ಮಂಗಳೂರು : ಬುಧವಾರ ಸಂಜೆ ಸುರತ್ಕಲ್ ಫ್ಲೈಓವರ್ ಬಳಿ ಚಲಿಸುತ್ತಿದ್ದ ಕಾರೊಂದು ಹೊತ್ತಿ ಉರಿದ ಪರಿಣಾಮ, ಕಾರು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.ಕಾರು ಚಲಾಯಿಸುತ್ತಿದ್ದ ಮಹಿಳೆ ಸಕಾಲದಲ್ಲಿ ಬೆಂಕಿಯನ್ನು ಗಮನಿಸಿ ಸುರಕ್ಷಿತವಾಗಿ ಹೊರಬರುವಲ್ಲಿ ಯಶಸ್ವಿಯಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶಾರ್ಟ್ ಸರ್ಕ್ಯೂಟ್ ಬೆಂಕಿ ಹರಡಿರಬಹುದೆಂದು ಪ್ರಾಥಮಿಕ ವರದಿಗಳು ತನಿಖೆಯಿಂದ ತಿಳಿದಿದೆ. ಬೆಂಕಿ ಹರಡುವ ಮೊದಲು ಅವರು ವಾಹನದಿಂದ ಇತರ ಬೆಲೆಬಾಳುವ ವಸ್ತುಗಳನ್ನುಹೊರತೆಗೆದಿದ್ದಾರೆ.
ಕಾರು ಸುಟ್ಟು ಕರಗಳಾಗಿದ್ದು ಅಗ್ನಿಶಾಮಕ ದಳ ಹಾಗೂ ಸುರತ್ಕಲ್ ಪೊಲೀಸರ ತುರ್ತು ಕರೆಯ ಬಳಿಕ ಸ್ಥಳಕ್ಕೆ ಆಗಿಸಿದ್ದು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.


