ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ನಿರಂತರ ನಡೆಯುತ್ತಿದ್ದು ಇದಕ್ಕೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ವೈಫಲ್ಯ ಎತ್ತಿ ಕಾಣುತ್ತಿದೆ. ರಾತ್ರೋ ರಾತ್ರೆ ರಸ್ತೆಯಲ್ಲಿ ಲಾರಿಗಳು ಎಡೆಬಿಡದೆ ಚಲಿಸುತ್ತಿದ್ದು ಮಾಮೂಲಿ ವಸೂಲಿ ಮಾಡಿ ಎಲ್ಲಾ ಬಾಯಿ ಮುಚ್ಚಿ ಕುಳಿತಿದ್ದಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ಕೇವಲ ಕೆಲದಿನಗಳ ಹಿಂದೆ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಮೇಲ್ನೋಟಕ್ಕೆ ಕಂಡಂತೆ ಉಪಕರಣಗಳನ್ನು ವಶಪಡಿಸಿಕೊಂಡಿದ್ದರು ಆದರೆ ಅದೇ ಉಪಕರಣ ಬಳಸಿ ರಾತ್ರೋ ರಾತ್ರೆ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾರೆಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
ಮಲ್ಲೂರು ಇದ್ಮದಲ್ಲಿ ನಿರಂತರ ಮರಳುಗಾರಿಕೆ ನಡೆಯುತ್ತಿದ್ದು ಅಕ್ರಮ ಮರಳುಗಾರಿಕೆ ದೊರೆಗಳಾದ ರಶೀದ್ ಮತ್ತು ಹಸನಾಕ ರಿಂದ ಅಧಿಕಾರಿಗಳಿಗೆ ಕೋಟಿ ಕೋಟಿ ಕೊಟ್ಟಿದ್ದೇವೆ, ನಮ್ಮ ರೋಮ ಕೂಡ ಅಲ್ಲಾಡಿಸಲು ಆಗಲ್ಲ ಅಂತ ಊರು ಇಡೀ ದರ್ಪದಿಂದ ಮಾತನಾಡುತ್ತ ಬರುತ್ತಿದ್ದಾರೆಂದು ಮಾಹಿತಿ ದೊರೆತಿದೆ. ಮಾಹಿತಿ ಕೊಟ್ಟವರನ್ನುಎದೆಮುರಿಕಟ್ಟುತ್ತೆವೆಂದು ರಾಜಾರೋಷವಿಲ್ಲದೆ ಆರೋಪಿಗಳು ಮಾತನಾಡುತ್ತಿರುವುದು ಕೇಳಿಬರುತ್ತಿದೆ. ಇಂಥವರ ದರ್ಪಕ್ಕೆ ಅಂತ್ಯ ಯಾವಾಗ. ಸಾಮಾನ್ಯ ಜನರು ಅನ್ಯಾಯ ಕಂಡರು ಹೆದರಿ ಸಾಯುವ ರೀತಿ ಆಗಿದೆ. ಪೊಲೀಸ್ ಇಲಾಖೆ ಯಾಕೆ ಕಣ್ಣು ಮುಚ್ಚಿ ಕುಳಿತಿದೆ? ಜನರಿಗೆ ಕಾಣುವ ಈ ಅಕ್ರಮ ಅಧಿಕಾರಿಗಳಿಗೆ ಯಾಕೆ ಕಾಣುತ್ತಿಲ್ಲ? ಇನ್ನು ಪೊಲೀಸರು ಎಚ್ಚೆತ್ತುಕೊಳ್ಳದಿದ್ದರೆ ಇಲಾಖೆಯ ವಿರುದ್ಧ ಜನರು ಕಾನೂನು ಹೋರಾಟ ಹೋಗಬೇಕಾಗುತ್ತದೆ? ಎಂದು ಸಾಮಾಜಿಕಕಾರ್ಯಕರ್ತ ದೀಪುಶೆಟ್ಟಿಗಾರ್ ವಿಡಿಯೋ ಹರಿಯಬಿಟ್ಟಿದ್ದರು.
