ಮಂಗಳೂರು ; ಕೌಟುಂಬಿಕ ಕನ್ನಡ ಚಲನಚಿತ್ರ ಫೆ.21 ಕ್ಕೆ ತೆರೆಗೆ ಬರಲಿದೆ ಎಂದು ಚಿತ್ರದ ನಿರ್ದೇಶಕ ಕಿಶನ್ ಬಲ್ನಾಡ್ ರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪೋಷಕ ಕಲಾವಿದರಾದ ಪದ್ಮಜಾ ರಾವ್, ಬಲ ರಾಜ್ಯಾಡಿ, ನಾಗೇಶ್ ಮಯ್ಯ, ಪೃಥ್ವಿರಾಜ್, ಸುಧಾಕರ್ ಬನ್ನಂಜೆ, ಸೂರ್ಯಕಿರಣ್ ಧನಂಜಯ್, ಸಮೀಕ್ಷಾ, ಬೇಬಿ ರಿಧಿ ರವರು ಚಲನ ಚಿತ್ರದಲ್ಲಿ ಪಾತ್ರವಹಿಸಿದ್ದಾರೆ.
ಒಲವಿನ ಪಯಣ ಒಂದು ಹಳ್ಳಿಯ ಮಧ್ಯಮವರ್ಗದ ಕುಟುಂಬದ ಯುವಕನ ಬದುಕಿನ ಪಯಣದ ಕಥೆಯಾಗಿದ್ದು ಗೊತ್ತು ಗುರಿಯಿಲ್ಲದೆ ಪ್ರೀತಿ ಪ್ರೇಮ ಎಂದು ಓಡಾಡುತ್ತಿರುವ ಹುಡುಗನೊಬ್ಬ ತಾನು ಪ್ರೀತಿಸಿದ ಶ್ರೀಮಂತ ಹುಡುಗಿಯನ್ನು ಬಾಳಸಂಗತಿಯಾಗಿ ಪಡೆಯಲು ಅವಳ ತಂದೆಗೆ ಸವಾಲು ಹಾಕಿ ಕೊನೆಗೆ ಆ ಸವಾಲನ್ನು ಗೆದ್ದು ಅವಳನ್ನು ಮದುವೆಯಾಗಿ ಸುಖವಾಗಿ ಜೀವನ ಸಾಗಿಸಬೇಕೆನ್ನುವಾಗ ಅವನ ಜೀವನದಲ್ಲಿ ವಿಧಿಯಾಟದಿಂದ ನಡೆಯುವ ತಿರುವುಗಳು ಅವನ ಜೀವನವನ್ನೇ ಬದಲಾಯಿಸಿ ಬಿಡುತ್ತವೆ ಎಂಬುವುದು ಕಥೆ. ಅದರಿಂದ ಅವನು ಹೊರಬರಲು ಪಡುವ ಪರಿಪಾಟಲು ಈ ಚಿತ್ರದಲ್ಲಿ ಇಲ್ಲೊಂದು ನವಿರಾದ ಪ್ರೇಮಕತೆಯಿದ್ದು ಪ್ರೀತಿಸಿದವರನ್ನು ಕಳೆದುಕೊಳ್ಳುವ ನೋವಿದೆ… ಕಷ್ಟದಲ್ಲಿದ್ದಾಗ ನೆರವಾಗುವ ಸ್ನೇಹಿತರ ಬಳಗವಿದೆ.. ಪ್ರೀತಿಗಾಗಿ ಎಲ್ಲವನ್ನು ತ್ಯಾಗ ಮಾಡುವ ಹಠವಿದೆ.. ರಕ್ತಸಂಬಂಧದದ ನಂಟಿದೆ… ಬದುಕು ನಾವಂದುಕೊಂಡಂತೆ ಇಲ್ಲ ಎಂಬಷ್ಟು ತಿರುವುಗಳಿವೆ.. ಕೊನೆಗೆ ಆ ಯುವಕನ ಜೀವನದಲ್ಲಿ ದಿನಾಯಿತು ಎನ್ನುವುದೇ ಕಥೆಯ ಸಾರಾಂಶವಾಗಿದೆ.
ಚಲನಚಿತ್ರದ ನಿರ್ಮಾಪಕರಾಗಿ ನಾಗರಾಜ್ ಎಸ್.ಮುಳಗುಂದ, ನಿರ್ದೇಶಕನಾಗಿ ಕಿಶನ್ ಬಲ್ನಾಡ್,ಛಾಯಾಗ್ರಾಹಕರಾಗಿ ಜೀವನ ಗೌಡ,ಸಂಕಲನ ಕೀರ್ತಿರಾಜ್ ,ಕಲರಿಸ್ಟ್ ಗುರುಪ್ರಸಾದ್,ಎಸ್,ಎಫ್,ಎಕ್ಸ್ ನವೀನ್,ಸಂಗೀತ ಸಾಯಿ ಸರ್ವೇಶ್ ,ನಾಯಕ ನಟನಾಗಿ ಸುನೀಲ್ ,ನಾಯಕಿಯಾಗಿ ಕುಶಿ,ಪ್ರೀಯ ಹೆಗ್ಡೆ, ಹಾಗೂ ಪೋಷಕ ಕಲಾವಿದರಾಗಿ ಪದ್ಮಜಾ ರಾವ್,ಬಲ ರಾಜ್ವಡಿ,ನಾಗೇಶ್ ಮಯ್ಯ,ಪ್ರಥ್ವಿರಾಜ್,ಸುಧಾಕರ್ ಬನ್ನಂಜೆ,ಸೂರ್ಯಕಿರಣ್, ಧನಂಜಯ್,ಸಮೀಕ್ಷಾ ,ಬೇಬಿ ರಿಧಿ ಯವರು ನಟಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಚಲನಚಿತ್ರ ನಟ ನಾಗೇಶ್ ಮಯ್ಯ,ಕೀಶನ್ ಬಲ್ನಾಡ್,ನಾಗರಾಜ್ ಮುಳಗುಂಡ,ಕುಶಿ,ಹಾಗೂ ಪ್ರೀಯ ಹೆಗ್ಡಯವರು ಉಪಸ್ಥಿತರಿದ್ದರು.