ಬಂಟ್ವಾಳ : ಚಾಲನೆಯಲ್ಲಿರುವಾಗ ಒಂದು ಸೆಕೆಂಡ್ ತಪ್ಪಿದರೆ ಸಾಕು ಇನ್ನಿಲ್ಲದ ಅನಾಹುತ ನಡೆಯುದಂತೂ ನಿಜ ಆದರೆ ಇಲ್ಲಿ ಚಾಲಕನಿಗೆ ಮೂರ್ಛೆ ರೋಗ ಬಂದು ಲಾರಿಯೊಂದು ಡಿವೈಡರ್ ಮೇಲೆ ಹತ್ತಿ ಸುಮಾರು ೧೦೦ ಮೀ.ನಷ್ಟು ಚಲಿಸಿ ನಿಂತಿರುವ ಘಟನೆ ರಾ.ಹೆ.೭೫ರ ತುಂಬೆ ಸಮೀಪ ನಡೆದಿದೆ.
ತಟ್ಟನೆ ಮೂರ್ಛೆ ರೋಗಕ್ಕೆ ಒಳಗಾದ ಚಾಲಕ ಕಂಟ್ರೋಲ್ ತಪ್ಪಿ ಲಾರಿಯೂ ಡಿವೈಡರ್ ಮೇಲೆ ಹತ್ತಿ ಸುಮಾರು 100 ಮೀ.ನಷ್ಟು ಚಲಿಸಿ ನಿಂತಿದೆ ಅದ್ರುಶ್ಟವಶಾತ್ ಮುಂಬದಿಯಲ್ಲಿ ಯಾವುದೇ ವಾಹನಗಳು ಬಾರದೆ ಹಿನ್ನೆಲೆ ಅತಿ ದೊಡ್ಡ ಅಂಹುತ ತಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸೀಟಿನಲ್ಲಿ ಬಿದ್ದಿದ್ದ ಚಾಲಕನನ್ನು ಸ್ಥಳೀಯರು ತುಂಬೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಡಿವೈಡರ್ ಮೇಲೆ ಅಳವಡಿಸಿದ್ದ ರಸ್ತೆ ಸೂಚನಾ ಫಲಕಕ್ಕೆ ಹಾನಿಯಾಗಿರುವುದು ಬಿಟ್ಟರೆ ಉಳಿದಂತೆ ಯಾವುದೇ ಹಾನಿ ಉಂಟಾಗಿಲ್ಲ. ಲಾರಿಯು ಬೆಂಗಳೂರು ಭಾಗದಿಂದ ಮಂಗಳೂರು ಭಾಗಕ್ಕೆ ಚಲಿಸುತ್ತಿತ್ತು ಎಂಬ ಮಾಹಿತಿ ದೊರೆತಿದೆ.