ಮಂಗಳೂರು : ಮಂಗಳೂರಿನಲ್ಲಿ ಪ್ರಪಥಮ ಬಾರಿಗೆ ನಡೆಯುವ ಚೀಫ್ ಮಿನಿಸ್ಟರ್ ಮಂಗಳೂರು ಇಂಟರ್ನ್ಯಾಷನಲ್ ಚಾಲೆಂಜ್ ಬ್ಯಾಡ್ಮಿಂಟನ್ ಕಾರ್ಯಕ್ರಮ ಕ್ರಮ ಇಂದು ನಡೆಯಿತು. ಈ ಕಾರ್ಯಕ್ರಮ ವನ್ನು ಸಿ ಎಂ ಸಿದ್ದರಾಮಯ್ಯ ರವರು ದೀಪಾ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.


ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ನ ಅಧ್ಯಕ್ಷರಾದ ಮನೋಜ್ ಕುಮಾರ್ ರವರು ಮಾತನಾಡಿ ಈ ಕ್ರೀಡಾ ಕೂಟಕ್ಕೆ ಸಹಕಾರ ಮಾಡಿದ ಎಲ್ಲರನ್ನೂ ಶ್ಲಾಘಿಸಿದರು, ಇದೊಂದು ಹೆಮ್ಮೆಯ ವಿಚಾರ ಈ ಕ್ರೀಡಾ ಮಂಗಳೂರಿನಲ್ಲಿ ನಡೆದಿರುವುದು ಕನಸು ನನಸಾದಂತೆ,13 ,ವರ್ಷದ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ ಎಂದು ಹೇಳಿದರು.ಸಹಕಾರ ನೀಡಿದ ಸರಕಾರದ ಎಲ್ಲಾ ಮಂತ್ರಿಗಳಿಗೆ ಅಭಿನಂದಿಸಿದರು.
ಬಳಿಕ ಮಾತನಾಡಿದ ದ.ಕ ಜಿಲ್ಲೆಯ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು ಕಾರಣರಾದ ಸಂತೋಷ್ ರವರನ್ಜು ಶ್ಲಾಘಿಸಿದರು, ಮುಖ್ಯಮಂತ್ರಿಯವರು ಉದ್ಘಾಟನೆ ಮಾಡಿದ್ದು ಹೆಮ್ಮೆಯ ವಿಚಾರ,ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ತರಹ ಆಗಬೇಕು, ಇದಿ ಕರ್ನಾಟಕದ ಕ್ಕೆ ಮುಖ್ಯ ನಗರವಾಗಿ ಬೆಳೆಯಬೇಕು ಎಂದರು,ಕ್ರೀಡೆಗೆ ಪ್ರೋತ್ಸಾಹ ಕೊಟ್ಟು ಉತ್ತೇಜನ ನೀಡಿವುದು ನಮ್ಮ ಉದ್ದೇಶ,ಮುಂದೆ ಮಂಗಳೂರಿಗೆ ಬಂದು ಹೂಡಿಕೆ ಮಾಡಬೇಕು ಅದಕ್ಕೆ ಬೇಕಾದ ಎಲ್ಲಾ ಕಾರ್ಯಕ್ರಮ ನಾವು ಮಾಡುತ್ತೇವೆ ಎಂದರು, ಎಲ್ಲಾ ಕ್ಷೇತ್ರದಲ್ಲಿ ಮಂಗಳೂರು ಮುಂದೆ ಬರಬೇಕು, ಬೆಳವಣಿಗೆಯಾಗಬೇಕು ಎಂದರು.
ಈ ವೇಳೆ ರಾಜ್ಯದ ಖ್ಯಾತ ಬ್ಯಾಂಡಿಟನ್ ಆಟಗಾರರಾದ ಹಾಗೂ ಸಾಧನೆಗೈದ ಅರುಣ್ ಪುವಯ್ಯ ಹಾಗೂ ಅಶೋಕ್ ರವರಿಗೆ ಸನ್ಮಾನಿಸಲಾಯಿತು.
ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ಈ ಪಂದ್ಯಾವಳಿಯಲ್ಲಿ ಭಾಗವಹಿಸಿದರನ್ನು ಶ್ಲಾಘಿಸಿದರು,ಈ ಕಾರ್ಯಕ್ರಮದಲ್ಲಿ ಅತ್ಯಂತ ಸಂತೋಷದಿಂದ ಭಾಗವಹಿಸಿದ್ದೇನೆ, ಮುಂಗಡವಾಗಿಯೆ 70 ನೇ ವರ್ಷದ ಕರ್ನಾಟಕ ರಾಜ್ಯೋತ್ಸವದ ಶುಭಾಶಯ ಕೋರಿದರು,ಜಗತ್ತಿನ ಅತ್ಯಂತ ಕ್ರೀಡೆಯಲ್ಲಿ ಬ್ಯಾಡ್ಮಿಂಟನ್ ಕೂಡ ಒಂದು ನಾನು ಎಲ್ಲಾ ಕ್ರೀಡೆಯಲ್ಲಿ ಭಾಗವಹಿಸಿದ್ದೆನೆ ಆದರೆ ಯಾವುದರಲ್ಲಿ ಪರಿಣಿತಿ ಪಡೆಯಲಿಲ್ಲ,ಇದೊಂದು ಆರೋಗ್ಯ ರಕ್ಷಣೆಗೆ ಉತ್ತಮವಾದ ಆಟ,ಪ್ರಕಾಶ್ ಪಡುಕೋಣೆ,ಕುಲಿಲಾ ಗೋಪಿಚಂದ್ ರವರ ನೆನೆಸಿದರು,ದೇಶಕ್ಕೆ ಪದಕ ತಂದುಕೊಟ್ಟ ಆಟಗಾರರಿಗೆ ಅಭಿನಂದಿಸಿದರು.ಇದು ಮೊದಲನೆ ಬಾರಿ ನಡೆಯುತ್ತಿದೆ,ಈ ಸ್ಟೇಡಿಯಂ ನ್ನು ಅಡಿಗಲ್ಲು ಹಾಕಿದ್ದು ಉದ್ಘಾಟನೆ ಮಾಡಿದ್ದು 35 ಕೋಟಿ ನೀಡದ್ದೆ ಬಳಿಕ ಮುಖ್ಯಮಂತ್ರಿ ಯಾದ ಮೆಲೆ 15 ಕೋಟಿ ನೀಡಿದ್ದೆನೆವೆಂದರು.ಕ್ರೀಡೆಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದೆವೆ 2 % ಉದ್ಯೋಗ ಅವಕಾಶ ಕೂಡ ನೀಡುತ್ತೆವೆ,ಜಗತ್ತಲ್ಲೇ ಜನಸಂಖ್ಯೆ ಯಲ್ಲಿ ನಂಬರ್ 1 ಆದರೆ ಪದಕ ಗೆದ್ದವರು ಕಡಿಮೆ ಮುಂದೆ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದವರರಿಗೆ 5 ಕೋಟಿ ಬಹುಮಾನ ಕೊಡುತ್ತೆವೆ,೩ ಕೋಟಿ,೨ ಕೋಟಿ ರೂಪಾಯಿ ಕೊಟ್ಟು ಸಹಕಾರ ನೀಡುತ್ತೆವೆ ಎಂದರು.ಅರುಣ್ ಪುವಯ್ಯ,ಅಶೋಕ್ ಪುವಯ್ಯ ದೇಶಕ್ಕೆ ಕೀರ್ತಿ ತಂದಿದ್ದಾರೆ ಇವರಿಗೆ ಸರಕಾರದ ಪರ ದನ್ಯವಾದ ಸಮರ್ಪಿಸಿದರು. ಮುಂದೆನೂ ಕೂಡ ಇಂತಹ ಕ್ರೀಡಾಪಟುಗಳು ಮತ್ತಷ್ಟು ಮಂಗಳೂರಿಗೆ ಬರಲಿ ಎಂದರು.
ವೇದಿಕೆಯಲ್ಲಿ ಬ್ಯಾಡ್ಮಿಂಟನ್ ಅಸ್ಸೋಸಿಯೇಷನ್ ನ ಸದಸ್ಯರು, ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್,ಎಂಎಲ್ ಸಿ ಐವನ್ ಡಿಸೋಜ, ಪುತ್ತೂರು ಶಾಸಕ ಅಶೋಕ್ ರೈ,ಮಂಜುನಾಥ ಭಂಡಾರಿ,ನಜೀರ್ ಅಹಮ್ಮದ್, ರಮನಾಥ ರೈ,ಅಭಯಚಂದ್ರ ಜೈ,ಲಾವಣ್ಯ ಬಳ್ಳಾಲ್,ಅರುಣ್ ಮಾಚಯ್ಯ,ಮನೋಜ್ ಕುಮಾರ್,ಹರಿಶ್ವಕುಮಾರ್,ಎಂ,ಎನ್ ಗಫೂರ್,ವಿಶ್ವಾಶ್ ದಾಸ್,ಸದಾಶಿವ ಉಳ್ಫಾಲ್,ಪದ್ಮರಾಜ್ ಪೂಜಾರಿ,ಹಾಗೂ ಇನ್ನಿತರರು ಉಪಸ್ಥಿತರಿದ್ದರು.


