ಮಂಗಳೂರು ; ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಅವರ ನಿವಾಸ ಮತ್ತು ಕಚೇರಿ ಮೇಲೆ ನಗರ ಮತ್ತು ಚಿಕ್ಕಬಳ್ಳಾಪುರದ ಲೋಕಾಯುಕ್ತ ಅಧಿಕಾರಿಗಳ ತಂಡ ಗುರುವಾರ ಮುಂಜಾನೆ ದಾಳಿ ನಡೆಸಿದೆ.
ಕೃಷ್ಣವೇಣಿ ವಾಸವಿರುವ ವೆಲೆನ್ಸಿಯಾದಲ್ಲಿನ ಅಪಾರ್ಟ್ ಮೆಂಟ್ ಸಮುಚ್ಚಯಕ್ಕೆ ಮೂರು ವಾಹನಗಳಲ್ಲಿ ಆಗಮಿಸಿದ ಲೋಕಾಯುಕ್ತ ತಂಡ ಮನೆಯಲ್ಲಿ ಕೂಲಂಕುಷವಾಗಿ ತಪಾಸಣೆ ನಡೆಸಿತು.ಇದೇ ವೇಳೆ ನಗರದ ಮಲ್ಲಿಕಟ್ಟೆಯಲ್ಲಿರುವ ಕೃಷ್ಣವೇಣಿ ಅವರ ಕಚೇರಿ ಮೇಲೂ ತಂಡ ದಾಳಿ ನಡೆಸಿತು. ಎರಡು ತಿಂಗಳ ಹಿಂದೆ ವರ್ಗಾವಣೆಯಾದ ಬಳಿಕ ಮಂಗಳೂರಿನಲ್ಲಿ ಅಧಿಕಾರ ವಹಿಸಿಕೊಂಡಿದ್ದರು.
ಲೋಕಾಯುಕ್ತ ಎಸ್ಪಿ ನಟರಾಜ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ದಾಖಲೆಗಳು ಮತ್ತು ಇತರ ಆಸ್ತಿಗಳ ಪರಿಶೀಲನೆಯ ನಡೆಸುತ್ತಿದ್ದಾರೆ.