ಮಂಗಳೂರು : ನಮ್ಮ ಸಂಸ್ಥೆಯು ಆಯೋಜಿಸುವ ವಿಶೇಷ ಪರಿಕಲ್ಪನೆಯ ಸಾಂತ್ವನದ ಸಂಚಾರ’ ಕಾರ್ಯಕ್ರಮದ ಈ ವರ್ಷದ ಸಂಚಾರಕ್ಕೆ ದಿನ ನಿಗದಿಪಡಿಸಲಾಗಿದ್ದು ಈ ಬಾರಿ ವಿಶೇಷ ಚೇತನ ಮಕ್ಕಳ ಜೊತೆ ನಮ್ಮ ಸಾಂತ್ವನದ ಸಂಚಾರ ಸಾಗಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಶರೀಫ್ ಅಬ್ಬಾಸ್ ವಳಾಲುರವರು ತಿಳಿಸಿದ್ದಾರೆ.
2023ರಲ್ಲಿ ಮೊದಲ ವರ್ಷದ ‘ಸಾಂತ್ವನದ ಸಂಚಾರ’ (A Day with Bedridden) ಮತ್ತು 2024ರಲ್ಲಿ ‘ಸಾಂತನದ ಸಂಚಾರ’ (A day with orphans) ಯಶಸ್ವಿಯಾಗಿ ನೆರವೇರಿತ್ತು. ಎರಡು ವರ್ಷಗಳ ಹಿಂದೆ ಹಾಸಿಗೆ ಪೀಡಿತರ ಜೊತೆ ಆರಂಭವಾದ ನಮ್ಮ ಸಾಂತ್ವನದ ಸಂಚಾರವು ಕಳೆದ ಬಾರಿ ಅನಾಥ ಮಕ್ಕಳ ಜೊತೆ ಮುಂದುವರಿದು ಈ ಬಾರಿ ವಿಶೇಷ ಚೇತನ ಮಕ್ಕಳ ಜೊತೆ ಸಾಗಲಿದೆ ಎಂದರು.
‘ಸಾಂತ್ವನದ ಸಂಚಾರ 3.0 (A Day with Special Kids)’ ಹೆಸರಿನ ಕಾರ್ಯಕ್ರಮ ಡಿ. ೦೭ ರ ಭಾನುವಾರ ಮಂಗಳೂರಿನಲ್ಲಿ ಜರುಗಲಿದೆ. ದಕ್ಷಿಣ ಕನ್ನಡ ಜಿಲ್ಲೆಯ 100 ವಿಶೇಷ ಚೇತನ ಮಕ್ಕಳನ್ನು ಸಾಂತ್ವನದ ಸಂಚಾರಕ್ಕೆ ಆಯ್ದುಕೊಂಡಿದ್ದು (ಎರಡು ಕೇಂದ್ರಗಳಿಂದ 90 ಮಕ್ಕಳು ಮತ್ತು ಹೊರಗಿನಿಂದ 10 ಮಕ್ಕಳು)ಇಬ್ಬರು ಮಕ್ಕಳಿಗೆ ಒಬ್ಬರಂತೆ 100 ಮಕ್ಕಳಿಗೆ 50 ಮಂದಿ ಕೇರ್ ಟೇಕರ್ಸ್ ನಿಯೋಜಿಸಲಾಗಿದೆ ಮತ್ತು CFM ಸಂಸ್ಥೆಯ 60 ಮಂದಿ ಸದಸ್ಯರು ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದರು.
4 ಬಸ್‌ಗಳಲ್ಲಿ ವಿಶೇಷ ಚೇತನ ಮಕ್ಕಳ ಸಂಚಾರ ನಡೆಯಲಿದ್ದು, ತುರ್ತು ಸೇವೆಗಾಗಿ ಎರಡು ಅಂಬುಲೆನ್ಸ್ ಇಬ್ಬರು ವೈದ್ಯರು ಮತ್ತು ಒಬ್ಬರು ಫಿಸಿಯೋ ಥೆರಪಿಸ್ಟ್ ಇರುತ್ತಾರೆ. ವಿಶೇಷ ಚೇತನ ಮಕ್ಕಳು ಮತ್ತು ಸಂಸ್ಥೆಯ ಸದಸ್ಯರಿಗೆ ಸಮವಸ್ತ್ರ, ಮಾದರಿ ಟಿ-ಶರ್ಟ್ ವಿತರಿಸಲಾಗುವುದು ಎಂದರು.
