Monday, March 16, 2026
Flats for sale
Homeಜಿಲ್ಲೆಮಂಗಳೂರು : ಚಿನ್ನವನ್ನು ಗುದದ್ವಾರದಲ್ಲಿ ಬಚ್ಚಿಟ್ಟು ಸಾಗಾಟಮಾಡುತಿದ್ದ ಇಬ್ಬರ ಬಂಧನ.

ಮಂಗಳೂರು : ಚಿನ್ನವನ್ನು ಗುದದ್ವಾರದಲ್ಲಿ ಬಚ್ಚಿಟ್ಟು ಸಾಗಾಟಮಾಡುತಿದ್ದ ಇಬ್ಬರ ಬಂಧನ.

ಮಂಗಳೂರು : ಅಕ್ರಮವಾಗಿ ಸಾಗಿಸುತ್ತಿದ್ದ 98 ಲಕ್ಷ ಮೌಲ್ಯದ ಚಿನ್ನವನ್ನು ) ವಶಕ್ಕೆ ಪಡೆದಿದ್ದ ಕಸ್ಟಮ್ಸ್ ಅಧಿಕಾರಿಗಳು ಇದೀಗ ಇಬ್ಬರನ್ನು ಬಂಧಿಸಿ 50 ಲಕ್ಷ ಮೌಲ್ಯದ ಚಿನ್ನವನ್ನು ಜಪ್ತಿ ಮಾಡಿದ ಘಟನೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಚಲನವಲನಗಳ ಮೇಲೆ ಅನುಮಾನ ಮೂಡಿದ ಹಿನ್ನೆಲೆ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದು ಹೆಚ್ಚಿನ ತಪಾಸಣೆ ನಡೆಸಿದ್ದಾರೆ. ಈ ವೇಳೆ ಗುದದ್ವಾರದಲ್ಲಿ ಚಿನ್ನ ಬಚ್ಚಿಟ್ಟು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ ಇವರು ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು.

ಒಬ್ಬ ಪ್ರಯಾಣಿಕ ಚಿನ್ನದ ಪೇಸ್ಟ್ ಅನ್ನು ಕ್ಯಾಪ್ಸೂಲ್​ಗಳಲ್ಲಿ ತುಂಬಿಸಿ ಗುದದ್ವಾರದಲ್ಲಿಟ್ಟು ಸಾಗಿಸುತ್ತಿದ್ದನು. ಮತ್ತೊಬ್ಬ ಪ್ರಯಾಣಿಕ ಚಾಕಲೇಟ್ ಬಾಕ್ಸ್​ನಲ್ಲಿ ಚಿನ್ನ ಅಡಗಿಸಿಟ್ಟು ಸಾಗಾಟ ಮಾಡುತ್ತಿದ್ದನು ಚಿನ್ನವನ್ನು ಪೇಸ್ಟ್ ರೂಪಕ್ಕೆ ಪರಿವರ್ತಿಸಿ ಅಕ್ರಮವಾಗಿ ಸಾಗಾಟಕ್ಕೆ ಯತ್ನಿಸಲಾಗಿಸುತಿದ್ದು ಇಬ್ಬರು ಪ್ರಯಾಣಿಕರಿಂದ ಒಟ್ಟು 50.93 ಲಕ್ಷ ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular