ಮಂಗಳೂರು ; ಮಂಗಳೂರಿನ ಅಗ್ನಿಶಾಮಕ ಕೇಂದ್ರ ದ ಹತ್ತಿರ ಬಿ.ಆರ್ ಕರ್ಕೇರ ರಸ್ತೆ ಬಳಿ ಡಾ. ಎಂ.ಆರ್ ಶೆಟ್ಟಿ ಸ್ಮಾರಕ ವೃತ್ತವನ್ನು ಉಧ್ಘಾಟಿಸಲಾಯಿತು. ಕಾರ್ಯಕ್ರಮವನ್ನು ವಿಧಾನ ಸಭಾ ಸಭಾದ್ಯಕ್ಷರು ಯು.ಟಿ ಖಾದರ್ ರವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.ವೇದಿಕೆಯಲ್ಲಿರುವ ಗಣ್ಯರಿಗೆ ಹಿಮಾ ಊರ್ಮಿಳಾ ಶೆಟ್ಟಿಯವರು ಕಿರುಕಾಣಿಕೆ ನೀಡಿ ಸ್ವಾಗತಿಸಿದರು.

ಬಳಿಕ ಮಾತನಾಡಿದ ವಿಧಾನ ಸಭಾ ಸಭಾದ್ಯಕ್ಷ ಯು.ಟಿ ಖಾದರ್ ಅವರು ಎಮ್.ಆರ್ ವೃತ್ತ ಇದು ಮಂಗಳೂರಿಗೆ ಬೇಕಾದ ಶೈಕ್ಷಣಿಕ ಅಭಿವೃದ್ಧಿಗೆ ನೆನಪು,ಅಭಿವೃದ್ದಿಗೆ ಪೂರಕವಾದ ಕೊಡುಗೆ ಎಂಆರ್ ಶೆಟ್ಟಿಯವರು ನೀಡಿದು. ರಾಜ್ಯದಲ್ಲಿ ಮೊದಲಬಾರಿಗೆ ಪ್ರಾರಂಭವಾದ ಕೊರ್ಸ್ ಅಂದರೆ ಫಿಸಿಯೊಥೆರಫಿ,ಅವತ್ತಿನ ಕಾಲದಲ್ಲಿ ಪ್ರಾರಂಭ ಮಾಡಿದ ಸಂಸ್ಥೆ ಇಂದು ಮರವಾಗಿ ಬೆಳೆದಿದೆ. ಭವಿಷ್ಯದ ಜನರಿಗೆ ಕ್ಕೆ ಅವರನ್ನು ನೆನೆಪಿಸಿಕೊಳ್ಳಲು ಇದು ಒಂದು ಸಮಯವೆಂದರು,ವಿಧ್ಯಾರ್ಥಿ ನಾಯಕನಾಗಿರುವಾಗ ಅವರನ್ನು ಅತ್ತಿರದಿಂದ ನಾನು ಕಂಡಿದ್ದೇನೆ,ಯಾವಗಲೂ ನಗುಮುಖದಿಂದ ಇರುವ ಅವರ ನೆನಪು ಸ್ಮರಣೀಯ ಎಂದರು .ವ್ಯಕ್ತಿಗತವಾಗಿ ಅವರಂತೂ ವಿಶಿಷ್ಟ, ಹುಟ್ಟುವಾಗ ಉಸಿರು ಇರುತ್ತದೆ ಮೃತಪಟ್ಟ ಮೇಲೆ ಹೆಸರು ಮಾತ್ರ ಇರುವುದು ಎಂದು ಹೇಳಿದರು.
ಬಳಿಕ ಮಾತನಾಡಿದ ಸಂಸದ ಕ್ಯಾ.ಬ್ರಿಜೇಶ್ ಚೌಟ ಮನುಷ್ಯನ ವ್ಯಕ್ತಿತ್ವ ಅವರು ತಿರಿಕೊಂಡ ಮೇಲೆ ಅಳಿಯುವಂತದು ನಿಜ.ಅವರ ನಗು ಮುಖ ಇವತ್ತಿಗೂ ನೆನಪಿದೆ,ಸಮಾಜಕ್ಕಾಗಿ ಒಳ್ಳೆಯ ಕೆಲಸ ಮಾಡಿದಕ್ಕೆ ಅವರಿಗೆ ಧನ್ಯವಾದ ಹೇಳಿದರು,ಈ ರೀತಿಯ ಚಟುವಟಿಕೆಗಳು ಮಂಗಳೂರಿನಲ್ಲಿ ನಡೆಯಲಿ,ಅದನ್ನು ಉಳಿಸಿ ಬೆಳೆಸುಂತಹ ಕೆಲಸ ಮಂಗಳೂರಿನ ಜನತೆ ಮಾಡಲಿ,ನಗರದ ಅಭಿವೃದ್ಧಿ ಗೆ ಇನ್ನಷ್ಟು ಹೆಚ್ಚು ಮಾಡಲು ಇತರರಿಗೂ ಪ್ರೇರಣೆಯಾಗಲಿ ಎಂದರು.
ಎಂ.ಆರ್ ಶೆಟ್ಟಿ ಸ್ಮಾರಕ ಉಧ್ಘಾಟನೆ ವೇಳೆ ಮತನಾಡಿದ ಶಾಸಕ ವೇದವ್ಯಾಸ್ ಕಾಮತ್ ರವರು ಎಂ.ಆರ್ ಶೆಟ್ಟಿ ಕುಟುಂಬವರನ್ನು ಶ್ಲಾಘಿಸಿದರು, ಸ್ವತಂತ್ರ ಸಂದರ್ಭದಿಂದ ಹಿಡಿದು ಇವತ್ತಿನವರೆಗೂ ಅಭಿವೃದ್ಧಿ ಯಲ್ಲಿ ಕೈಜೊಡಿಸಿದವರನ್ನು ಅವರನ್ನು ನೆನೆಯಬೇಕು,ಎಂ.ಆರ್ ಶೆಟ್ಟಿಯವರ ಸಾಧನೆ ಕೊಡುಗೆ ಕೊಂಡಾಡಿದರು,ಮಂಗಳೂರಿನ ಅಭಿವೃದ್ಧಿಗೆ ಕೈಜೊಡಿಸಿದವರ ಹೆಸರನ್ನು ಇಟ್ಡಿದ್ದಾರೆ,ಅವರ ಕೊಡುಗೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು,ಇತಿಹಾಸ ವನ್ನು ತೊರಿಸುವಂತಹ ಕಾರ್ಯನಡೆಯಬೇಕಿದೆ. ನೂರಾರು ವಿದ್ಯಾಸಂಸ್ಥೆ ,ಆಸ್ಪತ್ರೆ ನ್ನು ಕೊಡುಗೆಯಾದಂತಹ ಜಿಲ್ಲೆ ಇದಾಗಿದೆ. ಮಹಾನಗರ ಪಾಲಿಕೆ ಸರ್ಕಲ್ ಮಾಡುತ್ತಾರೆ ಆದರೆ ಡಾ.ಎಂ.ಆರ್ ಶೆಟ್ಟಿಯವರ ಸರ್ಕಲ್ ನ್ನು ಕುಟುಂಬದವರೆ ಮಾಡಿದ್ದು ಅದರ ಮೈಂಟೆನ್ ನಿರ್ವಹಣೆ ಮಾಡುವುದು ಉತ್ತಮವಾದದು ಎಂದರು.
ಸ್ಥಳೀಯ ಕಾರ್ಪೊರೇಟರ್ ದಿವಾಕರ್ ಮಾತನಾಡಿ ಪಾಂಡೇಶ್ವರ ಸೌಂದರ್ಯಕ್ಕೆ ಕಿರೀಟ ತೊಡಿಸಿದಂತಾಗಿದೆ,ಬಡವರ ಆಸ್ಪತ್ರೆ ಅಂದರೆ ಅದು ಎಂ.ಬಿ ಶೆಟ್ಟಿ ,ಅವರ ಕುಟುಂಬಸ್ಥರು ಈ ಸರ್ಕಲ್ ನ ಎಲ್ಲಾ ಜವಾಬ್ದಾರಿ ಹೊತ್ತಿದ್ದು ಸಂತಸದ ವಿಷಯ ಎಂದರು,ಎಂವಿ ಶೆಟ್ಟಿಯವರ ಕಾರ್ಯವೈಕರಿಯನ್ನು ನೆನೆಸಿದರು.ಅವರೊಂದಿಗೆ ಕಳೆದ ದಿನಗಳನ್ನು ನೆನೆಸಿ ಅವರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಶ್ಲಾಘಿಸಿದರು.
ವೇದಿಕೆಯಲ್ಲಿ ಡಾ.ರಂಜಿತ್ ಶೆಟ್ಟಿ ಕಾಮತ್,ಕಾರ್ಪೊರೇಟರ್ ದಿವಾಕರ್ ಪಾಂಡೆಶ್ವರ್, ಹಿಮಾ ಉರ್ಮಿಳಾ ಶೆಟ್ಟಿ, ರೋಹಿಲಾ ಶೆಟ್ಟಿ, ದಿವ್ಯಾಂಜಲಿ ಶೆಟ್ಟಿ,ಡಾ.ಯು.ಇಫ್ತಿಕಾರ್ ಆಲಿ,ಹಾಗೂ ಇನ್ನಿತರು ಉಪಸ್ಥಿತರಿದ್ದರು.