ಮಂಗಳೂರು : ತಪ್ಪು ನಡೆದರೂ ಒಪ್ಪಿಕೊಳ್ಳುವ ಒಂದು ಮಾನವೀಯತೆ ಇರಬೇಕು ಆದರೆ ಈ ಶಾಲೆಯ ಆಡಳಿತ ಸಿಬ್ಬಂದಿಯೂ ತಪ್ಪನ್ನು ಮರೆಮಾಚಲು ಇನ್ನೊಂದು ತಪ್ಪು ಮಾಡುತ್ತಿರುವುದು ಬೆಳಕಿದೆ ಬಂದಿದೆ. ಶಾಲೆಯ ಆವರಣದಲ್ಲಿ ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿದ ವಿದ್ಯಾರ್ಥಿಗಳಿಗೆ ಧಮ್ಕಿ ಹಾಕಲಾಗಿದೆ ಎನ್ನುವ ಆಡಿಯೋ ಮತ್ತೊಮ್ಮೆ ವೈರಲ್ ಆಗಿದೆ.ಆದರೆ ಯಾರು ಧಮ್ಕಿ ಹಾಕಿದ್ದಾರೆ ಎಂಬುದನ್ನು ಬಹಿರಂಗಪಡಿಸಿಲ್ಲ ಎಂಬುದು ತಿಳಿದು ಬಂದಿದೆ.
ಶ್ರೀರಾಮನಿಗೆ ಅವಹೇಳನ ಮಾಡಿದ ಮಂಗಳೂರಿನ ಸಂತ ಜೆರೋಸಾ ಶಾಲೆಯ ಶಿಕ್ಷಕಿ ಸಿಸ್ಟರ್ ಪ್ರಭಾ ವಿರುದ್ಧ ವಿದ್ಯಾರ್ಥಿಗಳು, ಪೋಷಕರು ಹಾಗೂ ಹಿಂದೂ ಕಾರ್ಯಕರ್ತರು ಶಾಲೆಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದ್ದರು ಶಾಲೆಯ ವಠಾರ ಇಂದು ಕೇಸರಿಮಯವಾಗಿದ್ದನು ಕಂಡು ಶಾಲೆಯ ಆಡಳಿತ ಮಂಡಳಿ ನಿಬ್ಬೆರಗಾಗಿತ್ತು ಕ್ಷೇತ್ರದ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಹಾಗೂ ಪೋಷಕರು ,ಹಿಂದೂ ಕಾರ್ಯಕರ್ತರು ಕೂಡ ಇದರ ಬಗ್ಗೆ ತನಿಖೆ ನಡೆಯಲೇ ಬೇಕೆಂದು ಪಟ್ಟುಹಿಡಿದಿದ್ದರು.
ನೀವು ನಿಮ್ಮ ತಪ್ಪು ಒಪ್ಪಿಕೊಳ್ಳದೇ ಇದ್ದರೆ ನಾವು ಬಿಡುವುದಿಲ್ಲ ನಿಮ್ಮ ದಾರಿಗೆ ನಿಮಗೆ, ನಮ್ಮ ದಾರಿ ನಮಗೆ ಅಂತ ಎಚ್ಚರಿಕೆ ನೀಡುವ ಮೂಲಕ ಮುಖ್ಯ ಶಿಕ್ಷಕಿಯನ್ನು ಶಾಸಕ ವೇದವ್ಯಾಸ್ ಕಾಮತ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಅಮಾನತು ಮಾಡಿದರೂ ತಪ್ಪು ಒಪ್ಪಿಕೊಳ್ಳದ ಆಡಳಿತ ಮಂಡಳಿಯ ನಡೆ ಮತ್ತೆ ಗೊಂದಲ ಮತ್ತು ಉದ್ವಿಗ್ನತೆಗೆ ಕಾರಣವಾಗಿದೆ.


