ಮಂಗಳೂರು : ಯುವತಿಯೊಬ್ಬಳು ಗುರುಪುರ ನದಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ .
ಯುವತಿಯ ಮೂಡುಬಿದಿರೆಯ ಅಲಂಕಾರ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ನವ್ಯ ಎಂದು ತಿಳಿದುಬಂದಿದೆ. ಮಾಹಿತಿಯ ಪ್ರಕಾರ ಆತ್ಮಹತ್ಯೆಗೆ ಪ್ರೇಮ ವೈಫಲ್ಯವೇ ಕಾರಣವೆಂದು ಹೇಳಲಾಗುತ್ತಿದೆ.ನವ್ಯಾ ಗುರುಪುರ ಮಳಲಿ ಸಮೀಪದ ಮೊಗರು ಎಂಬಲ್ಲಿನ ಯುವಕನೋರ್ವನನ್ನು ಪ್ರೀತಿಸುತ್ತಿದ್ದು ಆತ ನಿರಾಕರಿಸುತ್ತಿದ್ದನೆನ್ನಲಾಗಿದೆ.ಅದರೆ ಈ ಬಗ್ಗೆ ತನ್ನ ಗೆಳತಿಯ ಜೊತೆ ಹೇಳಿಕೊಂಡಿದ್ದಳೆಂದು ಮಾಹಿತಿ ದೊರೆತಿದೆ.
ರಸ್ತೆಯಲ್ಲಿ ಚಲಿಸುವ ಸಾರ್ವಜನಿಕರು ನೋಡುತ್ತಿರುವಾಗ ಇಬ್ಬರು ಹೆಣ್ಣುಮಕ್ಕಳು ತನ್ನಷ್ಟಕೆ ಮಾತನಾಡುತ್ತ ಮೋಜುಮಾಡುತ್ತಿದ್ದರೆಂದು ಎನಿಸಿದ್ದರು ಆದರೆ ಯುವತಿ ಮಾತನಾಡುತ್ತ ತನ್ನ ಗೆಳತಿಯ ಜೊತೆ ನೀರಿನ ಬಾಟಲ್ ಕೇಳಿದ್ದು ಗೆಳತಿ ಬಾಟಲಿ ತಂದುಕೊಡುವಷ್ಟರಲ್ಲಿ ನದಿಗೆ ಹಾರಿದ್ದಾಳೆ ಎಂದು ತಿಳಿದುಬಂದಿದೆ.