ಸಾಂತ್ವನದ ಸಂಚಾರ 3.0 (A Day with Special Kids) ಕಾರ್ಯಕ್ರಮದ ವಿವರ ಇಲ್ಲಿದೆ.
ಮೊದಲನೆಯದಾಗಿ 8.30 -9.30 AM – ಕುಂಟಿಕಾನ BMS ಹೋಟೆಲ್ನಲ್ಲಿ ಉಪಹಾರ, ಬಳಿಕ ಬ್ಯಾಂಡ್ ಸೆಟ್ ಮೂಲಕ ಗ್ರಾಂಡ್ ವೆಲ್ಕಮ್ ನಡೆಯಲಿದೆ.
ಪೆರೇಡ್ ಬಳಿಕ (Sunglasses & Caps) ಉಡುಗೊರೆ ವಿತರಣೆ ನಡೆಯಲಿದೆ. ಸಾಂತ್ಯನದ ಸಂಚಾರಕ್ಕೆ ಕಾರ್ಯಕ್ರಮಕ್ಕೆ ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಚಾಲನೆ ನೀಡಲಿದ್ದು 10 AM to 12.೩೦ಪಮ್ ವರೆಗೆ – ಪಿಲಿಕುಳ ನಿಸರ್ಗಧಾಮದಲ್ಲಿ ಸುತ್ತಾಟ ನಡೆಯಲಿದೆ .ಬಳಿಕ ಪಿಲಿಕುಳದಿಂದ ಜೆಪ್ಪು ಬೋಳಾರದಲ್ಲಿರುವ ಪಾಲೆಮಾರ್ ಗಾರ್ಡನ್‌ಗೆ ಪ್ರಯಾಣ ತಲುಪಲಿದ್ದಾರೆಂದು ತಿಳಿಸಿದ್ದಾರೆ.
ಮದ್ಯಾಹ್ನ 1 to 2 PM: ಪಾಲೇಮಾರ್ ಗಾರ್ಡನ್ ನಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಿದ್ದು .2.30 – 3.30PM ರ ವರೆಗೆ ಸ್ವಿಮ್ಮಿಂಗ್ ಪೂಲ್ ನಲ್ಲಿ ಚಟುವಟಿಕೆ, 3.30-6.30 PM ರ ವರೆಗೆ ಗೇಮ್ಸ್, ಮನರಂಜನಾ ಚಟುವಟಿಕೆ, ವಿವಿಧ ಸ್ಪರ್ಧೆ ಮತ್ತು ಡ್ಯಾನ್ಸ್ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ಲೈವ್ ಪಿಜ್ಜಾ ಕೌಂಟರ್,ಕ್ರ್ಯಾಕರ್ ಶೋ,ಪಾಪ್ಕಾರ್ನ್ ಮತ್ತು ಸ್ವೀಟ್ ಕಾರ್ನ್ ವಾಟರ್ ಬಲೂನ್ ಫನ್,ಡ್ರಾಯಿಂಗ್ ಜೋನ್ ,ಸೆಲ್ಫಿ ಕೌಂಟರ್ ನಂತಹ ಚಟುವಟಿಕೆಗಳು ನಡೆಯಲಿವೆ. ಸಂಜೆ 6:30 – 7:30 pm: ಸಮಾರೋಪ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.
ಕೋಸ್ಟಲ್ ಫ್ರೆಂಡ್ಸ್ ಮಂಗಳೂರು (ರಿ) ಸಂಸ್ಥೆಯ ಬಗ್ಗೆ ಕಿರುಪರಿಚಯ ಇಲ್ಲಿದೆ.
