ಮಂಗಳೂರು ; ಕೊಟೆಕಾರು ವ್ಯವಸಾಯ ಬ್ಯಾಂಕ್ ಪ್ರಕರಣಕ್ಕೆ ಸಂಬಂದಿಸಿದಂತೆ ನಾಲ್ವರನ್ನು ಬಂಧಿಸಿದ್ದು ಇನ್ನುಳಿದ ಅರೋಪಿಗಳ ಅತೀಶೀಘ್ರದಲ್ಲಿ ಬಂಧಿಯಾಗಲಿದ್ದಾರೆಂದು ನಗರ ಪೋಲಿಸ್ ಆಯುಕ್ತ ಅನುಪಮ್ ಅಗರ್ ವಾಲ್ ರವರು ತಿಳಿಸಿದ್ದಾರೆ.
ಸದ್ಯ ಮೂವರು ಆರೋಪಿಗಳು ಉತ್ತರ ಭಾರತ ಕಡೆ ಹೋಗಿದ್ದು,ನಮಗೆ ಅವರ ಮಾಹಿತಿ ಸಿಕ್ಕಿದೆ, ಬಂಧನ ಆಗುತ್ತೆ ಎಂದು ಹೇಳಿದರು.
ಸ್ಥಳೀಯ ಶಶಿ ಥೇವರ್ ಸೇರಿ ನಾಲ್ವರ ಬಂಧನ ಆಗಬೇಕಿದೆ,ಶಶಿ ಥೇವರ್ ಗೆ ಮಂಗಳೂರು ಚೆನ್ನಾಗಿ ಗೊತ್ತಿದೆ, ಇಲ್ಲೇ ಇದ್ದವನು ಅಂತ ಮುರುಗಂಡಿ ಹೇಳಿದ್ದಾನೆ ಆದರೆ ಆತ ಮೂಲತಃ ಮುಂಬೈ ಮೂಲದವನು ಅನ್ನೋ ಮಾಹಿತಿ ತಿಳಿದುಬಂದಿದೆ ಎಂದರು.
ಮುರುಗನ್ ಡಿ ಮುಂಬೈನಲ್ಲೂ ದರೋಡೆ ಮಾಡಿ 27 ಕೆ.ಜಿ ಚಿನ್ನ ಲೂಟಿ ಮಾಡಿದ್ದ ಯಶೋವಾ ರಾಜೇಂದ್ರ ಮೇಲೆ ದಕಾಯಿತಿ ಹಾಗೂ ಕೋಕಾ ಕೇಸ್ ಇದೆ. ಇದರಲ್ಲಿ ಮೊದಲು ಕಾರಿನ ಒರಿಜಿನಲ್ ನಂಬರ್ ಪ್ಲೇಟ್ ಟ್ರೇಸ್ ಮಾಡಿದ್ದು ದೊಡ್ಡ ಸುಳಿವು ಎಂದರು.
ಸದ್ಯ ಇದರಿಂದ 1600 ಗ್ರಾಹಕರ ಚಿನ್ನ ಮತ್ತೆ ಅವರಿಗೆ ಸೇರಿದೆ,ಮುಂಬೈ ಹಾಗೂ ತಮಿಳುನಾಡು ಪೊಲೀಸರು ಸಾಕಷ್ಟು ಸಹಕಾರ ಕೊಟ್ಟಿದ್ದಾರೆ,ತಮಿಳು ಬರುವ ನಮ್ಮ ಕೆಲವು ಸಿಬ್ಬಂದಿ ನಮಗೆ ತುಂಬಾ ಸಹಾಯ ಮಾಡಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.