Tuesday, October 21, 2025
Flats for sale
Homeಕ್ರೈಂಮಂಗಳೂರು : ಜೈಲಿನಲ್ಲಿ ಖೈದಿಯಿಂದ ಸಹಖೈದಿ ಮೇಲೆ ದಾಳಿ ಪ್ರಕರಣ : ಬರ್ಕೆ ಠಾಣೆಯಲ್ಲಿ (KCOCA)...

ಮಂಗಳೂರು : ಜೈಲಿನಲ್ಲಿ ಖೈದಿಯಿಂದ ಸಹಖೈದಿ ಮೇಲೆ ದಾಳಿ ಪ್ರಕರಣ : ಬರ್ಕೆ ಠಾಣೆಯಲ್ಲಿ (KCOCA) ಕಾಯ್ದೆಯಡಿ ಪ್ರಕರಣ ದಾಖಲು..!

ಮಂಗಳೂರು : ಜೂಲೈ 12 ರಂದು ಮಂಗಳೂರು ಜೈಲಿನಲ್ಲಿ ನಾಲ್ಕು ಜನ ಆರೋಪಿಗಳು ಅದೇ ಜೈಲಿನಲ್ಲಿದ್ದಂತಹ ಇನ್ನೊಬ್ಬ ಆರೋಪಿಯ ಮೇಲೆ ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಈ ಪ್ರಕರಣದ ತನಿಖೆಯ ಸಂದರ್ಭದಲ್ಲಿ ದಾಳಿ ನಡೆಸಿದ ಆರೋಪಿಗೆ ಬೆಂಬಲ ನೀಡಿದವರಿಗೂ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (KCOCA) ಸೆಕ್ಷನ್‌ಗಳನ್ನು ದಾಖಲಿಸಲಾಗಿದೆ.ಯಾರೇ ಆರೋಪಿತರು ಈಗಾಗಲೇ 2 ಪ್ರಕರಣವಿದ್ದು ಮತ್ತೊಂದು ಪ್ರಕರಣದಲ್ಲಿ ಭಾಗಿಯಾಗಿದ್ದರೆ ಅವರ ವಿರುದ್ಧ (KCOCA) ಸೆಕ್ಷನ್ ದಾಖಲಾಗುವುದು ಇದರಲ್ಲಿ ಇವರು ಮಾಡಿದಂತಹ ಕೃತ್ಯಕ್ಕೆ 3 ವರ್ಷ ಶಿಕ್ಷೆ ವಿಧಿಸಿದ್ದು (KCOCA) ಆಕ್ಟ್ ನಲ್ಲಿ 5 ವರ್ಷದಿಂದ ಜೀವಾವಧಿ ಶಿಕ್ಷೆಯಾಗುವ ವರೆಗೆ ನಿಬಂಧನೆ ಇದೆ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಧನುಷ್ ಭಂಡಾರಿ ಅಲಿಯಾಸ್ ಧನು, ದಿಲೇಶ್ ಬಂಗೇರಾ ಅಲಿಯಾಸ್ ದಿಲ್ಲು, ಲಾಯ್ ವೇಗಾಸ್ ಅಲಿಯಾಸ್ ಲಾಯ್ ಮತ್ತು ಸಚಿನ್ ತಲಪಾಡಿ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (BNS) ಸೆಕ್ಷನ್ 308(4) ಮತ್ತು 3(5) ರ ಅಡಿಯಲ್ಲಿ ಪ್ರಕರಣ ಸಂಖ್ಯೆ 76/2025 ದಾಖಲಾಗಿದೆ. ಆರೋಪಿಗಳು ಸಹ ಕೈದಿಯ ಮೇಲೆ ಹಲ್ಲೆ ನಡೆಸಿ 20,000 ರೂ.ಗಳನ್ನು ಸುಲಿಗೆ ಮಾಡಿದ್ದಾರೆ, ಅದನ್ನು ಪತ್ನಿಯ ಮೂಲಕ ಆರೋಪಿಯು ಒದಗಿಸಿದ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ಮಾಹಿತಿ ದೊರೆತಿದೆ.

ಹೆಚ್ಚುವರಿಯಾಗಿ, ಸಂಘಟಿತ ಅಪರಾಧ ಜೊತೆ ಬೆಂಬಲ ನೀಡಿದ ಯಾವುದೇ ವ್ಯಕ್ತಿ, ಪೂರ್ವ ಅಪರಾಧ ನಿರ್ಣಯಗಳಿಲ್ಲದಿದ್ದರೂ ಸಹ, ಕಾಯ್ದೆಯಡಿಯಲ್ಲಿ ಐದು ವರ್ಷದಿಂದ ಜೀವಾವಧಿ ಶಿಕ್ಷೆಯವರೆಗೆ ಶಿಕ್ಷೆಗೆ ಗುರಿಯಾಗುತ್ತಾನೆ ಎಂದು ಕಾಯ್ದೆಯಲ್ಲಿ ಉಲ್ಲಂಘಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ .

RELATED ARTICLES

LEAVE A REPLY

Please enter your comment!
Please enter your name here

Most Popular