ಮಂಗಳೂರು ; ಜಪ್ಪಿನಮೊಗರು ಶ್ರೀ ಗಣೇತ್ಸೋತ್ಸವ ಸಮಿತಿಯಿಂದ ನಡೆಯುವ 17 ನೇ ವರ್ಷದ ಸಾರ್ವಜನಿಕ ಗಣೇತ್ಸೊತ್ಸವದ ಮಹಾಗಣಪತಿ ದೇವರ ಪ್ರತಿಸ್ಥಾಪನ ಕಾರ್ಯಕ್ರಮ ಇಂದು ವಿಜೃಂಭಣೆಯಿಂದ ನಡೆಯಿತು.



ಪ್ರಾಸ್ತಾವಿಕ ಮಾತನಾಡಿದ ಸಮೀತಿಯ ಅಧ್ಯಕ್ಷರು ಕಳೆದ 17 ವರ್ಷಗಳಿಂದ ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ರವರು ಉಧ್ಘಾಟಿಸುತ್ತಿದ್ದು ಇಂದೊಂದು ಪುಣ್ಯದ ಕೆಲಸವೆಂದು ವಿವರಿಸುತ್ತಾ ವೇದಿಕೆಯಲ್ಲಿರುವ ಗಣ್ಯರನ್ನು ಸಮಿತಿಯ ಅಧ್ಯಕ್ಷರು ನಾಗೇಂದ್ರ ರವರು ಸ್ವಾಗತಿಸಿದರು.
ಉದ್ಘಾಟನೆ ಬಳಿಕ ಮಾತನಾಡಿದ ಮಾಜಿ ಸಚಿವ ಕೃಷ್ಣ .ಜೆ ಪಾಲೆಮಾರ್ ರವರು 17 ವರ್ಷಗಳಿಂದ ನಿರಂತರ ಆರಾಧನಾ ಮಾಡುತ್ತಾ ಬಂದಿರಿ ಇದೀಗ ಜಪ್ಪಿನ ಮೊಗರು ಗ್ರಾಮದ ಜನರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿದೆ,ಸಾತ್ವಿಕರಾಗಿ ,ದೇವರ ಮೇಲೆ ಭಕ್ತಿ ಬಂದಿದ್ದು ಪ್ರಕೃತಿಯ ಆರಾಧನೆಯಲ್ಲಿ ತೊಡಗಿದ್ದು ವರ್ಷದಿಂದ ವರ್ಷಕ್ಕೆ ಈ ಗ್ರಾಮದಲ್ಲಿ ಅಭಿವೃದ್ಧಿ ಉಂಟಾಯಿತು ಎಂದರು. ಆದರೆ ಒಬ್ಬ ಅಧ್ಯಾಪಕರನ್ನು ಗುರುತಿಸಿ ಸನ್ಮಾನಿಸುವುದು ಒಂದು ಒಳ್ಳೆಯ ಕೆಲಸವೆಂದರು.ಹಾಗೂ ಈ ಸಮಿತಿ ನಿರ್ಧರಿಸಿದಂತೆ ಆದಷ್ಟು ಬೇಗ ಈ ಸ್ಥಳ ಖರಿದಿಸಲಿ ಇದಕ್ಕೆ ನನ್ನ ಸಹಕಾರವಿದೆ ಬಳಿಕ ಸಮಸ್ತ ಬಾಂದವರಿಗೆ ಗಣೇಶ ಚತುರ್ಥಿ ಯ ಶುಭಾ ಹಾರೈಸಿದರು.
ಕಳೆದ 17 ವರ್ಷಗಳಿಂಗ ಜಪ್ಪಿನಮೊಗರು ಸರಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಸರೋಜ ಶಂಕರ್ ಪಾಲೆಮಾರ್ ರವರಿಗೆ ಸನ್ಮಾನಿಸಿದರು.
ಸನ್ಮಾನದ ಬಳಿಕ ಮಾತನಾಡಿದ ಸರೋಜ ಶಂಕರ್ ಪಾಲೆಮಾರ್ ರವರು ಈ ಸನ್ಮಾನಿಸಿದ ಎಲ್ಲಾ ಗಣ್ಯರನ್ನು ಅಭಿನಂದದಿಸಿದರು ಕೃಷ್ಣ ಜೆ ಪಾಲೆಮಾರ್ ರವರು ಈ ಶಾಲೆಯ ಅಭಿವೃದ್ಧಿ ಗೆ ಕೈಜೊಡಿಸಿದ್ದರುವೆಂದರು. ಮಕ್ಕಳಿ ಗೆ ಒಳ್ಳೆಯ ವಿದ್ಯೆ ಕೊಟ್ಟಿದ್ದು ಅದರ ಬಗ್ಗೆ ಹೆಮ್ಮೆ ಇದೆ ಎಂದರು. ಈ ಗಣೇಶ್ಶೋತ್ಸವ ಕಾರ್ಯಕ್ರಮ ಇನ್ನೂ ಮಂದೆ ನಿರ್ಗಳವಾಗಿ ನಡೆಯಲಿ ಎಂದರು.
ವೇದಿಕೆಯಲ್ಲಿ ಉದ್ಯಮಿ ಲಯನ್ಸ್ ಸಂಜೀವ ಶೇಖ,ಯುವ ಉದ್ಯಮಿ ಲೊಹಿತಾನಂದ ರೈ,ಶ್ರೀಮತಿ ತಂಗಲಮ್ಮಿ ಪಚ್ಚಪ್ಪನ್ ಬೈಕಂಪಾಡಿ,ಶ್ರೀ ಮತಿ ಲಯನ್ ಸ್ವರೂಪ ಎಂ.ಶೆಟ್ಟಿ,ಶ್ರೀಮತಿ ಲತಾ ತುಳಸಿದಾಸ್ ಶೆಟ್ಟಿ, ನಿಕಟಪೂರ್ವ ಕಾರ್ಪೊರೆಟರ್ ಟಿ. ಪ್ರವೀಣ್ ಚಂದ್ರ ಆಳ್ವ,ಗ್ಯಾರಂಟಿ ಯೋಜನೆ ಸಮಿತಿಯ ಅಧ್ಯಕ್ಷರು ಸುರೇಂದ್ರ ಕಂಬಳಿ,ಶ್ರೀ ಮತಿ ಸರೋಜ ಶಂಕರ್ ರವರು ಉಪಸ್ಥಿತರಿದ್ದರು.
ಕವಿತ ಗಂಗಾಧರ್ ರವರು ಸನ್ಮಾನ ಪತ್ರ ವಾಚಿಸಿದರು. ಧನ್ಯವಾದ ಸಮಾರ್ಪಣೆಯನ್ನು ಸುಧಾಕರ್ ಜೆ. ಯವರು ವಹಿಸಿದ್ದು ಕಾರ್ಯಕ್ರಮದ ನಿರೂಪಣೆಯನ್ನು ಲಕ್ಷೀಶ ಸುವರ್ಣ ರವರು ನೆರೆವೆರೆಸಿದರು.