Wednesday, September 17, 2025
Flats for sale
Homeಜಿಲ್ಲೆಮಂಗಳೂರು : ಖೋಟಾನೋಟು ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ..!

ಮಂಗಳೂರು : ಖೋಟಾನೋಟು ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ..!

ಮಂಗಳೂರು : ಖೋಟಾನೋಟು ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತನನ್ನು ಬಿ.ಸಿ ರೋಡ್ ನಿವಾಸಿ ನಿಜಾಮುದ್ದೀನ್ ಅಲಿಯಾಸ್ ನಿಜಾಮ್ (33) ಎಂದು ತಿಳಿದಿದೆ.

ಈತನ ಮೇಲೆ 2023 ರಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಠಾಣಾ ಅ.ಕ್ರ 01/2023 ಕಲಂ 489 (ಬಿ) ಮತ್ತು (ಸಿ) ಜೊತೆಗೆ 34 ಭಾ.ದಂ.ಸಂ. ರಂತೆ ಪ್ರಕರಣ ದಾಖಲಾಗಿ ಮಾನ್ಯ ನ್ಯಾಯಲಯದಲ್ಲಿ ವಿಚಾರಣೆಯಲ್ಲಿದ್ದು ಮಾನ್ಯ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದಿದ್ದು ನಂತರ ಪ್ರಕರಣಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದನು. ನ್ಯಾಯಾಲಯವು ಈತನ ಮೇಲೆ 08 ಬಾರಿ ಬಂಧನ ವಾರಂಟ್ ಹೊರಡಿಸಿದ್ದು ಮಂಗಳೂರು ಪೂರ್ವ ಪೊಲೀಸ್ ಠಾಣಾ ಅಪರಾಧ ವಿಭಾಗದ ಸಿಬ್ಬಂದಿಗಳು ಹಾಗೂ ವಾರಂಟ್ ಜ್ಯಾರಿ ಸಿಬ್ಬಂದಿಗಳು ಈತನನ್ನು ೨೫ ರಂದು ಖಚಿತ ಮಾಹಿತಿ ಮೇರೆಗೆ ಉಪ್ಪಿನಂಗಡಿ ಬಳಿಯ ವಲಾಲು ಎಂಬಲ್ಲಿ ಬಂಧಿಸಿ್ದಾರೆ.,
ನ್ಯಾಯಾಲಯದ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ ಮೇರೆಗೆ ಆಪಾದಿತನ ವಿರುದ್ಧ ಕಲಂ: 269 BNS-2023 ಪ್ರಕಾರ ಕ್ರಮ ಕೈಗೊಂಡು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿಲಾಗಿದೆ.

ಮಂಗಳೂರು ಪೂರ್ವ ಪೊಲೀಸ್ ಠಾಣೆ ಅ.ಕ್ರ ಸಂಖ್ಯೆ 1/2023 ಕಲಂ: 489(A),(B)(C), r/w 34 IPC ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ಅ.ಕ್ರ ಸಂಖ್ಯೆ 128/2022 ಕಲಂ:392, 506, r/w 34 ಐಪಿಸಿಮಡಿವಾಳ ಪೊಲೀಸ್ ಠಾಣೆ ಅ.ಕ್ರ ಸಂಖ್ಯೆ 235/2022 ಕಲಂ: 489(A),(B), 420, r/w 34 ಐಪಿಸಿಕುಶಾಲ ನಗರ ಗ್ರಾಮಾಂತರ ಪೊಲೀಸ್ ಠಾಣೆ ಅ.ಕ್ರ ಸಂಖ್ಯೆ 147/2016 ಕಲಂ 398, 402 ಐಪಿಸಿ,ಮಂ. ಬರ್ಕೆ ಪೊಲೀಸ್ ಠಾಣೆ ಅ.ಕ್ರ ಸಂಖ್ಯೆ 93/2015 ಕಲಂ; 143, 323, 324 353, 427, 302 r/w 149 IPC ಪುತ್ತೂರು ನಗರ ಪೊಲೀಸ್ ಠಾಣೆ ಅ.ಕ್ರ ಸಂಖ್ಯೆ 112/2017 ಕಲಂ; 120(b), 341, 323, 307, 427, r/w 34 IPC ವಿಟ್ಲ ಪೊಲೀಸ್ ಠಾಣೆ ಅ.ಕ್ರ ಸಂಖ್ಯೆ 181/2015 ಕಲಂ 143, 147, 148, 341, 324, 307, 302, 120ಬಿ IPC (ಮಾನ್ಯ ನ್ಯಾಯಾಲಯದಲ್ಲಿ ಖುಲಾಸೆಗೊಂಡಿರುತ್ತದೆ).ಈತನ ಮೇಲೆ ದಾಖಲಾಗಿದ್ದ ವಿಚಾರಣ ಹಂತದಲ್ಲಿರುವ ಪ್ರಕರಣಗಳಾಗಿವೆ.

RELATED ARTICLES

LEAVE A REPLY

Please enter your comment!
Please enter your name here

Most Popular