Wednesday, April 8, 2026
Flats for sale
Homeಜಿಲ್ಲೆಮಂಗಳೂರು : ಗುರುಪುರ ತಿರುವಿನಲ್ಲಿ ಲಾರಿ -ಬಸ್ಸಿನ ನಡುವೆ ಭೀಕರ ಅಪಘಾತ,ಚಾಲಕ ಸೇರಿ ಹಲವರಿಗೆ ಗಂಭೀರ...

ಮಂಗಳೂರು : ಗುರುಪುರ ತಿರುವಿನಲ್ಲಿ ಲಾರಿ -ಬಸ್ಸಿನ ನಡುವೆ ಭೀಕರ ಅಪಘಾತ,ಚಾಲಕ ಸೇರಿ ಹಲವರಿಗೆ ಗಂಭೀರ ಗಾಯ.

ಮಂಗಳೂರು : ಗುರುಪುರ ಬಳಿಯ ಭಾಮಿ ಶಾಲೆಯ ಬಳಿ ಲಾರಿ ಹಾಗೂ ಬಸ್ಸಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಹಲವರಿಗೆ ಗಂಭೀರ ಗಾಯವಾದ ಘಟನೆ ವರದಿಯಾಗಿದೆ.

ಲಾರಿ ಚಾಲಕನ ಅಜಾಗರೂಕತೆಯಿಂದ ಈ ಅಪಘಾತ ಸಂಭವಿಸಿದೆ ಎಂದು ಮಾಹಿತಿ ದೊರೆತಿದೆ.ಬಸ್ಸು ಮಂಗಳೂರಿನಿಂದ ಮೂಡಬಿದರೆಗೆ ಹೊರಟಿದ್ದು ಲಾರಿ ಗುರುಪುರದಿಂದ ಮಂಗಳೂರಿನ ಕಡೆಗೆ ಹೊರಟಿತ್ತೆಂದು ಮಾಹಿತಿ ದೊರೆತಿದೆ.ಘಟನೆಯಲ್ಲಿ ಬಸ್ಸು ಹಾಗೂ ಲಾರಿ ಚಾಲಕನಿಗೆ ಗಂಭೀರ ಗಾಯಗಳಾಗಿದೆ .ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ೭ ಮಂದಿ ಪ್ರಯಾಣಿಕರಿಗೂ ಗಾಯಗಳಾಗಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ತೀವ್ರತೆಗೆ ಬಸ್ ನಜ್ಜುಗುಜ್ಜಾಗಿದೆ ಹಾಗೂ ಲಾರಿಯ ಮುಂಭಾಗ ಕೂಡ ಸಂಪೂರ್ಣ ಗುಜ್ಜಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular