ಮಂಗಳೂರು : ಸಮೀಪದ ಗುರುಪುರ ಸೇತುವೆಯಿಂದ ನದಿಗೆ ಹಾರಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಗುರುಪುರ ನಿವಾಸಿ ಕೌಶಿಕ್ (26) ಮೃತಪಟ್ಟ ವ್ಯಕ್ತಿ. ಗುರುಪುರ ಸೇತುವೆಯ ಹಾರಿ ಆತ್ಮಹತ್ಯೆ ಗೈದಿದ್ದಾನೆಂದು ತಿಳಿದುಬಂದಿದೆ.
ಈತ ಮೂಡು ಪೆರಾರು ನಿವಾಸಿಯಾಗಿದ್ದು ಮಂಗಳೂರಿನಲ್ಲಿ ಬಸ್ಸು ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದರೆಂದು ತಿಳಿದಿದೆ. ಇಂದು ಸಂಜೆ ವೇಳೆ ಕೆಲಸ ಮಾಡಿ ವಾಪಾಸ್ ಮನೆಗೆ ಹೋಗುವ ಸಂದರ್ಭದಲ್ಲಿ ತನ್ನ ಹೋಂಡಾ ಡಿಯೋ ಸ್ಕೂಟರನ್ನು ಬದಿಯಲ್ಲಿ ಇಟ್ಟು ನದಿಗೆ ಹಾರಿರುತ್ತಾರೆ ಎಂದು ಮಾಹಿತಿ ದೊರೆತಿದೆ. ಸ್ಥಳಕ್ಕೆ ಆಗ್ಗಿಶಾಮಕ ದಳ ಆಗಮಿಸಿದ್ದು ಶೋಧ ಕಾರ್ಯ ನಡೆಸುತ್ತಿದ್ದಾರೆ.ಸ್ಥಳಕ್ಕೆ ಪೋಲಿಸರು ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರ.


