ಮಂಗಳೂರು ; ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 26 ನೇ ದೇರೇಬೈಲ್ ನೈರುತ್ಯ ವಾರ್ಡಿನ ಚಿಲಿಂಬಿ ಗುಡ್ಡೆಹಿತ್ಲು ಪ್ರದೇಶದ ಪಂಚಲಿಂಗೇಶ್ವರ ದೇವಸ್ಥಾನ ಸಂಪರ್ಕಿಸುವ ರಸ್ತೆಯನ್ನು ಮಂಗಳೂರು ಮಹಾನಗ ಪಾಲಿಕೆಯ ಸದಸ್ಯ ಗಣೇಶ್ ಕುಲಾಲ್ ನೇತೃತ್ವದಲ್ಲಿ ಸುಮಾರು 25 ಲಕ್ಷ ರೂ ವೆಚ್ಚದಲ್ಲಿ ಇಂದು ಶಾಸಕರಾದ ಡಿ.ವೇದವ್ಯಾಸ್ ಕಾಮತ್ ರವರು ಉಧ್ಘಾಟಿಸಿದರು.

ಬಳಿಕ ಮಾತನಾಡಿದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಈ ರಸ್ತೆ ಚಿಲಿಂಬಿ ಯಿಂದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ,ಲೇಡಿಹಿಲ್ ಉರ್ವಾ ಮಾರ್ಕೆಟ್ ಸಂಪರ್ಕಿಸಲು ಸುಲಭವಾಗಿದೆ. ಈ ರಸ್ತೆ ಅಗಲೀಕರಣಕ್ಕೆ
ಭೂಮಾಲಿಕ ವ್ಯಾಜ್ಯವಿದ್ದು ಬಹಳ ಸೌಹಾರ್ದತೆಯಿಂದ ನಾನು ಹಾಗೂ ಸ್ಥಳೀಯ ಪಾಲಿಕೆ ಸದಸ್ಯ ಪರಿಶ್ರಮ ವಹಿಸಿದ್ದಾರೆಂದು ತಿಳಿಸಿದರು.ಈ ರಸ್ತೆ ಅಭಿವೃದಿ ಪಡಿಸಲು 4೦ ವರ್ಷದಿಂದ ಆಗದಂತಹ ಪರಿಸ್ಥಿತಿಯಿದ್ದು ಗಣೇಶ್ ಕುಲಾಲ್ ರವರು ಕಳೆದ ಹಲವಾರು ವರ್ಷಗಳಿಂದ ಆಗದಂತಹ ಕಾರ್ಯವನ್ನು ಮಾಡಿ ತೋರಿಸಿದ್ದಾರೆಂದು ಶ್ಲ್ಯಾಘಿಸಿದರು. ಅವರ ಪ್ರಾಮಾಣಿಕ ಸೇವೆಗೆ ಮತ್ತೆ ಅಭಿನಂದಿಸಿದರು.ಈ ಜಾಗದಲ್ಲಿ ನಾಲ್ವರು ಮಾಲಕರಿದ್ದು ಕೋರ್ಟು ಕಚೇರಿಯ ಮೊರೆಹೋಗಿದ್ದರು.ಈ ಬಗ್ಗೆ ಸ್ಥಳೀಯ ನಿವಾಸಿಗಳು ನನ್ನನ್ನು ಸಂಪರ್ಕಿಸಿದ್ದು ಭೂಮಾಲಕರ ಬಳಿ ಮಾತನಾಡಿದ ಮೇಲೆ ಎಲ್ಲಾಕ್ಕೂ ಇತಿಶ್ರೀ ನಡೆಯಿತು ಎಂದರು. ಸರಕಾರದ ನಿಯಮದ ಪ್ರಕಾರ ಅಭಿವೃದ್ಧಿ ಪಡಿಸಲು ಸಹಕರಿಸಿದ ಭೂಮಾಲಕರಿಗೆ ಫಾರಂ ಓಫ್ ಸರ್ಟಿಫಿಕೇಟ್ TDR ನೀಡಿ ಸರಕಾರ ಅವರು ಬಿಟ್ಟಂತಹ ಜಾಗವನ್ನು ಅಳತೆ ಮಾಡಿ ಅವರು ಬಿಟ್ಟಂತಹ ಜಾಗವನ್ನು ಕಳೆದು ಹಾಗೂ ಉಳಿದ ಜಾಗಕ್ಕೆ ಡಾಕ್ಯುಮೆಂಟ್ ತಯಾರಿ ಮಾಡುವಂತಹ ಕೆಲಸ ಮಾಡಿದೆ ಎಂದರು. ರೀತಿಯ ರಸ್ತೆಗಳು TDR ಮುಖಂತರ ಅಭಿವೃದ್ಧಿ ಗೊಂಡದ್ದು ಮಂಗಳೂರಿನಲ್ಲಿ ಮಾತ್ರ ಎಂದು ಹೇಳಿದರು.ಹಲವಾರು ವರ್ಷಗಳಿಂದ ಬೇಡಿಕೆಯಲ್ಲಿದ್ದ ರಸ್ತೆಯ ಉದ್ಘಾಟನೆಯ ಖುಶಿಯಲ್ಲಿದ್ದು ಈ ರಸ್ತೆಗೆ ಬ್ರಹ್ಮಶ್ರೀ ಎಂದು ಹೆಸರಿಟ್ಟು ಪಂಚಲಿಂಗೇಶ್ವರ ಎಂದು ನಾಮಕರಣ ಮಾಡಿ ಉದ್ಘಾಟನೆ ಮಾಡಿದ್ದೂ ಸಂತೋಷದ ವಿಚಾರ ಎಂದರು.ಸಾರ್ವಜನಿಕರ ಸಹಕಾರದೊಂದಿಗೆ ಮಂಗಳೂರು ಬೆಳೆದಿದ್ದು ಈ ರಸ್ತೆಗೆ ಜಾಗವನ್ನು ಬಿಟ್ಟ ದಾನಿಗಳನ್ನು ಮತ್ತೊಮ್ಮೆ ಕೈಜೋಡಿಸಿ ಅಭಿನಂದಿಸಿದರು
ಸಾರ್ವಜನಿಕ ಸಂಪರ್ಕಕ್ಕೆ ರಸ್ತೆಗಾಗಿ ಭೂಮಿ ದಾನ ಮಾಡಿದ ಮಾಲಕರಿಗೆ ಅಭಿನಂದಿಸಿ ವಜ್ರಾಕ್ಷ ರವರನ್ನು ಸನ್ಮಾನಿಸಿದರು ಇನ್ನೂ ಮೂವರು ಈ ಜಾಗದ ಮಾಲಕರಿದ್ದು ಅವರ ಮನೆಗೆ ಸಂಪರ್ಕಿಸುವ ಕಾರ್ಯವನ್ನು ಸ್ಥಳೀಯರು ನಡೆಸಲಿದ್ದಾರೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಉದಯ ಪೂಜಾರಿ ಬಲ್ಲಾಳ್ ಬಾಗ್ ,ಮಲರಾಯ ದೇವಸ್ಥಾನದ ಅಧ್ಯಕ್ಷರು,ಪಂಚಲಿಂಗೇಶ್ವರ ದೇವಸ್ಥಾನದ ಪ್ರಮುಖರು,ದಾಮೋಧರ್ ,ಮಹಾಲಕ್ಷ್ಮಿ ಫ್ರೆಂಡ್ಸ್ ನ ಪ್ರಮುಖರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.