Saturday, March 7, 2026
Flats for sale
Homeಜಿಲ್ಲೆಮಂಗಳೂರು : ಜಿಲ್ಲೆಯಲ್ಲಿ ನಡೆದ ಕೋಮು ಹತ್ಯೆ ಬಗ್ಗೆ ವರದಿ ನೀಡಲು ಕೆಪಿಸಿಸಿ ನಿಯೋಗ ಮಂಗಳೂರಿಗೆ...

ಮಂಗಳೂರು : ಜಿಲ್ಲೆಯಲ್ಲಿ ನಡೆದ ಕೋಮು ಹತ್ಯೆ ಬಗ್ಗೆ ವರದಿ ನೀಡಲು ಕೆಪಿಸಿಸಿ ನಿಯೋಗ ಮಂಗಳೂರಿಗೆ ಭೇಟಿ..!

ಮಂಗಳೂರು : ಮಂಗಳೂರು ಕೋಮು ಹತ್ಯೆ ವರದಿ ನೀಡಲು ಕೆಪಿಸಿಸಿ ನಿಯೋಗ ಭೇಟಿನೀಡಿದೆ. ಜನಪ್ರತಿನಿಧಿಗಳು ಅಭಿವೃದ್ಧಿ ಚರ್ಚೆ ಮಾಡಬೇಕು, ಅದು ಬಿಟ್ಟು ಗೊಂದಲಮೂಡಿಸುತ್ತಿದ್ದಾರೆ. ವಿದ್ಯಾರ್ಥಿಗಳು ಇಲ್ಲಿಗೆ ಬರಲು ಹೆದರುತ್ತಿದ್ದು , ಬಂಡವಾಳ ಹೂಡಿಕೆಗೂ ಹೆದರುತ್ತಿದ್ದಾರೆ. ಜನಪ್ರತಿನಿಧಿಗಳು ಎಲ್ಲರಿಗೂ ಸಮವಾಗಿ ಕೆಲಸ ಮಾಡಬೇಕು. ತಪ್ಪನ್ನು ತಪ್ಪು ಅಂತ ಹೇಳಬೇಕು, ಅದು ಬಿಟ್ಟು ವೈಭವೀಕರಿಸಬಾರದು. ಮಂಗಳೂರು ಏಳು ಗಂಟೆ ಹೊತ್ತಿಗೆ ಬಂದ್ ಆದ್ರೆ ಯಾರು ಬರ್ತಾರೆ. ಜನಪ್ರತಿನಿಧಿಗಳು ಸಮಸ್ಯೆ ಇದ್ದರೆ ವಿಧಾನಸೌಧದಲ್ಲಿ ಚರ್ಚೆ ಮಾಡಿ. ಅದು ಬಿಟ್ಟು ಹೊರಗೆ ಚರ್ಚೆ ಮಾಡಿದ್ರೆ ಸಮಸ್ಯೆ ಆಗುತ್ತದೆಂದು ಮಂಗಳೂರಿನಲ್ಲಿ ನಿಯೋಗದ ಸದಸ್ಯ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

ಬಳಿಕ ಮಾತನಾಡಿದ ಕೆಪಿಸಿಸಿ ಉಪಾಧ್ಯಕ್ಷ ವಿ.ಆ‌ರ್.ಸುದರ್ಶನ್ ನಾವು ಎಲ್ಲರ ಜೊತೆಗೆ ಸಮಾಲೋಚನೆ ಮಾಡಿದ್ದೇವೆ. ರಾಜ್ಯದ ಪ್ರಗತಿಗೆ ದ.ಕ ಜಿಲ್ಲೆಯ ಕೊಡುಗೆ ಬಹಳ ದೊಡ್ಡದಿದೆ. ಇತ್ತೀಚಿನ ಘಟನೆಗಳಿಗೆ ಕೋಮು ಬಣ್ಣ ಕೊಡುವ ಕೆಲಸಗಳು ಆಗ್ತಿದೆ. ಯಾರೋ ದುಷ್ಕರ್ಮಿಗಳು 2% ಜನರು ದುಷ್ಕೃತ್ಯ ಎಸಗುತ್ತಿದ್ದಾರೆ. ಉಳಿದ 8% ಜನರು ಅದರ ಲಾಭವನ್ನು ಪಡೀತಿದಾರೆ. ಆದರೆ 90% ಜನರು ಯಾವುದರಲ್ಲೂ ಇಲ್ಲದವರಾಗಿದ್ದಾರೆ. ಹೀಗಾಗಿ ನಾವು ಇಲ್ಲಿನ ಅಧಿಕಾರಿಗಳ ಹಾದಿಯಾಗಿ ಎಲ್ಲರ ಜತೆ ಸಮಾಲೋಚನೆ ಮಾಡಿದ್ದೇವೆ. ನಾವು ಇನ್ನೂ ವರದಿ ಫೈನಲ್ ಮಾಡಿಲ್ಲ, ಉಡುಪಿ-ಉತ್ತರ ಕನ್ನಡ ಜಿಲ್ಲೆಗಳಿಗೂ ಹೋಗ್ತಾ ಇದ್ದು ಅದರೆ ಅದಕ್ಕೂ ಮುನ್ನ ಸಿಎಂ, ಡಿಸಿಎಂ, ಕಾನೂನು ಸಚಿವರು, ಗೃಹ ಸಚಿವರ ಭೇಟಿಯಾಗುತ್ತಿದ್ದೇವೆಂದು ಹೇಳಿದರು.

ಸೋಮವಾರ ಅಥವಾ ಮಂಗಳವಾರ ಮಧ್ಯಂತರ ವರದಿ‌ ಸಲ್ಲಿಕೆ ಮಾಡುತ್ತಿದ್ದು . ಜಿಲ್ಲೆಯ ಸ್ಥಿತಿಗತಿ ಹಾಗೂ ಇತರೆ ವಿಷಯಗಳ ಬಗ್ಗೆ ವರದಿ ಸಲ್ಲಿಸುತ್ತೇವೆಂದರು ಇನ್ನೊಂದಷ್ಟು ಮಾಹಿತಿ ಮತ್ತು ವಿಚಾರಗಳನ್ನು ಸಂಗ್ರಹ ಮಾಡಲಿದ್ದೇವೆ ಬಳಿಕ ನಾವು ಪೂರ್ಣ ವರದಿ ತಯಾರಿಸಿ ಸರ್ಕಾರಕ್ಕೆ ವರದಿ ಕೊಡ್ತೇವೆ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಐವನ್ ಡಿಸೋಜಾ,ಪದ್ಮರಾಜ್ ರಾಮಯ್ಯ,ಮಂಜುನಾಥ್ ಭಂಡಾರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular