ಮಂಗಳೂರು : ಪೊಲೀಸ್ ಇಲಾಖೆಯಲ್ಲಿ ಚಿರಪರಿಚಿತ ವ್ಯಕ್ತಿ ನಗರದ ಉರ್ವ ಗುಪ್ತಚರ ಇಲಾಖೆ ಕಚೇರಿಯಲ್ಲಿ ಕರ್ತವ್ಯ ನಿರತರಾಗಿದ್ದ ವೇಳೆ ಗುಪ್ತಚರ ಇಲಾಖೆಯ ಸಿಬ್ಬಂದಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಸೆ.16ರ ಶನಿವಾರ ನಡೆದಿದೆ. ಮೃತರನ್ನು ಉರ್ವ ಮಾರಿಗುಡಿ ನಿವಾಸಿ ರಾಜೇಶ್ ಬಿ ಯು (45) ಎಂದು ಗುರುತಿಸಲಾಗಿದೆ.ಶನಿವಾರ ಮಧ್ಯಾಹ್ನ ಕರ್ತವ್ಯದ ವೇಳೆ ರಾಜೇಶ್‌ಗೆ ಎದೆನೋವು ಕಾಣಿಸಿಕೊಂಡಿದೆ. ಅವರು ವಿಶ್ರಾಂತಿ ತೆಗೆಯುವ ಸಂದರ್ಭದಲ್ಲಿ ಕುಸಿದುಬಿದ್ದರು. ರಾಜೇಶ್ 1993ರ ಬ್ಯಾಚ್‌ನವರಾಗಿದ್ದು, ಏಳು ವರ್ಷಗಳ ಸೇವಾವಧಿ ಉಳಿದಿತ್ತು. ಸುರತ್ಕಲ್ ಮತ್ತು ಪಣಂಬೂರು ಪೊಲೀಸ್ ಠಾಣೆಗಳಲ್ಲಿ ಸಿಬ್ಬಂದಿಯಾಗಿಯೂ ಕೆಲಸ ಮಾಡಿದ್ದರು.


