಎಎಸ್ಐ ಕೃಷ್ಣ, ಹೆಡ್ ಕಾನ್ಸ್ಟೆಬಲ್ಗಳಾದ ಸತೀಶ್ ಎಂ ಆರ್ ಮತ್ತು ಸೈಯ್ಯದ್ ಇಂತಿಯಾಜ್, ಕಾನ್ಸ್ಟೆಬಲ್ಗಳಾದ ಶಶಿಕುಮಾರ್ ಮತ್ತು ರಾಕೇಶ್ ಮತ್ತಿತರರು ಇದ್ದರು.