2017ರಲ್ಲಿ ಮೂರು ಮಂದಿ ಗೆಳೆಯರಿಂದ ರಚನೆಯಾದ ವಾಟ್ಸಪ್ ಗ್ರೂಪ್ ಕೋಸ್ಟಲ್ ಫ್ರೆಂಡ್ಸ್ ಮಂಗಳೂರು. ಇಂದು ನೋಂದಾಯಿತ ಟ್ರಸ್ಟ್ ಆಗಿ ಕಾರ್ಯಾಚರಿಸುತ್ತಿದೆ. ಸದ್ಯ 80 ಮಂದಿ ಸದಸ್ಯರನ್ನು ಒಳಗೊಂಡಿರುವ ಕೋಸ್ಟಲ್ ಫಂಡ್ಸ್ ಮಂಗಳೂರು (ರಿ) ದಕ್ಷಿಣ ಕನ್ನಡ ಜಿಲ್ಲೆಯ ಉತ್ಸಾಹಿ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಅಬುಧಾಬಿಯಲ್ಲಿ ನೆಲೆಸಿರುವ ಪುತ್ತೂರಿನ ಪರ್ಲಡ್ಕ ನಿವಾಸಿ ಸಿರಾಜುದ್ದೀನ್ ಪರ್ಲಡ, ಸ್ಥಾಪಕರು, ಷರೀಫ್ ಅಬ್ಬಾಸ್ ವಳಾಲು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
CFM ವಾಟ್ಸಪ್ ಗ್ರೂಪಿನ ನಿಯಮ ಪ್ರಕಾರ ಅಪ್ಪಿತಪ್ಪಿ ಮೆಸೇಜ್ ಡಿಲೀಟ್ ಮಾಡಿದರೆ ಅದಕ್ಕೆ 100 ರೂ. ದಂಡ ಪಾವತಿಸಬೇಕು. ಸಾಮಾಜಿಕ ಮಾಧ್ಯಮದಲ್ಲಿ ಬಹಳ ಪ್ರಬುದ್ಧರಾಗಿರಬೇಕು ಎಂಬ ಪ್ರಾಯೋಗಿಕ ತರಬೇತಿ ಇದರ ಮುಖ್ಯ ಉದ್ದೇಶ ಈ ದಂಡವು ಹತ್ತು ಸಾವಿರ ರೂಪಾಯಿ ದಾಟಿದರೆ ಅದನ್ನು ಸಮಾಜದ ಬಡ ಬಗ್ಗರಿಗೆ ದಾನವಾಗಿ ನೀಡಲಾಗುತ್ತದೆ. ಇದು ನಾವು ಮಾಡುವ ಸೇವಾಕಾರ್ಯದ ಒಂದು ಸಣ್ಣ ತುಣುಕು ಮಾತ್ರ.CFM ಸಂಸ್ಥೆ ಸಾಮಾಜಿಕ, ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿ ಕೆಲಸ ನಿರ್ವಹಿಸುತ್ತಿದೆ. ರಕ್ತದಾನ, ಮೆಡಿಕಲ್ ಬೆಡ್ ಮತ್ತು ವೀಲ್ಡ್ ಚೇರ್ ವಿತರಣೆ ಇತ್ಯಾದಿ ದೊಡ್ಡ ಪ್ರಮಾಣದ ಸೇವೆಯನ್ನು ಸದ್ದಿಲ್ಲದೆ ಮಾಡುತ್ತಿದೆ. ಸಾಮಾಜಿಕ ಬದ್ಧತೆಯುಳ್ಳ ನಮ್ಮ ಹೆಚ್ಚಿನ ಸದಸ್ಯರು ವೈಯಕ್ತಿಕವಾಗಿ ಮತ್ತು ಇತರೆ ಸೇವಾ ಸಂಸ್ಥೆಗಳ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ನಮ್ಮ ಸಂಸ್ಥೆಯು ಪ್ರತಿ ವರ್ಷ ಸದಸ್ಯರಿಗಾಗಿ ಸ್ನೇಹ ಸಮ್ಮಿಲನ, ಕುಟುಂಬ ಸಮ್ಮಿಲನ, ಕ್ರಿಕೆಟ್ ಪಂದ್ಯಾಕೂಟ, ಗ್ರಾಮೀಣ ಕ್ರೀಡೆಗಳನ್ನು ನಡೆಸಿಕೊಂಡು ಬರುತ್ತಿದೆ. 2023ರಿಂದ ಸಾಂತ್ವನದ ಸಂಚಾರ ಎಂಬ ಅದ್ಭುತ ಪರಿಕಲ್ಪನೆಯ ಕಾರ್ಯಕ್ರಮ ಆರಂಭಿಸಿ ಪ್ರತಿವರ್ಷ ಅದನ್ನು ಮುಂದುವರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಸೌಕತ್ ಆಲಿ,ಸಾಂತ್ವನ ಸಂಚಾರ ಸಂಚಾಲಕ ಅಫ್ತಾಭ್ ಬಸ್ತಿಕಾರ್,ಸಹ ಕಾರ್ಯದರ್ಶಿ ಜುನೈದ್ ಬಂಟ್ವಾಳ,ಹಾಗೂ ಸಮೀರ್ ಲಕ್ಕಿಸ್ಟಾರ್ ರವರು ಉಪಸ್ಥಿತರಿದ್ದರು.


