Wednesday, September 17, 2025
Flats for sale
Homeಜಿಲ್ಲೆಮಂಗಳೂರು : ಜನಪ್ರತಿನಿಧಿಗಳ ಹಿಂಬಾಲಕರ ಷಡ್ಯಂತ್ರಕ್ಕೆ ಬಲಿಪಶು,ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಮಾನನಷ್ಟ ಮೊಕದ್ದಮೆ...

ಮಂಗಳೂರು : ಜನಪ್ರತಿನಿಧಿಗಳ ಹಿಂಬಾಲಕರ ಷಡ್ಯಂತ್ರಕ್ಕೆ ಬಲಿಪಶು,ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ತಯಾರಿ : ಭೂವಿಜ್ಞಾನ ಇಲಾಖೆ ಅಧಿಕಾರಿ ಕೃಷ್ಣ ವೇಣಿ…!

ಮಂಗಳೂರು : ಯಾರದೋ ಷಡ್ಯಂತ್ರಕ್ಕೆ ಬಲಿಯಾಗಿ ಸುಳ್ಳು ಪ್ರಕರಣದ ಹಿನ್ನೆಲೆ ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಕೃಷ್ಣವೇಣಿ ಅವರ ಅಮಾನತು ಆದೇಶ ರದ್ದುಪಡಿಸಿ ಹೈಕೋರ್ಟ್ ಆದೇಶ ನೀಡಿದ್ದು ಯಾವುದೇ ಚ್ಯುತಿ ತಾರದಂತೆ ಅವರ ಪ್ರಸ್ತುತ ಹುದ್ದೆಯಲ್ಲಿಯೇ ಮುಂದುವರಿಸಬೇಕು ಎಂದು ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸೂಚಿಸಿದ ವರದಿ ಪ್ರಕಟವಾಗಿತ್ತು.

ಮನೆ ಕಟ್ಟುವ ಸಂಬAಧ ದೃಢೀಕರಣ ನೀಡಲು ಲಂಚ ಪಡೆದಿದ್ದರು ಎಂದು ಆರೋಪಿಸಿ ಲೋಕಾಯುಕ್ತ ಅಧಿಕಾರಿಗಳೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಕೃಷ್ಣವೇಣಿ ಅವರನ್ನು ಮೇ 28 ರಂದು ಬಂಧಿಸಿದ್ದರು. ಇದರ ವಿರುದ್ಧ ಹೈಕೋರ್ಟ್ಗೆ ಸೂಕ್ತ ದಾಖಲೆಗಳೊಂದಿಗೆ ಕೃಷ್ಣವೇಣಿ ರಿಟ್ ಅರ್ಜಿ ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿದ ನ್ಯಾಯಾಲಯ ಕೃಷ್ಣವೇಣಿ ಅವರನ್ನು ಹುದ್ದೆಯಲ್ಲಿ ಮುಂದುವರೆಸಬಹುದು ಎಂದು ಆದೇಶ ನೀಡಿದೆ.

ಯಾರೋ ನೀಡಿದ ಸುಳ್ಳು ದೂರನ್ನು ಆಧರಿಸಿ ಲೋಕಾಯುಕ್ತ ದಾಳಿ ನಡೆಸಿ ನನ್ನನ್ನು ಬಂಧಿಸಿದ್ದಾಗಿ ಕೃಷ್ಣವೇಣಿ ಆರೋಪಿಸಿದ್ದರು.

ಮಾಧ್ಯಮದ ವರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ಅಬೂಬಕ್ಕರ್ ಎಂಬವರು ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದ್ದರು. ಇದಕ್ಕೆ ಸ್ಪಷ್ಟನೆ ನೀಡಿದ ಕೃಷ್ಣವೇಣಿ ಅವರು ಕೋರ್ಟ್ ನೀಡಿದ ಆದೇಶ ಪ್ರತಿ ನೀಡಿ ಸ್ಪಷ್ಟನೆ ನೀಡಿದ್ದೇನೆ ಇದರಲ್ಲಿ ಸುಳ್ಳು ಹೇಳುವ ಅಗತ್ಯ ಇಲ್ಲ.ಕೆಲವೊಂದು ಜನಪ್ರತಿನಿಧಿಗಳ ಹಿಂಬಾಲಕರ ಷಡ್ಯಂತ್ರಕ್ಕೆ ನನ್ನನು ಬಲಿ ಪಶು ಮಾಡಿದ್ದಾರೆ..ನಾನು ಯಾವುದೇ ಲಂಚ ತೆಗೊಂಡಿಲ್ಲ..ನನ್ನ ಮನೆಗೆ ದಾಳಿ ನಡೆಸಿದ ಸಂದಭದಲ್ಲೂ ಯಾವುದೇ ಅಕ್ರಮ ಹಣ ಸಿಕ್ಕಿಲ..ಕೋಟಿ ಹಣ ಸಿಕ್ಕಿದೆ ಎಂದು ಸುಳ್ಳು ಸುದ್ಧಿ ಹಬ್ಬಿಸುತ್ತಿದ್ದಾರೆ..ಅವರ ಮೇಲೆ ನಾನು ಮಾನ ನಷ್ಟ ಮೊಕದ್ದಮೆ ಹೂಡಲಿದ್ದೇನೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣ ವೇಣಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular