ಮಂಗಳೂರು : ಜನವರಿ 17೭ ರಂದು ಉಳ್ಳಾಲ ತಾಲೂಕಿನ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ನ ಶಾಖೆಗೆ ನುಗ್ಗಿದ 5 ಮಂದಿಯ ತಂಡ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ, ನಗದನ್ನು ದರೋಡೆಗೈದ ಘಟನೆ ವರದಿಯಾಗಿತ್ತು . ಬ್ಯಾಂಕ್ ಶಾಖೆಗೆ ನುಗ್ಗಿದ ಐವರು ಮಾಸ್ಕ್ ಧಾರಿಗಳು ಒಳಗಿದ್ದ ಐವರು ಸಿಬ್ಬಂದಿಗೆ ಬಂದೂರು, ತಲವಾರು ತೋರಿಸಿ 13 ಕೋಟಿ 50 ಲಕ್ಷ ರೂ.ಗೂ ಅಧಿಕ ಬೆಲೆ ಬಾಳುವ ಚಿನ್ನಾಭರಣ, 5 ಲಕ್ಷ ರೂಪಾಯಿ ನಗದನ್ನು ದರೋಡೆಗೈದು ಪರಾರಿಯಾಗಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೊಸೈಟಿಯ ಮ್ಯಾನೇಜರ್ ವಾಣಿ ಎಲ್ ರವರು ನೀಡಿದ ದೂರಿನಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮೋ ನಂಬ್ರ : 07/2025 ಕಲಂ: 126(2),127(7).309(2),309(4), 310(2).351(2),324(1), 3 3(5) 2.2.2-2023 5003(1).4.25 (1B)(b),27 Indian Arms Act 1959 ಪ್ರಕರಣ ದಾಖಲಾಗಿತ್ತು ಬಳಿಕ ತಮಿಳುನಾಡು ರಾಜ್ಯದ ವಾಸಿಗಳಾದ ಮುರುಗಂಡಿ ತೇವರ್ ಕುಮಾರ್,ಜೋಶ್ವ ರಾಜೇಂದ್ರನ್,ಕಣ್ಣನ್ ಮಣಿ ಎಂ.ಷಣ್ಣುಗಸುಂದರಂ. ಹಾಗೂ ಸ್ಥಳಿಯ ನಿವಾಸಿಗಳಾದ ಶಶಿ ತೇವರ್ ಭಾಸ್ಕರ ಬೆಳ್ಳಪಾಡ ಮತ್ತು ಕೆ.ಮೊಹಮ್ಮದ್ ನಝೀರ್ ಎಂಬ ಆರೋಪಿಗಳನ್ನು ಬಂಧಿಸಿದ್ದರು
ದರೋಡೆಯಾದ 18 ಕೆ.ಜಿ 360.302 ಗ್ರಾಂ ಚಿನ್ನಾಭರಣ ಮತ್ತು ನಗದನ್ನು (ಮೌಲ್ಯ ರೂ 13 ಕೋಟಿ 50 ಲಕ್ಷ) ಸ್ವಾಧೀನಪಡಿಸಿ ಪ್ರಕರಣದಲ್ಲಿ ತನಿಖೆ ಪೂರೈಸಿ ಆರೋಪಿಗಳ ವಿರುದ್ಧ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಲಾಗಿತ್ತು.
ಈ ಪ್ರಕರಣದಲ್ಲಿ ಸ್ವಾಧೀನಪಡಿಸಿಕೊಂಡ 18 ಕೆ.ಜಿ 360.302 ಗ್ರಾಂ ಚಿನ್ನಾಭರಣ ಮತ್ತು ನಗದು (ಮೌಲ್ಯ ರೂ 13 ಕೋಟಿ 50 ಲಕ್ಷ) ಗಳನ್ನು ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘ (ನಿ) ಸೊಸೈಟಿ ಕೆ.ಸಿ ರೋಡ್ ಶಾಖೆಯ ಮ್ಯಾನೇಜರ್ ಶ್ರೀಮತಿ ವಾಣಿ ರವರಿಗೆ ಬಿಡುಗಡೆಗೊಳಿಸುವಂತೆ ನ್ಯಾಯಾಲಯವು ಡಿಸ್ ಸಂಖ್ಯೆ 499/2025 ದಿನಾಂಕ ೦3 ರಂದು ಆದೇಶಿಸಿದೆ. ಈ ಆದೇಶಿಸಿದಂತೆ ಎಲ್ಲಾ ಚಿನ್ನಾಭರಣಗಳನ್ನು ಹಾಗೂ ನಗದನ್ನು ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಸಂಘ (ನಿ) ಕೆ.ಸಿ ರೋಡ್ ಶಾಖೆಯ ಮ್ಯಾನೇಜರ್ ಹಾಗೂ ಜಿ.ಪಿ.ಎದಾರರಾದ ಶ್ರೀಮತಿ ವಾಣಿ ಆಳ್ವ ರವರಿಗೆ 05 ರಂದು ವೀಡಿಯೋಗ್ರಾಫಿ ಮತ್ತು ಫೋಟೋಗ್ರಾಫಿ ಮಾಡಿ ಅಪ್ರೈಜ್ಹರ್ ರವರಿಂದ ಪರಿಶೀಲನೆಗೊಳಪಡಿಸಿ ತೂಕ ಮಾಡಿ ಪಂಚಾಯತುದಾರರಾದ ದಿವ್ಯರಾಜ್ ಮತ್ತು ವಿಕಾಸ್ ರವರ ಸಮಕ್ಷಮದಲ್ಲಿ ಮಹಜರು ಮುಖೇನ ಬಿಡುಗಡೆಗೊಳಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .


