ಮಂಗಳೂರು ; ಕೌಟುಂಬಿಕ ಕಲಹದ ಹಿನ್ನೆಲೆ ತಂದೆ ಜೊತೆ ಪುಟ್ಟ ಮಗಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಪಣಂಬೂರು ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ಮಾಹಿತಿಯ ಪ್ರಕಾರ ರಾಜೇಶ್ ಎಂಬ ಅಂಬಿಕನಗರದ ವ್ಯಕ್ತಿ ಪಣಂಬೂರು ಬೀಚ್ ನಲ್ಲಿ ಮಗುವಿನ ಜೊತೆ ಆತ್ಮಹತ್ಯೆಗೆ ಯತ್ನಿಸಿದ್ದನು ವಿಡಿಯೋ ಕೂಡ ವೈರಲ್ ಹಾಗಿತ್ತು. ಬಳಿಕನೇಣು ಹಾಕಿ ಆತ್ಮಹತ್ಯೆಗೆ ಯತ್ನಿಸಿದ್ದು ಠಾಣೆಯ ಗುಪ್ತ ವಾರ್ತೆ ಮತ್ತು ಕ್ರೈಂ ಸಿಬ್ಬಂದಿಗಳನ್ನು ತಕ್ಷಣ ಕಾರ್ಯಪ್ರವೃತ್ತರಾಗಿ ಬಾಗಿಲು ಮುರಿದು ರಕ್ಷಿಸಿರುತ್ತಾರೆ.ನಂತರ ಈತನನ್ನು ಮತ್ತು ಮಗಳನ್ನು ಕಾವೂರು ಠಾಣೆಯ ಪೊಲೀಸರ ವಶಕ್ಕೆ ಒಪ್ಪಿಸಿಲಾಗಿದೆ.ಆದರೆ ತಂದೆ ಜೊತೆ ಮಗು ಆತ್ಮಹತ್ಯೆ ಗೆ ಯತ್ನಿಸುವ ವೇಳೆ ಮಗು ಆತ್ಮಹತ್ಯೆಮಾಡುವುದು ಬೇಡವೆನ್ನುವ ಮಾತು ಕರುಳು ಹಿಂಡಿ ಮನಕುಲಕುವಂತಿದೆ
ಪೊಲೀಸರು ಆತನನ್ನು ರಕ್ಷಿಸಲು ಸಮಯಕ್ಕೆ ಸರಿಯಾಗಿ ಅಲ್ಲಿಗೆ ಬಂದಿದ್ದರಿಂದ ಜೀವ ಉಳಿದಿದ್ದು ಪೋಲಿಸರ ಈ ಕಾರ್ಯಚರಣೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.


