ಮಂಗಳೂರು ; ಕೇರಳ ಅಂದರೆ ಹೀಗೆನೆ ಹೊಸ ಹೊಸ ಬಗೆಯ ಜನರಿಗೆ ಅಪಾಯಕಾರಿ ನೀಡುವಂತಹ ಸೋಂಕುಗಳನ್ನು ಎಲ್ಲಿಂದ ಸೃಷ್ಟಿ ಸುತ್ತಾರೋ ಗೊತ್ತಿಲ್ಲ ಆದರೆ ಚೀನಾದಲ್ಲಿ ಪತ್ತೆಯಾದ ಭಯಾನಕ ವೈರಸ್ ಗಳು ನಂತರದ ದಿನಗಳಲ್ಲಿ ಇಲ್ಲಿ ಅಂತೂ ಪತ್ತೆಯಾಗುತ್ತದೆ ಎಂಬುದು ಎಲ್ಲಾರಿಗೂ ತಿಳಿದ ವಿಚಾರ. ಕೇರಳದ ಗಡಿ ಭಾಗಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಸಮೀಪವಾಗಿರುವುದರಿಂದ ಕೇವಲ ಹೆಸರಿಗೆ ಮಾತ್ರಕ್ಕೆ ಯಾವುದೇ ಮುಂಜಾಗ್ರತಾ ಕ್ರಮ ವಹಿಸದೆ ಕಟ್ಟೆಚ್ಚರವಾಗಿದ್ದಾರೆಂದು ತಿಳಿದುಬಂದಿದೆ.
ನೆಗ್ಗೇರಿಯಾ ಫ್ಲೌಲೇರಿ ಹೆಸರಿನ ಅಪರೂಪದ ಹಾಗೂ ಅಪಾಯಕಾರಿ ಸೂಕ್ಷ್ಮಾಣು ಜೀವಿಯಿಂದ ಹರಡುವ ಅಪಾಯಕಾರಿ ಸೋಂಕು ನೇರೆ ರಾಜ್ಯ ಕೇರಳದಲ್ಲಿ ಪತ್ತೆಯಾಗಿದೆ. ಆದರೆ ಇಲ್ಲಿ ಅಪರೂಪದ ಮೆದುಳು ತಿನ್ನುವ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು ಈ ವರೆಗೆ ನಾಲ್ಕು ಮಕ್ಕಳು ಸೋಂಕಿಗೆ ಬಲಿಯಾಗಿದ್ದಾರೆ.
ಈ ಸೋಂಕು ಕಲುಷಿತ ಮಳೆ ನೀರಿನಲ್ಲಿ ಈಜಾಡಿದವರಲ್ಲಿ ಕಂಡು ಬಂದಿದೆ. ಹೀಗಾಗಿ ಮಳೆ ನೀರು ನಿಂತ ಹೊಂಡಗಳಲ್ಲಿ ,ಕಲುಷಿತ ನೀರಿನಲ್ಲಿ ಈಜಾಡದಂತೆ ಆರೋಗ್ಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಈ. ಬಗ್ಗೆ ಎಚ್ಚರವಹಿಸಿ ಸೋಂಕು ದಿನದಿಂದ ದಿನಕ್ಕೆ ಅತಿಹೆಚ್ಚು ವೇಗದಲ್ಲಿ ಹರಡುವ ಹಿನ್ನೆಲೆ ಕೇರಳ ಮುಖ್ಯಮಂತ್ರಿ ಅಧಿಕಾರಿಗಳನ್ನು ಕರೆದು ಸಭೆ ನಡೆಸಿದ್ದು ಸೋಂಕು ಹರಡದಂತೆ ತಡೆಯಲು ಕಲುಷಿತ ಜಲಮೂಲಗಳಲ್ಲಿ ಸ್ನಾನ ಮಾಡದಂತೆ ಸಲಹೆನೀಡಿದ್ದಾರೆ. ಹಾಗೂ ಈಜು ಕೊಳಗಳಿಗೆ ಸರಿಯಾದ ಕ್ಲೋರಿನೇಷನ್ ಮಾಡುವಂತೆ ಮಕ್ಕಳಿಗೆ ಜಾಕಾರೂಕರಾಗಿರಬೇಕೆಂದು ತಿಳಿಸಿದ್ದಾರೆ.


