ಮಂಗಳೂರು : ಕಾಡಾನೆ ಜೊತೆ ಸೆಲ್ಫಿ ತೆಗೆಯಲು ಮುಗಿಬಿದ್ದ ಘಟನೆ ದಕ್ಷಿಣ ಕನ್ನಡದ ಚಾರ್ಮಾಡಿ ಘಾಟಿ ನಾಲ್ಕನೇ ತಿರುವಿನಲ್ಲಿ ನಡೆದಿದೆ.ಕಾಡಾನೆ ರಸ್ತೆ ಮದ್ಯೆ ಹೋಗುತ್ತಿರುವುದರಿಂದ ರಸ್ತೆ ಸಂಪೂರ್ಣ ಬಂದ್ ಆಗಿದ್ದು ಇದರಿಂದ ಕೆಲಹೊತ್ತು ಸಂಚಾರ ದಟ್ಟಣೆ ಉಂಟಾಯಿತು.
ಅದರಲ್ಲೂ ಕೆಲವು ಅಬ್ಬೇಪಾರಿ ಪ್ರವಾಸಿಗರು ಕಾಡನೆ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದುಇದರಿಂದ ಒಂಟಿ ಸಲಗ ರೊಚ್ಚಿಗೆದ್ದ ಘಟನೆ ಕೂಡ ಸಂಭವಿಸಿದೆ.
ಪ್ರವಾಸಿಗರ ಆಟಾಟೋಪದಿಂದ ಸಿಟ್ಟಿಗೆದ್ದ ಒಂಟಿ ಸಲಗ ಹೆದ್ದಾರಿ ಮಧ್ಯೆ ನಿಂತಿದ್ದು ಈ ಹಿನ್ನಲೆ ಚಾರ್ಮಾಡಿ ಘಾಟ್ ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ .ಕಾಡಾನೆ ಜೊತೆ ಪ್ರವಾಸಿಗರ ಆಟಾಟೋಪ ಕಂಡು ಸಾಮಾಜಿಕ ಜಾಲತಾಣದಲ್ಲಿ ಹಲವಾರು ಆಕ್ರೋಶ ಹೊರಹಾಕಿದ್ದಾರೆ.