ಮಂಗಳೂರು : ಮಂಗಳೂರಿನ ಅಂದ ಹೆಚ್ಚಿಸಲು ಕ್ಲಾಕ್ ಟವರ್ ನಿರ್ಮಿಸಲಾಗಿದೆ ಆದರೆ ನಿರ್ಮಾಣಗೊಂಡು ವರ್ಷಗಳೇ ಕಳೆದ್ರೂ ಇನ್ನು ಪರಿಪೂರ್ಣತೆಯನ್ನು ಕಂಡಿಲ್ಲ ದಿರುವುದೇ ಕೆದಕರ.ಹಗಲು ರಾತ್ರಿ ಎನ್ನದೇ ಈ ಕ್ಲಾಕ್ ಟವರ್ ಈಗ ನಿರಾಶ್ರಿತರ ತಾಣವಾಗಿದೆ. ಆದರೆ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿರುವುದು ಬೇಸರದ ಸಂಗತಿ. ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಗರದ ಪ್ರಮುಖ ಸ್ಥಳವಾದ ಕ್ಲಾಕ್ ಟವರ್ ಸುಂದರವಾಗಿ ನಿರ್ಮಾಣವಾಗಿದೆ. ಆದರೆ ಅವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಿದ ವೃತ್ತ ಹಾಗೂ ರಸ್ತೆ ವಿಭಾಜಕದಿಂದಾಗಿ ಜನರು ಹಲವು ಸಮಸ್ಯೆ ಎದುರಿಸುವಂತಾಗಿದೆ.
ಮಂಗಳೂರು ನಗರದ ಹಂಪನಕಟ್ಟೆಯ ಕ್ಲಾಕ್ ಟವರ್ ಸಮೀಪದ ಡಿವೈಡರ್‌ಗಳಲ್ಲಿ ಸೂಕ್ತ ರೀತಿಯಲ್ಲಿ ತಡೆಬೇಲಿಯನ್ನು ಅಳವಡಿಸದೇ ಹಲವು ಕಡೆಗಳಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ವಾಹನ ದಟ್ಟಣೆಯ ಸಮಯದಲ್ಲೂ ರಸ್ತೆ ದಾಟುತ್ತಿದ್ದು ಅಪಾಯಕಾರಿಯಾಗಿ ಗೋಚರಿಸುತ್ತಿದೆ, ರಸ್ತೆಯ ವಿಭಾಜಕ ಅವೈಜ್ಞಾನಿಕವಾಗಿರುವ ಕಾರಣ ಅನೇಕ ವಾಹನಗಳು ವಿಭಾಜಕಕ್ಕೆ ಡಿಕ್ಕಿ ಹೊಡೆದು ಅಪಾಯ ಸಂಭವಿಸಿದ್ದು ವಿಭಾಜಕ ಕೂಡಾ ಹಾನಿಯಾಗಿದೆ. ಇನ್ನು ಮಂಗಳೂರು ಯುನಿವರ್ಸಿಟಿಯಿಂದ ಕ್ಲಾಕ್ ಟವರ್ ತನಕದ ವಿಭಾಜಕದಲ್ಲಿ ಸರಿಯಾದ ತಡೆ ಬೇಲಿ ಕೂಡಾ ಅಳವಡಿಸದೆ ನಿರ್ಲಕ್ಷ್ಯ ತೋರಿಸಲಾಗಿದೆ. ಇದು ಅಪಘಾತಕ್ಕೆ ಆಹ್ವಾನ ನೀಡುತ್ತಿದ್ದು, ಯುನಿವರ್ಸಿಟಿ ವಿದ್ಯಾರ್ಥಿಗಳು, ವೆನ್ಲಾಕ್ ಆಸ್ಪತ್ರೆಗೆ ಬರುವ ರೋಗಿಗಳು ಸೇರಿದಂತೆ ನಿತ್ಯ ಸಂಚರಿಸುವ ಜನರಿಗೆ ಸಂಚಕಾರ ತಂದಿದೆ.
ದಕ್ಷಿಣ ಕ್ಷೇತ್ರ ದ ಶಾಸಕರಾದ ವೇದವ್ಯಾಸ ಕಾಮತ್ ಅವರು ಹಲವು ಬಾರಿ ಅಧಿಕಾರಿಗಳಿಗೆ ಕ್ಲಾಕ್ ಟವರ್ ಕಾಮಗಾರಿ ಪೂರ್ಣ ಗೊಳಿಸಲು ಹೇಳಿದರು ಅಧಿಕಾರಿಗಳು ಮಾತ್ರ ಶಾಸಕರ ಮಾತಿಗೆ ಕವಡೆ ಮಾತಿನ ಕೀಮತ್ತು ನೀಡುತ್ತಿಲ್ಲ.ಇದಕ್ಕೆ ಪ್ರಸ್ತುತ ಸರಕಾರದ ಪ್ರಭಾವಿ ನಾಯಕನ ಕೈವಾಡವಿದೆ ಎಂದು ಮಾಹಿತಿ ದೊರೆತಿದೆ. ರಸ್ತೆ ಮಧ್ಯ ರಿಂಗ್ ರೋಲ್ ಅಳವಡಿಸಲು ಆಗುತ್ತಿಲ್ಲ.ನಗರದ ಕೇಂದ್ರ ಭಾಗವನ್ನು ಸುಂದರ ಗೊಳಿಸಬೇಕಾದ ಯಾರದೋ ಒತ್ತಡಕ್ಕೆ ಮಣಿದು .1.5 ಕೋಟಿ ವೆಚ್ಚ ಮಾಡಿ ನಿರ್ಮಿಸಿದ ಕ್ಲಾಕ್ ಟವರ್ ಅಂದವನ್ನು ಕೆಡಿಸ ಹೊರಟಿದ್ದಾರೆ. ಅಲ್ಲಿರುವ ನೀರಿನ ಕಾರಂಜಿಯೂ ಮಾಯವಾಗಿದ್ದು ಇದೀಗ ಜನರ ತೆರಿಗೆಯ ದುಡ್ಡನ್ನು ಪೋಲುಮಾಡುತ್ತಿದ್ದರೆಂದು ಆಕ್ರೋಶ ಹೊರಹಾಕಿದ್ದಾರೆ.