ಮಂಗಳೂರಿನಲ್ಲಿ ಅಕ್ರಮ ಮರಳುಗಾರಿಕೆ, ಸಕ್ರಮ ಮರಳುಗಾರಿಕೆಗೆ ಅಪ್ಪಣೆ ಕೊಡದೆ ಈ ರೀತಿ ಅಕ್ರಮ ಯಾಕೆ ನಡೆಸುತ್ತಿದ್ದೀರಾ? ಗಣಿ ಇಲಾಖೆ ನಿದ್ದೆ ಮಾಡುತ್ತಿದೆಯೇ? ಪೊಲೀಸರು ಜವಾಬ್ದಾರಿ ಮರೆತಿದ್ದಾರ? ಜಿಲ್ಲಾಧಿಕಾರಿಯವರೆ ಏನು ಹೇಳುತ್ತೀರಿ? ಎಂಬ ವಿಡಿಯೋ ವೈರಲ್ ಹಾಗಿದ್ದು ಜಿಲ್ಲೆಯ ಜನಸಾಮಾನ್ಯರು ಹಾಗೂ ಸ್ಥಳೀಯ ನಿವಾಸಿಗಳು ಕೂಡ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ನಿನ್ನೆ ರಾತ್ರಿ ಗುರುಪುರದ ಬಳಿ ಅಕ್ರಮ ಮರಳುಗಾರಿಕೆ ನಡೆಯುವುದರ ವಿಡಿಯೋವನ್ನು ಹಾಕಿದ್ದೆ. ರಾತ್ರಿ ಹೊತ್ತು ದ್ರಜ್ಜಿಂಗ್ ಮಿಷಿನ್ ಬಳಸಿ ಮರಳು ತೆಗೆಯುವಾಗ ಊರಿನ ಜನ ಸಮಸ್ಯೆ ಅನುಭವಿಸಿದ್ದರು. ವಿಡಿಯೋ ಹಾಕಿದ ಕೂಡಲೇ ಕೆಲ ಹೊತ್ತುಬಿಟ್ಟು ಗಣಿ ಇಲಾಖೆ ಅವರು ಅಲ್ಲಿಗೆ ಬಂದಿದ್ದಾರೆ. ಅವರು ಬಂದು ಹೋದ ನಂತರ ಮಾಫಿಯಾದ ದುಷ್ಟರು ಮತ್ತೆ ಕೆಲವು ಪುಡಾರಿಗಳನ್ನು ಯಾರಾದರೂ ವಿಡಿಯೋ ಮಾಡುತ್ತಾರೆ ನೋಡಲು ಬಿಟ್ಟು ಮತ್ತೆ ಮರಳು ತೆಗೆದಿದ್ದಾರೆ. ಅಧಿಕಾರಿಗಳು ಬಂದು ಹೋದ ನಂತರ ಮತ್ತೆ ಮರಳು ತೆಗೆಯುತ್ತಾರೆಂದರೆ ನಮ್ಮ ಗಣಿ ಇಲಾಖೆ ಯಾವ ಮಟ್ಟಕ್ಕೆ ಇದೆ ಎಂಬುದು ಪರಿಶೀಲಿಸಬೇಕಾಗುತ್ತದೆ. ಲೋಕಾಯುಕ್ತ ಇಲಾಖೆ ತನ್ನ ಜವಾಬ್ದಾರಿಯನ್ನು ಮುಂದೆ ಪಾಲಿಸಬೇಕು. ಗಣಿ ಇಲಾಖೆ ಸರಿ ಇರುತ್ತಿದ್ದರೆ ಈ ರೀತಿ ಸಮಸ್ಯೆ ಆಗುತ್ತಿರಲಿಲ್ಲ. ಬಜಪೆ ಪೊಲೀಸ್ ಸ್ಟೇಷನ್ ನ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂಬುದು ಕೂಡ ಅನುಮಾನವಾಗಿ ಉಳಿದಿದೆ. ರಸ್ತೆಯ ನಡುವೆ ಪರಿಶೀಲನೆಗೆ ನಿಲ್ಲಿಸುವ ಪೊಲೀಸರು ಅಕ್ರಮ ನಡೆಯುವಲ್ಲಿ ನಿಂತು ಮಾಹಿತಿ ಕೊಡಲು ಯಾಕೆ ಸಾಧ್ಯವಾಗುತ್ತಿಲ್ಲ? ಮೊದಲಿನ ಜಿಲ್ಲಾಧಿಕಾರಿಯವರಲ್ಲಿ ನಾನು ಅಕ್ರಮ ಮರಳಿನ ಬಗ್ಗೆ ಹೇಳಿದಾಗ ಸಿಸಿ ಕ್ಯಾಮೆರಾ ಹಾಕಿ ಕಂಟ್ರೋಲ್ ಮಾಡಿದ್ದರು. ಗುರುಪುರದಲ್ಲಿ ಕೋಟಿಗಟ್ಟಲೆಯ ಅವ್ಯವಹಾರ ಪ್ರತಿದಿನ ನಡೆಯುತ್ತಿದ್ದರು ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಯಾಕೆ ಮೌನ ಇದ್ದಾರೆ? ಇವರಿಗೆ ವಿಡಿಯೋ ಸಮೇತ ಕೊಟ್ಟರು ಕಾರ್ಯನಿರ್ವಹಿಸಲು ಯಾಕೆ ಆಗುತ್ತಿಲ್ಲ. ಕೆಲವು ಅಧಿಕಾರಿಗಳು ಹೋಗಿ ಯಾರು ವಿಡಿಯೋ ತೆಗೆಯದಂತೆ ಜಾಗೃತೆವಹಿಸಿ, ಜನ ನಿಲ್ಲಿಸಿ ಅಂತ ಹೇಳಿದ್ದಾರಂತೆ. ಸರಕಾರ ಇವರಿಗೆ ಸಂಬಳ ಕೊಡುವುದು ಇದೇ ಕೆಲಸ ಮಾಡಲಿಕ್ಕ. ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಅವರೇ ನಿಮಗೆ ಸಕ್ರಮ ಮರಳುಗಾರಿಕೆಗೆ ಅಪ್ಪಣೆ ಕೊಡಬಹುದಲ್ಲ. ಈ ನಾಟಕ ಯಾಕೆ? ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾದ ಸಿದ್ದರಾಮಯ್ಯವರೇ ನಿಮ್ಮ ಗಣಿ ಇಲಾಖೆ ಮಂಗಳೂರಿನಲ್ಲಿ ಸಂಪೂರ್ಣ ವಿಫಲವಾಗಿದೆ. ಅಧಿಕಾರಿಗಳಿಗೆ ಸಂಬಳ ಕೊಡುವುದು ಜನರ ರಕ್ಷಣೆಗೆ, ಅಕ್ರಮ ತಡೆಯಲು ಹೊರತು ಅಕ್ರಮ ಮಾಡುವವರಿಗೆ ಬೆನ್ನೆಲುಬಾಗಿ ನಿಲ್ಲಲು ಅಲ್ಲ. ಮಂಗಳೂರಿನ ಅಕ್ರಮ ಮರಳುಗಾರಿಕೆ ನಿಲ್ಲಿಸದ ಗಣಿ ಇಲಾಖೆ ವಿರುದ್ಧ ಲೋಕಾಯುಕ್ತ ಪೊಲೀಸ್ನವರು ಕ್ರಮ ಕೈಗೊಳ್ಳಬೇಕು. ಅದೇ ರೀತಿ ಮುಖ್ಯಮಂತ್ರಿಗಳು ಈ ಕಡೆ ಗಮನಕೊಡಬೇಕು. ಗೃಹ ಸಚಿವರಾದ ಪರಮೇಶ್ವರ್ ಸರ್ ಅವರೇ ನಿಮ್ಮ ಪೊಲೀಸ್ ಇಲಾಖೆ ಸಂಪೂರ್ಣ ವೈಫಲ್ಯವಾಗಿದೆ. ಬಜಪೆ ಪೊಲೀಸ್ ಸಿಬ್ಬಂದಿಗಳು ಏನು ಮಾಡುತ್ತಿದ್ದಾರೆ ಎಂಬ ಅನುಮಾನ ನಮಗೆ ಕಾಡುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ದೀಪುಶೆಟ್ಟಿಗಾರ್ ಸಾಮಾಜಿಕಜಾಲತಾಣದಲ್ಲಿ ವಿಡಿಯೋ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.