Monday, March 31, 2025
Flats for sale
Homeಜಿಲ್ಲೆಮಂಗಳೂರು : ಜಿಲ್ಲೆಯಲ್ಲಿ ಮಿತಿ ಮೀರಿದ ಗೋಮಾಂಸ ಮಾಫಿಯಾ ಮಟ್ಟ ಹಾಕಲು ಜಿಲ್ಲಾಡಳಿತ-ಪೊಲೀಸ್ ಇಲಾಖೆಗೆ ಬಜರಂಗದಳ...

ಮಂಗಳೂರು : ಜಿಲ್ಲೆಯಲ್ಲಿ ಮಿತಿ ಮೀರಿದ ಗೋಮಾಂಸ ಮಾಫಿಯಾ ಮಟ್ಟ ಹಾಕಲು ಜಿಲ್ಲಾಡಳಿತ-ಪೊಲೀಸ್ ಇಲಾಖೆಗೆ ಬಜರಂಗದಳ ಒತ್ತಾಯ,ಉಗ್ರ ಹೋರಾಟದ ಎಚ್ಚರಿಕೆ …!

ಮಂಗಳೂರು : ಜಿಲ್ಲೆಯಾದ್ಯಂತ ಕಾನೂನು ಕಾಯ್ದೆಗಳ ಮೀರಿ ಪ್ರತಿದಿನ ನೂರಾರು ಗೋವುಗಳನ್ನು ಹಿಂಸಾತ್ಮಕವಾಗಿ ಸಾಗಾಟ ಹಾಗೂ ಗೋಹತ್ಯೆಯನ್ನು ನಡೆಸುವ ದೊಡ್ಡ ಗೋಮಾಂಸ ಮಾಫಿಯಾ ಕಾರ್ಯಾಚರಿಸುತ್ತಿದ್ದು ತಕ್ಷಣ ಅದನ್ನು ಮಟ್ಟ ಹಾಕಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತವನ್ನು ಮತ್ತು ಪೊಲೀಸ್ ಇಲಾಖೆಯನ್ನು ವಿಶ್ವ ಹಿಂದೂ ಪರಿಷತ್ ಬಜರಂಗದಳ ಆಗ್ರಹಿಸಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಳೆದ 2 ವಾರಗಳಿಂದ 4 ಕಡೆ ಅಕ್ರಮ ಗೋಮಾಂಸ ಸಾಗಾಟದ ಬಗ್ಗೆ ಬಜರಂಗದಳ ಕಾರ್ಯಕರ್ತರು ಕೊಟ್ಟ ಮಾಹಿತಿ ಮೇರೆಗೆ ಪೊಲಿಸರು ವಾಹನಗಳನ್ನು ತಡೆದು ಅಂದಾಜು ಒಂದು ಟನ್ ಗೂ ಅಧಿಕ ಅಕ್ರಮ ಗೋಮಾಂಸ ಪೊಲೀಸರು ವಶಪಡಿಸುವ ಉತ್ತಮ ಕಾರ್ಯ ಮಾಡಿದರೂ ಅಪರಾಧಿಗಳನ್ನು ಬಂಧಿಸುವ ಹಾಗೂ ಇನ್ನಿತರ ಮುಂದಿನ ಕ್ರಮಗಳನ್ನು ಜರಗಿಸಿಲ್ಲ ಎಂದು ಹೇಳಿದ್ದಾರೆ. ಅಕ್ರಮ ಕಸಾಯಿಖಾನೆಗಳು ಜಿಲ್ಲೆಯಲ್ಲಿ ಅವ್ಯಾತವಾಗಿ ನಡೆಯುತ್ತಿದ್ದು ಸುರತ್ಕಲ್ ಜೋಕಟ್ಟೆ, ತಣ್ಣೀರು ಬಾವಿ, ಕುದ್ರೋಳಿ ಮತ್ತು ಫರಂಗಿಪೇಟೆ, ಸೂರಲ್ಪಾಡಿ, ಹಂಡೇಲು, ಕಾರ್ನಾಡು ಈ ಜಾಗಗಳಲ್ಲಿ ಅಕ್ರಮ ಕಸಾಯಿಖಾನೆ ನಡೆಯುತ್ತಿದ್ದು ಇದಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ತಿಳಿಸಿದ್ದಾರೆ.

ಗೋ ಹತ್ಯೆ ಅಕ್ರಮ ಗೋಸಾಗಾಟದ ಬಗ್ಗೆ ಸಂಘಟಿತವಾಗಿ ಕಾರ್ಯಾಚರಿಸುತ್ತಿರುವ ಗೋಮಾಂಸ ಮಾಫಿಯವನ್ನು ಮಟ್ಟ ಹಾಕಿ ಈ ಕೆಳಗಿನ ಕ್ರಮ ಕೈಗೊಳ್ಳಲು ನಮ್ಮ ಬೇಡಿಕೆ ಜಿಲ್ಲಾಡಳಿತಕ್ಕೆ ಮತ್ತು ಪೊಲೀಸ್ ಇಲಾಖೆಗೆ ತಿಳಿಸುತ್ತಾ ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಮತ್ತೆ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಹಲವಾರು ಕಡೆ ಮಾಂಸದ ಅಂಗಡಿಯ ಲೈಸೆನ್ಸ್ ತೆಗೆದುಕೊಂಡು ದನದ ಮಾಂಸ ಮಾರಾಟ ಮಾಡಲಾಗುತ್ತಿದೆ ಇದರ ಮೇಲೆ ನಿಗಾ ಇಟ್ಟು ಅಲ್ಲಿಗೆ ಎಲ್ಲಿಂದ ಗೋಮಾಂಸ ಬರುತ್ತದೆ ಎಂದು ತನಿಖೆ ಮಾಡಿ ಗೋಮಾಂಸ ಸರಬರಾಜು ಮಾಡುವ ಅಕ್ರಮ ಕಸಾಯಿ ಖಾನೆಗಳನ್ನು ಗುರುತಿಸಿ ಅವುಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳಬೇಕು. ಹೋಟೆಲ್ ಗಳಲ್ಲಿ ಬೀಫ್ ಪದಾರ್ಥ ಸಿಗುತ್ತಿದ್ದು ಅವುಗಳನ್ನು ಗೋಮಾಂಸದಿಂದಲೇ ಮಾಡಿದೆಂದ ಹೇಳಲಾಗುತ್ತಿದ್ದು ಅವರಿಗೆ ಅಕ್ರಮಗೋಮಾಂಸ ಸರಬರಾಜು ಮಾಡುವವರ ಮೇಲೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇದುವರೆಗೆ ಜಿಲ್ಲೆಯಲ್ಲಿ ಪ್ರಕರಣ ದಾಖಲಿಸಿರುವ ಕಸಾಯಿ ಖಾನೆಗಳ ಕಟ್ಟಡಗಳನ್ನೆಲ್ಲ ಮುಟ್ಟುಗೋಲು ಹಾಕಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಪ್ರಾಂತ ಗೋರಕ್ಷಾ ಪ್ರಮುಖ್ ಸುನಿಲ್ ಕೆ ಆರ್,ಜಿಲ್ಲಾಧ್ಯಕ್ಷರು ಎಚ್ ಕೆ ಪುರುಷೋತ್ತಮ,ಕಾರ್ಯದರ್ಶಿ ರವಿ ಅಸೈಗೋಳಿ, ಜಿಲ್ಲಾ ಸಂಯೋಜಕ ನವೀನ್ ಮೂಡುಶೆಡ್ಡೆ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular